Heart Attack: ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು? ಈ ರೀತಿ ಮಾಡಿ ಇತರರ ಜೀವ ಉಳಿಸಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಘಾತಗಳ ( Heart Attack)  ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೂಡ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ. 

ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವ ಜನತೆ ಪ್ರಾಣ ಚೆಲ್ಲುತ್ತಿದ್ದು, ಇದು ಹಲವರಲ್ಲಿ ಆತಂಕವನ್ನು ನಿರ್ಮಾಣ ಮಾಡಿದೆ. ಈ ನಡುವೆ ಹಲವು ಮಂದಿ ಆಸ್ಪತ್ರೆಗಳಲ್ಲಿ (Hospetal)  ಕ್ಯೂ ನಿಲ್ಲುತ್ತಿದ್ದು, ತಮ್ಮ ಆರೋಗ್ಯವನ್ನು (Helth) ತಪಾಸಣೆ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೇ ವೈದ್ಯರು ಕೂಡ ರೋಗಿಗಳ ಆರೋಗ್ಯವನ್ನು ತಪಾಸಣೆ ಮಾಡುತ್ತಿರುವುದು ಕಂಡು ಬಂದಿದೆ.

ಇದನ್ನು ಮಿಸ್‌ ಮಾಡದೇ ಓದಿ: ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇದು, ಫೋನ್‌ ನಂಬರ್ ಸೇವ್ ಮಾಡ್ಕೊಳ್ಳಿ!

 

Madhusudan Sai Medical and Research Institute heart

ಈ ನಡುವೆ ರಾಜ್ಯ ಆರೋಗ್ಯ ಇಲಾಖೆಯು (State Health Department) ಕೆಲವು ಮಾಹಿತಿಯನ್ನು ಹಂಚಿಕೊಂಡಿದೆ ಅದರಂತೆ. ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದು ಅದು ಕೆಳಕಂಡತಿದೆ.

ಇದನ್ನು ಮಿಸ್‌ ಮಾಡದೇ ಓದಿ: ಉಚಿತ ಉನ್ನತ ಶಿಕ್ಷಣ ಯೋಜನೆಯಡಿ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಎದೆನೋವು, ಉಸಿರಾಟದ ತೊಂದರೆ, ಒಸಡು ಅಥವಾ ತೋಳಿನಲ್ಲಿ ನೋವು, ಬೆವರುವಿಕೆ ಅಥವಾ ತಲೆತಿರುಗುವಿಕೆಯ ಅನುಭವವಾಗುತ್ತಿದೆಯೇ? ನಿರ್ಲಕ್ಷಿಸದಿರಿ. ನಿಮಗೆ ಅಥವಾ ನಿಮ್ಮ ಸುತ್ತಲಿನವರಿಗೆ ಈ ಲಕ್ಷಣಗಳಿದ್ದರೆ ತಕ್ಷಣವೇ 108ಕ್ಕೆ ಕರೆಮಾಡಿ ಅಥವಾ ಸಮೀಪದ ಆಸ್ಪತ್ರೆಗೆ ತೆರಳಿ,

ನೆನಪಿಡಿ: ಗೋಲ್ಡನ್ ಅವರ್ ಆರೈಕೆಯು ಜೀವಗಳನ್ನು ಉಳಿಸಬಹುದಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಆರೊಗ್ಯ ಇಲಾಖೆಯು ಮಹತ್ವದ ಮಾಹಿತಿಯನ್ನು ನೀಡಿದೆ ಅದರಂತೆ ಮೊದಲು ರೋಗಿಯು ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ. ಆಂಬುಲೆನ್ಸ್‌ಗೆ (Ambulance)
ತಕ್ಷಣವೇ ಕರೆ ಮಾಡಿ ಅಂತ ತಿಳಿಸಿದೆ.