ಬೆಂಗಳೂರು: ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಗರದ ಮಾರಿಕಾಂಬ ದೇವಿ ದರ್ಶನದ ವೇಳೆ ಕುಸಿದು ಬಿದ್ದ ಮಾಜಿ ಸ್ಪೀಕರ್ ಕಾಡೋಡು ತಿಮ್ಮಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಂತ ತಿಳಿದು ಬಂದಿದೆ. ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ದೇವಿ ಜಾತ್ರೆ ಇಂದಿನಿಂದ ಶುರುವಾಗಿದೆ. ಸಾಗರ. ಪಟ್ಟಣದ ಆರಾಧ್ಯ ದೈವವಾಗಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ಫೆ.3ರಿಂದ 11ರವರೆಗೆ ಅತಿ ವಿಜೃಂಭಣೆಯಿಂದ ನಡೆಯಲಿದೆ.

ಕಾಗೋಡು ತಿಮ್ಮಪ್ಪ ಒಬ್ಬ ಭಾರತೀಯ ನಿವೃತ್ತ ರಾಜಕಾರಣಿ, ಅವರು ಕರ್ನಾಟಕ ವಿಧಾನಸಭೆಯ 21 ನೇ ಸ್ಪೀಕರ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು ಸಾಗರದಿಂದ ಆಯ್ಕೆಯಾದ ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದರು. ಅವರು ಮೇ 2013 ರಲ್ಲಿ 14 ನೇ ವಿಧಾನಸಭೆಯ ಸ್ಪೀಕರ್ ಆಗಿ ಕೆಲಸ ಮಾಡಿದ್ದರು.
Former speaker, senior Congress leader Kagodu Thimmappa’s health deteriorated, admitted to hospital