ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET 2025)ಯ ತಾತ್ಕಾಲಿಕ ಅರ್ಹತಾ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನ.29ರಿಂದ ಡಿ.6ರವರೆಗೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 9.30ರಿಂದ ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ನಡೆಯಲಿದೆ. ಒಂದೊಂದು ವಿಷಯಕ್ಕೆ ಒಂದೊಂದು ದಿನ ನಿಗದಿ ಮಾಡಿದ್ದು, ಆ ಪ್ರಕಾರ ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಬಂದು ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ನಿಮ್ಮ ಮನೆಯಲ್ಲಿ ಗೆದ್ದಲುಗಳಿವ್ಯಾ.? ಹೀಗೆ ಮಾಡಿ ಮುಕ್ತಿ ಸಿಗುತ್ತೆ!
ಇದನ್ನು ಮಿಸ್ ಮಾಡದೇ ಓದಿ: ಇಂದಿನ (ನವೆಂಬರ್ 28) ಚಿನ್ನ, ಬೆಳ್ಳಿ ದರದ ವಿವರ ಹೀಗಿದೆ…!
ಇದನ್ನು ಮಿಸ್ ಮಾಡದೇ ಓದಿ: ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ನಿಗದಿತ ದಿನಾಂಕಗಳಂದು ಬರಲು ಸಾಧ್ಯವಾಗದ ಎಲ್ಲ ವಿಷಯಗಳ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಡಿ.8 ಮತ್ತು 9 ರಂದು ನಡೆಸಲಾಗುತ್ತದೆ. ಆ ದಿನಗಳಂದು ಪರಿಶಿಷ್ಟ ಜಾತಿಯ ಎ, ಬಿ, ಸಿ ಪ್ರವರ್ಗಗಳ ಅಭ್ಯರ್ಥಿಗಳು ಕೂಡ ಮೂಲ ದಾಖಲೆ ಸಮೇತ ಬರಬಹುದು. ಶೈಕ್ಷಣಿಕ ಮೂಲ ದಾಖಲೆಗಳ ಜತೆಗೆ ಕ್ಲೇಮ್ ಮಾಡಿರುವುದಕ್ಕೆ ಪೂರಕವಾದ ಮೂಲ ದಾಖಲೆಗಳ ಸಮೇತ ಅಭ್ಯರ್ಥಿಗಳು ಪರಿಶೀಲನೆಗೆ ಬರಬೇಕು. ಸ್ನಾತಕೋತ್ತರ ಪದವಿ ಅಪೂರ್ಣ ಆಗಿರುವವರು ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿ ಹಾಗೂ ವೇಳಾಪಟ್ಟಿ ಸಲುವಾಗಿ ಕೆಇಎ ವೆಬ್ ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.


ಪರಿಶೀಲನೆಗೆ ಕೊಂಡೊಯ್ಯ ಬೇಕಾದ ದಾಖಲೆಗಳು
- ಪರೀಕ್ಷೆಯ ಪ್ರವೇಶ ಪತ್ರ
- ಆಧಾರ್ ಕಾರ್ಡ್
- ಸ್ನಾತ್ತಕೋತ್ತರ ಪದವಿಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ ಜೊತೆಗೆ ಪಾಸಿಂಗ್ ಸರ್ಟಿಫಿಕೇಟ್
- ಪಿ.ಎಚ್‌ಡಿ ಪದವಿ ಪ್ರಮಾಣ ಪತ್ರ (19/9/1991 ರ ಮೊದಲು ಪಡೆದಿದ್ದರೆ ಮಾತ್ರ ಅನ್ವಯ)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ಆನ್‌ಲೈನ್ ಅರ್ಜಿಯಲ್ಲಿ ಮೀಸಲಾತಿ ಕೋರಿದ್ದಲ್ಲಿ ಮಾತ್ರ ಅನ್ವಯ)
- ಹಾಗೂ ಇತರೆ ದಾಖಲೆ
KSET 2025, or the Karnataka State Eligibility Test, is a crucial qualifying exam for candidates aiming to become Assistant Professors in universities, colleges in Karnataka












Follow Me