ಬೆಂಗಳೂರು: ರಾಷ್ಟ್ರೀಯ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಕಡ್ಡಾಯವಾಗಿ ಭಾಗವಹಿಸಲು BCCI ನಿರ್ದೇಶನದ ಪ್ರಕಾರ ODI ನಾಯಕ ಶುಭಮನ್ ಗಿಲ್, ವಿಶ್ವದ ನಂ. 1 T20 ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ವೇಗಿ ಅರ್ಷದೀಪ್ ಸಿಂಗ್ ವಿಜಯ್ ಹಜಾರೆ ಟ್ರೋಫಿಯನ್ನು ಆಡಲಿದ್ದಾರೆ ಎನ್ನಲಾಗಿದೆ.
T20I ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಆಲ್ ರೌಂಡರ್ ಶಿವಂ ದುಬೆ ಮುಂಬೈ ಕ್ರಿಕೆಟ್ ಸಂಸ್ಥೆಗೆ (MCA) ಜನವರಿ 6 ಮತ್ತು 8 ರಂದು ಮುಂಬೈ ಪರ ಎರಡು ಪಂದ್ಯಗಳನ್ನು ಆಡುವುದಾಗಿ ತಿಳಿಸಿದ್ದಾರೆ.
ಇದನ್ನು ಮಿಸ್‌ಮಾಡದೇ ಓದಿ: ಕರ್ನಾಟಕ TET ಫಲಿತಾಂಶದ ಬಗ್ಗೆ ಇಲ್ಲಿದೆ ಮಹತ್ವದ
ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಡಿಸೆಂಬರ್ 24 ರಂದು ಸಿಕ್ಕಿಂ ವಿರುದ್ಧ ಮತ್ತು ಡಿಸೆಂಬರ್ 26 ರಂದು ಜೈಪುರದಲ್ಲಿ ಉತ್ತರಾಖಂಡ ವಿರುದ್ಧ ಎರಡು ಪಂದ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಈ ನಡುವೆ ಟೂರ್ನಿಯಲ್ಲಿ ಮುಂಬೈ ತಂಡವನ್ನು ಶಾರ್ದೂಲ್ ಠಾಕೂರ್ ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಎರಡು ಪಂದ್ಯಗಳಿಗೆ ದೆಹಲಿ ತಂಡದಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ರಿಷಬ್ ಪಂತ್ ತಂಡವನ್ನು ಮುನ್ನಡೆಸಲಿದ್ದು, ಆಯುಷ್ ಬದೋನಿ ಉಪನಾಯಕನಾಗಲಿದ್ದಾರೆ.
ದೆಹಲಿಯ ಆರಂಭಿಕ ಪಂದ್ಯಗಳು ಆಂಧ್ರ (ಡಿಸೆಂಬರ್ 24) ಮತ್ತು ಗುಜರಾತ್ (ಡಿಸೆಂಬರ್ 26) ವಿರುದ್ಧ. ಜನವರಿ 11 ರಂದು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗುವುದರಿಂದ ಕೊಹ್ಲಿ ಮತ್ತು ಪಂತ್ ಎಷ್ಟು ಪಂದ್ಯಗಳಿಗೆ ಲಭ್ಯವಿರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ವಿಜಯ ಹಝಾರೆ ಏಕದಿನ ಟೂರ್ನಿಯು ಡಿಸೆಂಬರ್ 24 ರಿಂದ ಶುರುವಾಗಲಿದೆ. ದೇಶೀಯ ಏಕದಿನ ಟೂರ್ನಿಯಲ್ಲಿ. ಬೆಂಗಳೂರಿನಲ್ಲಿ ನಡೆಯಲಿರುವ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
vijay hazare trophy schedule Virat Kohli is going to compete in Bangalore tomorrow













Follow Me