ದುಬೈ: ಅಂಡರ್-19 ಏಷ್ಯಾಕಪ್ನ ((Under-19 Asia Cup) ಅಂತಿಮ ಪಂದ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ದುಬೈನಲ್ಲಿ (Dubai) ಭಾರತ ಮತ್ತು ಪಾಕಿಸ್ತಾನ (Ind Vs Pak) ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಯುವ ನಾಯಕ ಆಯುಷ್ ಮ್ಹಾತ್ರೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಕಪ್ಗೆಲ್ಲುವುದಕ್ಕೆ ಮುಂದಾಗಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: 2026ರ ಟಿ20 ವಿಶ್ವಕಪ್ಗೆ ಭಾರತ ತಂಡ ಪ್ರಕಟ, ಇಲ್ಲಿದೆ ಆಟಗಾರರ ಪಟ್ಟಿ
ಇದನ್ನು ಮಿಸ್ ಮಾಡದೇ ಓದಿ: ಈ ಬಟ್ಟೆ ಧರಿಸಿ ಕಚೇರಿ ಬರಬೇಡಿ: ರಾಜ್ಯ ಸರಕಾರಿ ನೌಕರರಿಗೆ ಮಹತ್ವದ ಸೂಚನೆ….!
ಇದರೊಂದಿಗೆ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲಿದೆ. ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಆಡಿದ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಭಾರತ ಕಣಕ್ಕೆ ಇಳಿಯುತ್ತಿದೆ. ಮತ್ತೊಂದೆಡೆ, ಡ್ಯಾನಿಯಲ್ ಅಲಿ ಖಾನ್ ಬದಲಿಗೆ ಪಾಕಿಸ್ತಾನವು ನಿಖಾಬ್ ಶಫೀಕ್ಗೆ ಅಂತಿಮ ತಂಡದಲ್ಲಿ ಅವಕಾಶ ನೀಡಿದೆ. 19 ವರ್ಷದೊಳಗಿನವರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಬಾಲಕರ ತಂಡ ಇಲ್ಲಿಯವರೆಗೆ ಅಜೇಯವಾಗಿ ಗುರುತಿಸಿಕೊಂಢಿದೆ. ಅಂದ ಹಾಗೇ ಪಾಕ್ ವಿರುದ್ದ ದೇಶದ ವಿರುದ್ಧ ಮತ್ತೊಂದು ಗೆಲುವು ಪಡೆದರೆ ಭಾರತ ದಾಖಲೆಯ ಒಂಬತ್ತನೇ ಅಂಡರ್-19 ಏಷ್ಯಾಕಪ್ ತನ್ನದಾಗಿಸಿಕೊಳ್ಳಲಿದೆ.

ಟೀಮ್ ಇಂಡಿಯಾ ಆಟಗಾರರ ವಿವರ: ಆಯುಷ್ ಮಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ಆರನ್ ಜಾರ್ಜ್, ವಿಹಾನ್ ಮಲ್ಹೋತ್ರಾ, ವೇದಾಂತ್ ತ್ರಿವೇದಿ, ಅಭಿಯಾನ್ ಕುಂದು (ವಿಕೆಟ್ ಕೀಪರ್), ಕಾನ್ಶಿಕ್ ಚೌಹಾಣ್, ಹೆನಿಲ್ ಪಟೇಲ್, ಖಿಲಾನ್ ಪಟೇಲ್, ದೀಪೇಶ್ ದೇವೇಂದ್ರನ್, ಕಿಶನ್ ಕುಮಾರ್ ಸಿಂಗ್
ಪಾಕ್ ತಂಡದ ಆಟಗಾರರ ವಿವರ: ಫರ್ಹಾನ್ ಯೂಸುಫ್ (ನಾಯಕ), ಸಮೀರ್ ಮಿನ್ಹಾಸ್, ಉಸ್ಮಾನ್ ಖಾನ್, ಅಹ್ಮದ್ ಹುಸೇನ್, ಹಮ್ಜಾ ಜಹೂರ್ (ವಿಕೆಟ್ ಕೀಪರ್), ಹುಝೈಫಾ ಅಹ್ಸಾನ್, ನಿಕಾಬ್ ಶಫೀಕ್, ಮೊಹಮ್ಮದ್ ಶಯಾನ್, ಅಲಿ ರಜಾ, ಅಬ್ದುಲ್ ಸುಭಾನ್, ಮೊಹಮ್ಮದ್ ಸಾಯಮ್













Follow Me