Scholarship | ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

karnatakasangeetanrutyaacdemy
karnatakasangeetanrutyaacdemy

ಬೆಂಗಳೂರು: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ – ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳಿಗೆ ಶಿಷ್ಯವೇತನಕ್ಕಾಗಿ (Scholarship) ಅರ್ಜಿ ಆಹ್ವಾನಿಸಲಾಗಿದೆ.

2025-26ನೇ ಸಾಲಿನ ಶಿಷ್ಯವೇತನಕ್ಕೆ, ಆಯ್ಕೆ, ಪ್ರಕ್ರಿಯೆಯನ್ನು ಮೊಬೈಲ್ / ವಿಡಿಯೋ ಚಿತ್ರೀಕರಣದ ಮೂಲಕ ಆಯ್ಕೆ ಮಾಡಲು ಅಕಾಡೆಮಿ ತೀರ್ಮಾನಿಸಿದೆ.

ಇದನ್ನು ಮಿಸ್‌ ಮಾಡದೇ ಓದಿ: ನಿಮ್ಮ ಮನೆಯಲ್ಲಿ ಗೆದ್ದಲುಗಳಿವ್ಯಾ.? ಹೀಗೆ ಮಾಡಿ ಮುಕ್ತಿ ಸಿಗುತ್ತೆ!

ಇದನ್ನು ಮಿಸ್‌ ಮಾಡದೇ ಓದಿ: ಡಿ.ಕೆಗೆ ಸಿಎಂ ಸ್ಥಾನ ನೀಡದಿದ್ದರೆ ಕರ್ನಾಟಕದಾದ್ಯಂತ ಹೋರಾಟಕ್ಕೆ ಮುಂದಾದ ಒಕ್ಕಲಿಗ ಸಂಘ..!

 

ಶಿವನೇತನ ಅರ್ಜಿಗಳ ಬಗ್ಗೆ ಮಾಹಿತಿಯನ್ನು ಅಕಾಡೆಮಿ ಪೇಸ್ ಬುಕ್ ನಲ್ಲಿ facebook.com/karnatakasangeetanrutyaacdemy, ಹಾಗೂ Sangeetanrityaacademy.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

karnataka sangeeta nritya academy
karnataka sangeeta nritya academy

ಅರ್ಜಿಯನ್ನು ಆಯಾ ಜಿಲ್ಲೆಯ ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಪಡೆಯಬಹುದಾಗಿದೆ. ಸಂದರ್ಶನದ ಬದಲಿಗೆ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್ / ವಿಡಿಯೋ ಚಿತ್ರೀಕರಿಸಿ ಪೆÉನ್ ಡ್ರೈವ್ ನಲ್ಲಿ ಅಳವಡಿಸಿ, ಪೆನ್ ಡ್ರೈವ್ ನೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560 002 ಕಾರ್ಯಾಲಯಕ್ಕೆ, ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು.

ಈ ರೀತಿಯಾಗಿ ಬಂದ ಅರ್ಜಿಗಳನ್ನು ಆಯಾ ಕಲಾ ಪ್ರಕಾರಕ, ಅನುಗುಣವಾಗಿ ತೀರ್ಪುಗಾರರು ಅಭ್ಯರ್ಥಿಗಳು ಚಿತ್ರೀಕರಿಸಿ, ಕಳುಹಿಸಿಕೊಟ್ಟಿರುವ ಪೆನ್ ಡ್ರೈವ್ ಅನ್ನು ಪರಿಶೀಲಿಸಿ ಶಿಷ್ಯವೇತನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪಠ್ಯಕ್ರಮ ಚಿತ್ರೀಕರಿಸಿದ ಪೆನ್ ಡ್ರೈವ್ ನೊಂದಿಗೆ ಅರ್ಜಿಯನ್ನು ಸ್ವೀಕರಿಸಲು ಡಿಸೆಂಬರ್ 20 ಕೊನೆಯ ದಿನಾಂಕವಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರದರ್ಶನದ ಪುಷ್ಪಗಳು, ಮರುಬಳಕೆಯ ವಸ್ತುಗಳಾಗಬೇಕು: ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್

ಬೆಂಗಳೂರು: ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯ ವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು. 

Chief Secretary Dr. Shalini Rajneesh
Chief Secretary Dr. Shalini Rajneesh

ತೋಟಗಾರಿಕೆ ಇಲಾಖೆಯಿಂದ ನಗರದ ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನದಲ್ಲಿ 11 ದಿನಗಳ ಕಾಲ ಏರ್ಪಡಿಸಿರುವ “ಹೂಗಳ ಹಬ್ಬ-2025” ಕಲೆ ಸಂಸ್ಕøತಿಯ ಸಮಾಗಮ ಉದ್ಘಾಟಿಸಿ ಫಲ ಪುಷ್ಪ ಪ್ರದರ್ಶನ ವೀಕ್ಷಿಸಿದರು.

ತೋಟಗಾರಿಕೆ ಇಲಾಖೆಯು ವಿಶೇಷವಾಗಿ ಮಕ್ಕಳಿಗಾಗಿ ಪುಷ್ಪ ಪ್ರದರ್ಶನ ಏರ್ಪಡಿಸಿದೆ. ನಮ್ಮ ಜೀವನ ಶೈಲಿಯನ್ನು ನೈಸರ್ಗಿಕವಾಗಿ ನಡೆಸಿದರೆ ಅದು ಎಲ್ಲರಿಗೂ ಒಳ್ಳೆಯದು ಎಂಬ ಪಾಠ ಎಲ್ಲರೂ ಈ ಪುಷ್ಪ ಪ್ರದರ್ಶನದಿಂದ ಅರಿತು ಅನುಸರಿಸಬೇಕು. ಕಬ್ಬನ್ ಉದ್ಯಾನವನದ ಸುಂದರ ಪ್ರಕೃತಿಯಲ್ಲಿ ಆಯೋಜಿಸಲಾಗಿರುವ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಆಗಮಿಸಿ ವೀಕ್ಷಿಸುವ ಮೂಲಕ ಉದ್ಯಾನವನದ ಸೌಂದರ್ಯವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.