ಬಳ್ಳಾರಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗಲು ವಿಶೇಷ ಸಾರಿಗೆ ಸೌಲಭ್ಯ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್ ಅವರು ತಿಳಿಸಿದ್ದಾರೆ.
ಬಳ್ಳಾರಿ ವಿಭಾಗದ ಬಳ್ಳಾರಿ, ಮೋಕಾ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟೆ, ಹಳೇಕೋಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗುತ್ತಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಫೆ.11 ರಿಂದ 16 ರ ವರೆಗೆ ರವರೆಗೆ ವಿಶೇಷ ಸಾರಿಗೆ ಒದಗಿಸಲಾಗಿದೆ.
ಇದನ್ನು ಮಿಸ್ ಮಾಡದೇ ಓದಿ : ‘ವಂದೇ ಮಾತರಂ’ ಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಕೇಂದ್ರ ಸರ್ಕಾರ
ಮಾಹಿತಿಗಾಗಿ: ಬಳ್ಳಾರಿ-1ನೇ ಘಟಕದ ವ್ಯವಸ್ಥಾಪಕರು-7760992163, ಬಳ್ಳಾರಿ-2ನೇ ಘಟಕ ವ್ಯವಸ್ಥಾಪಕರು-7760992164, ಸಿರುಗುಪ್ಪ ಘಟಕ ವ್ಯವಸ್ಥಾಪಕರು-7760992165, ಕುರುಗೋಡು ಘಟಕ ವ್ಯವಸ್ಥಾಪಕರು-9606483671, ಸಂಡೂರು ಘಟಕ ವ್ಯವಸ್ಥಾಪಕರು-7760992309 ಗೆ ಸಂಪರ್ಕಿಸಬಹುದು. ಈ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.12 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಯ 220/11ಕೆವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ 20ಎಂವಿಎ ಟ್ರಾನ್ಸಫಾರ್ಮರ್ ನ ನಿರ್ವಹಣಾ ಕಾರ್ಯ ಹಾಗೂ ಈ ಉಪಕೇಂದ್ರದಿAದ ಸರಬರಾಜು ಆಗುವ ವಿದ್ಯುತ್ ಲೈನ್ ಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದÀ ಫೆ.12 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ಬಳ್ಳಾರಿ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-33 ರ ವ್ಯಾಪ್ತಿಯ ಕೆ.ಚ್.ಬಿ. ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್ಫ್ಯಾಂಟ್ರಿ ರೋಡ್, ವಾಸವಿ ಸೂಲ್ಕ್, ಕೊಳಗಲ್ ರೋಡ್, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರೋಡ್, ಭತ್ರಿ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ದಾರ್ಥ ನಗರ, ವಿಯಾನಿ ಶಾಲೆ. ಎಫ್-34 ರ ವ್ಯಾಪ್ತಿಯ ಫಸ್ಟ್ ಗೇಟ್, ಕೊರಚ ಸ್ಟಿçÃಟ್, ಉರ್ದು ಟ್ರೆöÊನಿಂಗ್ ಸ್ಕೂಲ್, ಕಡಪಗೆರೆ, ಟೈಲರ್ ಸ್ಟಿçÃಟ್, ವಡ್ಡೆ ನಾಗಪ್ಪ ಕಾಲೋನಿ, ತಿಲಕ್ ನಗರ, ವಿನಾಯಕ ನಗರ, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜು, ರೇಡಿಯೋ ಪಾರ್ಕ್, ಕೌಲ್ ಬಜಾರ್ ಮೇನ್ ರೋಡ್. ಎಫ್-35 ವ್ಯಾಪ್ತಿಯ ಜಲ ಶುದ್ಧೀಕರಣ ಕೇಂದ್ರ.
ಎಫ್-36 ವ್ಯಾಪ್ತಿಯ ಬಂಡಿಹಟ್ಟಿ, ಆಶ್ರಯ ಕಾಲೋನಿ, ಈದ್ಗ ರೋಡ್, ಟೀರ್ಸ್ ಕಾಲೋನಿ, ಜಾಗೃತಿ ನಗರ ಸರ್ಕಲ್, ಆಜಾದ್ ನಗರ. ಎಫ್-40 ವ್ಯಾಪ್ತಿಯ ಕುವೆಂಪು ನಗರ, ರಾಮಂಜನೇಯ ನಗರ, ಸಿ.ಎಮ್.ಸಿ ಕಾಲೋನಿ, ಎಕ್ಸ್ ಸರ್ವಿಸ್ಮೆನ್ ಕಾಲೋನಿ.ಎಫ್-72 ವ್ಯಾಪ್ತಿಯ ಕಾಂಟೋನ್ ಮೆಂಟ್, ಸೂರ್ಯ ಕಾಲೋನಿ, ತಿಲಕ್ ನಗರ, ಸುಧಾ ಕ್ರಾಸ್, ನಂದಿ ಕಾಲೋನಿ, ಹೆಚ್.ಆರ್.ಜಿ ಕಾಲೋನಿ, ಜಯನಗರ, ರಹಿಮಬಾದ್ ಕಾಲೋನಿ, ನಲಂದ ಕಾಲೇಜ್, ವಿಜಯನಗರ ಕಾಲೋನಿ, ಕೆ.ಹೆಚ್.ಬಿ ಕಾಲೋನಿ, ಜಗನಾಥ ಮಂದಿರ, ಭಾಸ್ಕರ ನಾಯ್ಡು ಸ್ಟಿçÃಟ್, ಸೆಂಟ್ ಜೋಸೆಫ್ ಸ್ಕೂಲ್, ಬೆಳಗಲ್ ಕ್ರಾಸ್, ಚಂದ್ರ ಕಾಲೋನಿ, ಎಂ.ಕೆ ಗಡಂಗ್.ಎಫ್-77 ವ್ಯಾಪ್ತಿಯ ಬಸವನಕುಂಟೆ, ಕೋಟೆ ಪ್ರದೇಶ, 1 ನೇ ಗೇಟ್, 2 ನೇ ಗೇಟ್, ಸಿದ್ದಾರ್ಥ ನಗರ, ಸುಧಾಕ್ರಾಸ್, ಒ.ಪಿ.ಡಿ,. ಎಫ್-75 ವ್ಯಾಪ್ತಿಯ ಟ್ರಾಮಾ ಕೇರ್ ಸೆಂಟರ್, ಗೋಪಾಲಗೌಡ ನಗರ. ಎಫ್-76 ವ್ಯಾಪ್ತಿಯ ಅರಣ್ಯ ಕ್ವಾಟರ್ಸ್, ಜಾಗೃತಿ ನಗg,À ರೇಷ್ಮೆ ಇಲಾಖೆ, ಟೀರ್ಸ್ ಕಾಲೋನಿ, ಈದ್ಗ ಮೈದಾನ, ರಾಮಾಂಜನೇಯ ನಗರ. ಎಫ್-77 ವ್ಯಾಪ್ತಿಯ ಓ.ಪಿ.ಡಿ., ಶಾಂತಿ ನಗರ, ಕೊಳಗಲ್ ರೋಡ್, ಬಿಎಂಆರ್ಸಿ ಕ್ಯಾಂಪಸ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.