ಬೆಂಗಳೂರು: ಕರ್ನಾಟಕ (Karnataka) ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ 2025-26ನೇ ಸಾಲಿನ ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಉದ್ಯೋಗಿನಿ ಹಾಗೂ ಎಸ್ಸಿಪಿ/ಟಿಎಸ್ಪಿ ಯೋಜನೆಗಳಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗಿನಿ ಯೋಜನೆ : ಮಹಿಳೆಯರು ಅದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
ಇದನ್ನು ಮಿಸ್ ಮಾಡದೇ ಓದಿ: ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : 23ನೇ ಕಂತಿನ ಹಣ ಈ ದಿನದಂದು ಬರಲಿದೆ…!
ಇದನ್ನು ಮಿಸ್ ಮಾಡದೇ ಓದಿ: ಇನ್ಮುಂದೆ ‘ನೌಕರರಿ’ಗೆ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ‘ವೇತನ’ ಪಾವತಿ ಕಡ್ಡಾಯ…!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
ಆದಾಯ ಮಿತಿ: ರೂ. 2.00 ಲಕ್ಷಗಳು
ಘಟಕ ವೆಚ್ಚ: ಕನಿಷ್ಠ ರೂ.1.00 ಲಕ್ಷದಿಂದ ಗರಿಷ್ಠ ರೂ. 3.00 ಲಕ್ಷಗಳು
ಸಹಾಯಧನ : ಶೇ. 50 ರಷ್ಟು
ಸಾಮಾನ್ಯ ವರ್ಗ:
ಆದಾಯ ಮಿತಿ: ರೂ. 1.50 ಲಕ್ಷಗಳು
ಘಟಕ ವೆಚ್ಚ: ಗರಿಷ್ಠ ರೂ.3.00 ಲಕ್ಷಗಳು
ಸಹಾಯಧನ : ಶೇ.30 ರಷ್ಟು
ಚೇತನ ಯೋಜನೆ : ಗಮನಿತ ಮಹಿಳೆಯರಿಗೆ ಅದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ವಯೋಮಿತಿ 18 ವರ್ಷ ಮೇಲ್ಪಟ್ಟು
ಧನಶ್ರೀ ಯೋಜನೆ : ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.
ವಯೋಮಿತಿ 18 ರಿಂದ 60 ವರ್ಷಗಳು.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ: ಅನಾರೋತ್ಪನ್ನ ಚಟುವಟಿಕೆ (ಈ ಯೋಜನೆಯ ಅರ್ಜಿಯನ್ನು ಅನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ಸಲ್ಲಿಸಬಹುದು) ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. (ಈ ಯೋಜನೆಯ ಅರ್ಜಿಯನ್ನು ಅನ್‌ಲೈನ್ ಮತ್ತು ಆಫ್‌ಲೈನ್‌ಗಳಲ್ಲಿ ಸಲ್ಲಿಸಬಹುದು) ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ: 1993-94 & 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ (Incentives) ನೀಡಲಾಗುತ್ತದೆ.
ಇದನ್ನು ಮಿಸ್ ಮಾಡದೇ ಓದಿ: ರಾಜ್ಯದ `ಪಡಿತರ ಚೀಟಿ’ದಾರರಿಗೆ ಗುಡ್ ನ್ಯೂಸ್ : ಫೆಬ್ರವರಿಗೆ ‘ಇಂದಿರಾ ಕಿಟ್’ ವಿತರಣೆ…!
ಇದನ್ನು ಮಿಸ್ ಮಾಡದೇ ಓದಿ: ಪಡಿತರ ಚೀಟಿಯಡಿ ಸಿಗುವುದು ಪ್ಲಾಸ್ಟಿಕ್ ಅಕ್ಕಿ: ಇಲ್ಲಿದೆ ಮಹತ್ವದ ಮಾಹಿತಿ…!

ವಿಶೇಷ ಸೂಚನೆ
- ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ(Bank account) ಆಧಾರ್ ಸೀಡಿಂಗ್ ಮಾಡಿಸಿರಬೇಕು.
- ಧನಶ್ರೀ ಯೋಜನೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಿಗೆ ಅರ್ಜಿದಾರರು ಅರ್ಜಿಯನ್ನು ಅನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಸಲ್ಲಿಸಬಹುದು.
- ಈ ಎರಡು ಯೋಜನೆಗಳಿಗೆ ಅರ್ಜಿಯನ್ನು ಆಫ್ ಲೈನ್(Off line) ನಲ್ಲಿ ಸಲ್ಲಿಸುವವರು ನಿಗದಿಪಡಿಸಿದ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ತಮ್ಮ ಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿನಿಗಮ ಇವರನ್ನು ಸ೦ಪರ್ಕಿಸಿ ಅರ್ಜಿಸಲ್ಲಿಸುವುದು.
- ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ (Unspent) ಅಮದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು/ ಅರ್ಜಿದಾರರು ಸಹ ಸೇವಾ ಸಿಂಧು ಫೋರ್ಟರ್ ನಲ್ಲಿ ಅರ್ಜಿಸಲ್ಲಿಸುವುದು.
- ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಮಾನ್ಯ ಸಚಿವರು /ಮಾನ್ಯ ಶಾಸಕರು ಕರ್ನಾಟಕ ಸರ್ಕಾರ /ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ (ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಸಲ್ಲಿಸುವುದು.
- ಈ ಎಲ್ಲಾ ಯೋಜನೆಗಳಿಗೆ ಅರ್ಜಿಗಳನ್ನು ಫಲಾಪೇಕ್ಷಿಗಳು/ಅರ್ಜಿದಾರರು ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಜನ್) ಕೇಂದ್ರಗಳಲ್ಲಿ ಅರ್ಜಿಸಲ್ಲಿಸುವುದು.
- ಈ ಹಿಂದಿನ ಸಾಲುಗಳಲ್ಲಿ ಅರ್ಜಿಸಲ್ಲಿಸಿ ಸೌಲಭ್ಯ ಪಡೆಯದೇ ಇರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-12-2025 ರ ಸಂಜೆ 5:30 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.
2025ರ ಡಿಸೆಂಬರ್ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.@CMofKarnataka @siddaramaiah @DKShivakumar @laxmi_hebbalkar pic.twitter.com/DPW6o34h95
— DIPR Karnataka (@KarnatakaVarthe) November 15, 2025
Karnataka Women’s Development Corporation invites applications for subsidy, here is the complete information













Follow Me