ರೈತರಿಗೆ ಗುಡ್ ನ್ಯೂಸ್ : ಹಾಲಿನ ಪ್ರೋತ್ಸಾಹ ಧನ 7 ರೂ. ಹೆಚ್ಚಳ : ಸಿಎಂ ಸಿದ್ದರಾಮಯ್ಯ ಘೋಷಣೆ

CM Siddaramaiah's advice

ಬೆಳಗಾವಿ : ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ಒಂದನ್ನು ನೀಡಿದ್ದು ಇಷ್ಟು ದಿನ ಪ್ರತಿ ಲೀಟರ್ಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಬೆಳಗಾವಿ ಅಧಿವೇಶನದಲ್ಲಿ ರೈತರ ಹಿತ ದೃಷ್ಟಿಯಿಂದ ರೈತರಿಗೆ ನೀಡುತ್ತಿದ್ದ ಐದು ರೂಪಾಯಿ ಪ್ರೋತ್ಸಾಹ ಧನವನ್ನು 7 ರೂಪಾಯಿಗೆ ಹೆಚ್ಚಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಪ್ರಸ್ತುತ ಪ್ರೋತ್ಸಾಹಧನವು ರೈತರಿಗೆ ಸಂಪೂರ್ಣವಾಗಿ ತಲುಪುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬೆಲೆ ಏರಿಕೆ ಹೊರತಾಗಿಯೂ ಸರ್ಕಾರದಿಂದ ನೆರವು ಮುಂದುವರಿಯುತ್ತದೆ ಎಂದರು. ತಮ್ಮ ಸರ್ಕಾರದ ಹಿಂದಿನ ಅವಧಿಯ (2013-18) ಪ್ರಣಾಳಿಕೆ ಭರವಸೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದರ ಜೊತೆಗೆ ಬಜೆಟ್‌ನಲ್ಲಿ ಘೋಷಿಸದೆ 30 ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇನ್ನೂ ಸದನದಲ್ಲಿ ಮಾತನಾಡಿದ ಸಿಎಂ 2025-26 ರಲ್ಲಿ ಕರ್ನಾಟಕದಲ್ಲಿ ಸುಮಾರು 7.4 ಲಕ್ಷ ಹೆಕ್ಟೇರುಗಳಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಇದರಿಂದ ಸುಮಾರು 670 ಲಕ್ಷ ಟನ್ ಕಬ್ಬಿನ ಉತ್ಪಾದನೆಯಾಗಬಹುದು. 53.72 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗಬಹುದೆಂದು ಅಂದಾಜಿಸಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಪ್ರೀತ್ಸೆ ಅಂತ 19ರ ಹುಡ್ಗಿ ಹಿಂದೆ ಬಿದ್ದ 40ರ ಅಂಕಲ್‌ ಭೀ***ಕರ ಹ***ತ್ಯೆ

ಇದನ್ನು ಮಿಸ್‌ ಮಾಡದೇ ಓದಿ: `BPL’ ರೇಷನ್ ಕಾರ್ಡ್ ಪಡೆಯಲು ಈ ಮಾನದಂಡಗಳು ಕಡ್ಡಾಯ.!

ಕಬ್ಬಿಗೆ ಎಫ್ ಆರ್ ಪಿ ನಿಗಧಿಪಡಿಸುವವರು ಯಾರು? ಕೇಂದ್ರ ಸರ್ಕಾರ ತಾನೆ ?

ಕೇಂದ್ರ ಸರ್ಕಾರವು ಕಬ್ಬಿನ ರಿಕವರಿಯನ್ನು ಆಧರಿಸಿ ಎಫ್.ಆರ್.ಪಿ.ಯನ್ನು ನಿಗಧಿ ಪಡಿಸಲಾಗುತ್ತದೆ. ಎಫ್ ಆರ್ ಪಿ ಎಂದರೆ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ ಎಂದರ್ಥ. ಒಂದು ಕ್ವಿಂಟಾಲ್ ಕಬ್ಬನ್ನು ಅರೆದಾಗ 9.5 ಕೆಜಿ ಸಕ್ಕರೆ ಉತ್ಪಾದನೆಯಾದರೆ ಸಾಕಾಗಿತ್ತು.

ಈ ಮಾನದಂಡವನ್ನು 2018 ರಲ್ಲಿ ಶೇ.10 ಕ್ಕೆ ಏರಿಕೆ ಮಾಡಿದರು. 2022 ರಲ್ಲಿ 10.25ಕ್ಕೆ ಏರಿಕೆ ಮಾಡಿದರು. ಕರ್ನಾಟಕದಲ್ಲಿ 3-4 ಕಬ್ಬಿನ ವಲಯಗಳಿವೆ. ಬೆಳಗಾವಿ, ಬಾಗಲಕೋಟೆಯಲ್ಲಿ ಇಳುವರಿ ಹೆಚ್ಚು ಬಂದರೆ ವಿಜಯಪುರ ಕಲಬುರ್ಗಿ ಸೇರಿದಂತೆ ಕಲ್ಯಾಣ ಕರ್ನಾಟಕ, ಹಾವೇರಿ, ದಾವಣಗೆರೆಗಳಲ್ಲಿ ಇಳುವರಿಯ ಪ್ರಮಾಣ ತುಸು ಕಡಿಮೆಯಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಇಳುವರಿ ಪ್ರಮಾಣ ಶೇ. 9.5 ಕ್ಕಿಂತ ಕಡಿಮೆಯಾಗುತ್ತದೆ.

ರಿಕವರಿಯು ಶೇ.10.25 ಇದ್ದರೆ ಒಂದು ಟನ್ನಿಗೆ 3550 ರೂ ದೊರೆಯುತ್ತದೆ. ಇದರಲ್ಲಿ ಕಟಾವು ಮತ್ತು ಸಾಗಣೆಗೆ 800-900 ರೂಗಳಷ್ಟು ಖರ್ಚು ಬರುತ್ತದೆ. ಇದರಿಂದಾಗಿ ಪ್ರತಿಟನ್ನಿಗೆ ಸುಮಾರು 2700 ರೂಗಳಷ್ಟು ಮಾತ್ರ ಬೆಲೆ ದೊರೆಯುತ್ತದೆ. ಕೇಂದ್ರ ಸರ್ಕಾರ 3550 ರೂ.ಗಳನ್ನು ನಿಗಧಿ ಪಡಿಸಿದರೂ ಸಹ ವಾಸ್ತವವಾಗಿ ರೈತರಿಗೆ ಸಿಗುವ ಬೆಲೆ 2700 ರೂಗಳ ಆಸು ಪಾಸಿನಷ್ಟಿರುತ್ತಿತ್ತು.

ಸಹಜವಾಗಿ ರೈತರು ಆಕ್ರೋಶವನ್ನು ವ್ಯಕ್ತಪಡಿಸುವುದು ಸಹಜವೆ. ರೈತರು ಆಕ್ರೋಶಿತರಾದಾಗ ಅದಕ್ಕೆ ಬೆಂಕಿ ಸುರಿದವರು ಯಾರು? ರೈತರೊಂದಿಗೆ ಮಲಗುತ್ತೇನೆ ಎಂದು ಹೋದವರು ಯಾರು? ಯಾರು ಸಮಸ್ಯೆಗೆ ಕಾರಣರಾಗಿದ್ದಾರೊ ಅವರೆ ರೈತರ ಪರವಾಗಿರುವುದು ಹೇಗೆ ಸಾಧ್ಯ?

Siddaramaiah
Image credit: https://www.facebook.com/Siddaramaiah.Official

2009 ಕ್ಕೆ ಮೊದಲು ಎಸ್ ಎಂ ಪಿ [ ಸ್ಟಾö್ಯಟ್ಯುಟರಿ ಮಿನಿಮಮ್ ಪ್ರೆöÊಸ್] ಎಂಬ ಪದ್ಧತಿ ಇತ್ತು. ಆಗ ಕಬ್ಬಿಗೆ ಅತ್ಯಂತ ಕಡಿಮೆ ಬೆಲೆ ರೈತರಿಗೆ ಸಿಗುತ್ತಿತ್ತು. ಆಗ ಒಂದು ಟನ್ನಿಗೆ 812 ಇತ್ತು. ಈ ಪದ್ಧತಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಮನಗಂಡ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರವು ಒಂದೇ ಬಾರಿ ಪ್ರತಿ ಟನ್ನಿಗೆ 487 ರೂಗಳನ್ನು ಹೆಚ್ಚುವರಿಯಾಗಿ ನೀಡುವ ಮೂಲಕ ಬೆಲೆಯನ್ನು 1298.4 ರೂಗಳಿಗೆ ಏರಿಕೆ ಮಾಡಿತು. ಇದು ಕಬ್ಬಿನ ಇತಿಹಾಸದಲ್ಲಿಯೆ ಅತಿ ಹೆಚ್ಚಿನ ಎಫ್.ಆರ್.ಪಿ.ಯಾಗಿದೆ. ರಿಕವರಿ ಶೇ.9.5 ರಷ್ಟಿದ್ದರೂ ಸಹ ಇಷ್ಟು ಬೆಲೆ ನೀಡಲಾಗಿತ್ತು. 2012-13 ರಲ್ಲಿ 250 ರೂ, 2013-14 ರಲ್ಲಿ 400 ರೂ ನೀಡಿದ್ದರು. ಮನಮೋಹನ್ ಸಿಂಗ್ ಅವರು 2009 ರಿಂದ 2013-14 ರ ಅವಧಿಯ 5 ವರ್ಷಗಳಲ್ಲಿ ಶೇ.62 ರಷ್ಟು ಹೆಚ್ಚು ಬೆಲೆ ನೀಡಿದರು. ಆಗ ರಿಕವರಿ ಪ್ರಮಾಣ ಶೇ.9.5 ರಷ್ಟಿತ್ತು. ಆಗ ದೇಶದಲ್ಲಿ ಎಥನಾಲ್ ಬ್ಲೆಂಡಿAಗ್ ಪ್ರಮಾಣ ಶೇ.5 ರಷ್ಟಿತ್ತು. ಆದರೂ ಸಹ ಹೆಚ್ಚಿನ ಕಬ್ಬಿಗೆ ಹೆಚ್ಚಿನ ಬೆಲೆ ಕೊಡಲಾಗ್ತಾ ಇತ್ತು ಮತ್ತು ರಿಕವರಿ ಪ್ರಮಾಣ ಕಡಿಮೆ ಇತ್ತು.

ಆದರೆ ಈಗ ಶೇ.20 ರಷ್ಟು ಎಥನಾಲ್ ಬ್ಲೆಂಡಿAಗ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಆದರೂ ಸಹ ಮೋದಿಯವರು 2014-15 ರಿಂದ 2025-26 ರ 12 ವರ್ಷಗಳಲ್ಲಿ ಕೇವಲ ಶೇ.61.36 ರಷ್ಟು ಮಾತ್ರ ಹೆಚ್ಚು ಮಾಡಿದ್ದಾರೆ. ರಿಕವರಿ ಪ್ರಮಾಣ ಶೇ.9.5 ಪರಿಗಣಿಸಿದರೆ ಈ 12 ವರ್ಷಗಳಲ್ಲಿ ಅವರು ಹೆಚ್ಚು ಮಾಡಿರುವುದು ಶೇ.49.57 ರಷ್ಟು ಮಾತ್ರ.

ಹೀಗಿದ್ದಾಗ ಬಿಜೆಪಿಯವರು ರೈತರ ಹಿತಾಸಕ್ತಿ ಕಾಯಲು ಹೇಗೆ ಸಾಧ್ಯ ?

ಕೊಲ್ಲುವವರೆ ಕಾಯುವವರು ಆಗಲು ಸಾಧ್ಯವೆ?

2009 ರಿಂದ 2015 ರ ವರೆಗೆ ಶೇ.9.5 ರಷ್ಟು ರಿಕವರಿಯನ್ನು ನಿಗಧಿ ಪಡಿಸಲಾಗಿತ್ತು.

ಸಕ್ಕರೆಯು ಅಗತ್ಯ ವಸ್ತುಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ. ನಾವು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದೇವೆ.

ನಾನು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ಕೃಷಿ ಸಚಿವರಿಗೆ ಪತ್ರ ಬರೆದು, ಸ್ವತಃ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ರೈತರ ಹಿತ ಕಾಯುವಂತೆ ಒತ್ತಾಯಿಸಿದ್ದೇನೆ.

ಸಕ್ಕರೆಗೆ 2019 ರಲ್ಲಿ ಎಂ.ಎಸ್.ಪಿ. ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ ಪ್ರತಿ ಕೆಜಿ ಸಕ್ಕರೆಗೆ 31 ರೂಪಾಯಿ ನಿಗದಿ ಮಾಡಲಾಗಿತ್ತು. ಈಗಲೂ ಅಷ್ಟೆ ಇದೆ. ಆನಂತರ ಅದನ್ನು ಪರಿಷ್ಕರಿಸಲಿಲ್ಲ.

ನಾನು 08.11.2025 ರಂದು ಪ್ರಧಾನ ಮಂತ್ರಿಗಳಿಗೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿಯವರಿಗೆ ಬರೆದ ಪತ್ರದಲ್ಲಿ ಸಕ್ಕರೆಯನ್ನು ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಎಂದು ಎರಡು ವಿಭಾಗ ಮಾಡಿ ಬೆಲೆಯನ್ನು ನಿಗದಿಪಡಿಸಬೇಕೆಂದು ಒತ್ತಾಯ ಮಾಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಆಗಿರುವುದಿಲ್ಲ.

ಇದರ ಜೊತೆಯಲ್ಲಿ ಸಕ್ಕರೆ ರಫ್ತಿಗೂ ಕೂಡ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸುತ್ತಿದೆ.

ಈ ಬಾರಿ 15 ಲಕ್ಷ ಟನ್ನುಗಳನ್ನು ರಫ್ತು ಮಾಡುವ ಅಂದಾಜಿದೆ.

ದೇಶದಲ್ಲಿ 2024-25 ರಲ್ಲಿ 296.10 ಲಕ್ಷ ಮೆಟ್ರಿಕ್ ಟನ್ ಮತ್ತು 2025-26 ರಲ್ಲಿ 343.5 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯಾಗುತ್ತಿದ್ದರೂ ಸಹ, 2023-24 ರಲ್ಲಿ 11 ಲಕ್ಷ ಮೆಟ್ರಿಕ್ ಟನ್, 2024-25 ರಲ್ಲಿ 9 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾತ್ರ ರಫ್ತು ಮಾಡಲಾಗಿದೆ. 2025-26 ರಲ್ಲಿ 15 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸಕ್ಕರೆ ರಫ್ತು ಆಗಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಕರ್ನಾಟಕದಿಂದ ಈ ವರ್ಷ 2.47 ಲಕ್ಷ ಮೆಟ್ರಿಕ್ ಟನ್‌ಗಳನ್ನು ಮಾತ್ರ ರಫ್ತು ಮಾಡಲು ಅವಕಾಶ ಕಲ್ಪಿಸಿದ್ದಾರೆ. 2019 ರಲ್ಲಿ ಸಕ್ಕರೆ ಬೆಲೆಯನ್ನು ನಿಗದಿಪಡಿಸಿದ ನಂತರ ಮತ್ತೆ 1 ರೂಪಾಯಿಯೂ ಹೆಚ್ಚು ಮಾಡಲಿಲ್ಲ. ಎರಡು ವರ್ಷಗಳ ಹಿಂದೆ ಎಥೆನಾಲ್ ಬೆಲೆ ಪರಿಷ್ಕರಣೆ ಆಗಿದ್ದು ಬಿಟ್ಟರೆ, ಅದನ್ನೂ ಹೆಚ್ಚು ಮಾಡಲಿಲ್ಲ. 2021-22 ರಲ್ಲಿ 110 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಅವಕಾಶ ನೀಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಸಕ್ಕರೆ ರಫ್ತನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಪರೋಕ್ಷವಾಗಿ ಕಬ್ಬು ಉತ್ಪಾದಿಸುವ ರೈತರಿಗೆ ಹೊಡೆತ ಬೀಳುತ್ತಿದೆ. ಆದ್ದರಿಂದ ನಮ್ಮ ಸರ್ಕಾರವು ಕೂಡಲೇ ದೇಶಕ್ಕೆ ಅಗತ್ಯವಿರುವಷ್ಟು ಸಕ್ಕರೆಯನ್ನು ಹೊರತುಪಡಿಸಿ ಉಳಿದ ಸಕ್ಕರೆಯನ್ನು ರಫ್ತು ಮಾಡಬೇಕೆಂದು ಒತ್ತಾಯಿಸುತ್ತದೆ.

Siddaramaiah
Image credit: https://www.facebook.com/Siddaramaiah.Official

ಹಾಗೆಯೇ, ಒಂದು ಲೀಟರ್ ಎಥನಾಲ್‌ಗೆ 65 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಆದರೆ ಪೆಟ್ರೋಲಿಯಂ ಬೆಲೆ ರೂ.100 ರ ಆಸುಪಾಸಿನಲ್ಲಿದೆ. ಹಾಗಾಗಿ, ಪೆಟ್ರೋಲಿಯಂ ಕಂಪನಿಗಳಿಗೆ 65 ರೂಪಾಯಿ ನಿಗದಿಪಡಿಸಿರುವುದರಿಂದ ಉಳಿಕೆ ಹಣ ಅಂಬಾನಿ ಮುಂತಾದವರ ಪಾಲಾಗುತ್ತಿದೆ. ಇದನ್ನೂ ಕೂಡ ರೀವಿಸಿಟ್ ಮಾಡಬೇಕಾದ ಅಗತ್ಯ ಇದೆ.

ಈಗ ಹೇಳಿ, ಕಬ್ಬು ಬೆಳೆಯುವ ರೈತರ ಸಂಕಷ್ಟಕ್ಕೆ ಕಾರಣ ಯಾರು?

•​ಎಫ್.ಆರ್.ಪಿ ಕಡಿಮೆ ನಿಗದಿಪಡಿಸಿದ ಕೇಂದ್ರ ಸರ್ಕಾರ ತಾನೆ ?

•​ಸಕ್ಕರೆ ಬೆಲೆ ಪರಿಷ್ಕರಣೆ ಮಾಡದ ಕೇಂದ್ರ ಸರ್ಕಾರ ತಾನೆ ?

•​ಸಕ್ಕರೆ ರಫ್ತನ್ನು ನಿರ್ಬಂಧಿಸಿದರುವ ಮೋದಿ ಸರ್ಕಾರ ತಾನೆ ?

•​ಎಥನಾಲ್ ಬೆಲೆ ಕಡಿಮೆ ನಿಗದಿಪಡಿಸಿರುವ ಮೋದಿ ಸರ್ಕಾರ ತಾನೆ ?

ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿ ರಾಜ್ಯ ಸರ್ಕಾರ ಕೈ ಕಟ್ಟಿ ಕೂರಲಿಲ್ಲ. ಸ್ವತಃ ನಾನೆ ನಮ್ಮ ಸಚಿವರು, ಅಧಿಕಾರಿಗಳ ಜೊತೆ ಸೇರಿ ಹಲವು ಸಭೆಗಳನ್ನು ಮಾಡಿದೆವು. ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಒಂದಿಡೀ ದಿನ ಸಭೆ ನಡೆಸಿದೆವು. ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆದು ಸ್ವತಃ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆವು.

ಕೇಂದ್ರ ಸರ್ಕಾರವು ಶೇ. 10.25 ರಷ್ಟು ರಿಕವರಿ ಇದ್ದರೆ ರೂ.3550 ಗಳನ್ನು ಎಫ್.ಆರ್.ಪಿ ಎಂದು ನಿಗದಿಪಡಿಸಿದೆ. ಇದರಲ್ಲಿ ಮೊದಲೆ ಹೇಳಿದ ಹಾಗೆ 800-900 ರೂಲಪಾಯಿಗಳನ್ನು ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಗಳಿಗಾಗಿ ಕಳೆದರೆ ರೈತರಿಗೆ ಉಳಿಯುವುದು ರೂ.2650-2750 ರೂಪಾಯಿಗಳು ಮಾತ್ರ. ಆದರೆ ಸರ್ಕಾರವು ಗಟ್ಟಿ ನಿರ್ಧಾರ ಮಾಡಿ ಮತ್ತು ಸರ್ಕಾರ ತನ್ನ ಬೊಕ್ಕಸದಿಂದ 50 ರೂಪಾಯಿಗಳನ್ನು ಟನ್ನಿಗೆ ಒದಗಿಸಿ ಶೇ. 11.25 ರಷ್ಟು ರಿಕವರಿ ಬರುವ ಕಬ್ಬಿಗೆ 3300 ರೂಪಾಯಿಗಳವರೆಗೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕೆಂದು ಆದೇಶಿಸಲಾಗಿದೆ. ಇದರಿಂದ, ರೈತರಿಗೆ ಕಳೆದ ವರ್ಷ ಸಿಗುತ್ತಿದ್ದ ಬೆಳೆಗಳಿಂತ ಸರಾಸರಿ ಒಂದು ಟನ್ನಿಗೆ 300 ರೂಪಾಯಿಗಳಷ್ಟು ಹೆಚ್ಚಿನ ದರ ಸಿಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿನ ಮೇಲೆ ರೂ.150 ಎಫ್.ಆರ್.ಪಿ ಹೆಚ್ಚಿಸಿದೆ. ಆದರೆ, ನಮ್ಮ ಸರ್ಕಾರ ಮಧ್ಯ ಪ್ರವೇಶ ಮಾಡಿದ ಕಾರಣಕ್ಕೆ ರೈತರಿಗೆ ಸರಾಸರಿ 300 ರೂಪಾಯಿಗಳಿಗಿಂತ ಹೆಚ್ಚು ದರ ಪ್ರತಿ ಟನ್ನಿಗೆ ದೊರೆಯುತ್ತಿದೆ.

ನಮ್ಮ ಸರ್ಕಾರ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದ ಕಾರಣಕ್ಕೆ ಎಥನಾಲ್ ಖರೀದಿ ಪ್ರಮಾಣವನ್ನು ಕೂಡ ತುಸು ಹೆಚ್ಚಿಸಲಾಗಿದೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
•​ತೂಕದಲ್ಲಿ ನಡೆಯುತ್ತಿದ್ದ ಮೋಸವನ್ನು ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಹಾಲಿ ಇದ್ದ ಹಳೆ ಮಾದರಿಯ (ಅನಲಾಗ್) ತೂಕದ ಯಂತ್ರಗಳ ಬದಲಾಗಿ ಡಿಜಿಟಲ್ ತೂಕ ಯಂತ್ರಗಳನÀÄ್ನ ಅಳವಡಿಸಲಾಗಿದೆ. ಸರ್ಕಾರದ ವತಿಯಿಂದಲೇ ಎಪಿಎಂಸಿ ಇರುವ ಕಡೆ ಉಚಿತವಾಗಿ ತೂಕವನ್ನು ಧೃಢೀಕರಿಸಿಕೊಂಡು ಹೆೆÆÃಗಲು ಡಿಜಿಟಲ್ ಕಬ್ಬು ತೂಕ ಮಾಡುವ ಸೇತುವೆಗಳನ್ನು (ವೇಯಿಂಗ್ ಬ್ರಿಡ್ಜ್) ಗಳನ್ನು 11 ಜಾಗಗಳಲ್ಲಿ ಅಳವಡಿಸಲು ಕ್ರಮವಹಿಸಲಾಗುತ್ತಿದೆ.

•​ಅಲ್ಲದೆ, ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಅಳತೆ ಮಾಡುವ ಉಪಕರಣಗಳನ್ನು National Accreditation Board for Testing and Calibration Laboratories (NABL)ಇವರಿಂದ ಕಡ್ಡಾಯವಾಗಿ ಮಾನ್ಯತೆ ಪಡೆದುಕೊಳ್ಳಲು ಷರತ್ತು ವಿಧಿಸಲಾಗಿದೆ. ಹಾಗೂ ಪ್ರತಿ ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಪ್ರಮಾಣವನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳ ರಚಿಸಲಾಗಿದೆ. ಸದರಿ ತಂಡವರಿಗೆ ಸರ್ಕಾರಿ ಸ್ವಾಮ್ಯದ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಕ್ಕರೆ ತಜ್ಞರಿಂದ ಸಕ್ಕರೆ ಇಳುವರಿ ಪರಿಶೀಲನೆ ಮಾಡುವ ಕುರಿತು ತರಬೇತಿ ನೀಡಲಾಗಿದೆ. ಶೇ.10 ಇಳುವರಿ ಕಡಿಮೆ ಇರುವ ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ತಜ್ಞರ ನೇತೃತ್ವದಲ್ಲಿ (ವಿಜಿಲೆನ್ಸ್ ಟೀಮ್) ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ.

•​ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬAಧಪಟ್ಟAತೆ ಪರಿಶೀಲನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ.

•​ಯಾವುದೇ ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಆಗುತ್ತಿರುವ ಬಗ್ಗೆ ಯಾವುದೇ ರೈತರು ಲಿಖಿತ ದೂರು ನೀಡಿದಲ್ಲಿ, 5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಿಸಲಾಗಿದೆ. ಅಂತಹ ರೈತರ ಕಬ್ಬನ್ನು ಸಹ ಸರ್ಕಾರದ ವತಿಯಿಂದ ಉಚಿತವಾಗಿ ನುರಿಸಲಾಗುತ್ತದೆ.

•​2024-25 ನೇ ಸಾಲಿನಲ್ಲಿ ರೈತರಿಗೆ ಈ ಅವಧಿಯಲ್ಲಿ 18,221.88 ಕೋಟಿ ರೂ. ಗಳನ್ನು ಎಫ್.ಆರ್.ಪಿ. ದರದಂತೆ ಪಾವತಿಸಬೇಕಾಗಿತ್ತು. ಆದರೂ ಸಹ ಕೆಲವು ಕಡೆ ರಿಕವರಿ (ಸಕ್ಕರೆ ಇಳುವರಿ) ಹೆಚ್ಚು ಬಂದ ಕಾರಣ 19,569.15 ಕೊಟಿ ರೂ. ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನ ಟ್ರಾö್ಯಕ್ಟರ್ ಹಾಗೂ ಇನ್ನಿತರೆ ವಾಹನಗಳು ಹಾಗೂ ಕಬ್ಬನ್ನು ಸುಟ್ಟಿರುವ ಘಟನೆ

•​ಆರ್. ಅಶೋಕ್ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ರೈತರು ಕಬ್ಬಿನ ಬೆಲೆ ನಿಗದಿಪಡಿಸಲು ಪ್ರತಿಭಟನೆ ನಡೆಸುತ್ತಿದ್ದಾಗ 250 ಟ್ರಾಕ್ಟರ್ ಸುಟ್ಟಿರುವುದಾಗಿ ಹೇಳಿದ್ದಾರೆ. ವಾಸ್ತವ ಹೀಗಿದೆ. 1 ಟ್ರಾö್ಯಕ್ಟರ್ ಸಂಪೂರ್ಣ ಸುಟ್ಟು ಹೋಗಿದೆ. 12 ಟ್ರಾö್ಯಕ್ಟರ್ ಇಂಜಿನ್‌ಗಳು ಭಾಗಶಃ ಸುಟ್ಟಿವೆ. 17 ಟ್ರೇಲರ್‌ಗಳ ಟಯರ್, 8 ಮೋಟಾರ್ ಸೈಕಲ್, 3 ಹೆಚ್‌ಜಿವಿ ಟ್ಯಾಂಕರ್ ಇತರೆ ಸೇರಿ ಒಟ್ಟು 43 ವಾಹನಗಳಿಗೆ ಹಾನಿಯಾಗಿತ್ತು. ಇದರಲ್ಲಿ ಕೆಲವು ಜಖಂ ಗೊಂಡಿವೆ. ಕೆಲವು ಭಾಗಶಃ ಸುಟ್ಟಿವೆ. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿAದ ಈ ಹಾನಿ ಮೊತ್ತ ಒಟ್ಟು 25,68,000 ರೂಪಾಯಿಗಳನ್ನು ಸಂಬAಧಪಟ್ಟ ವಾಹನಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ನಮ್ಮ ಸರ್ಕಾರ ರೈತರ ಮೇಲೆ ಬಲ ಪ್ರಯೋಗ ಮಾಡಬಾರದು ಎಂಬ ಉದ್ದೇಶದಿಂದ ತಕ್ಷಣದ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆದರೆ ರೈತರು ತಾವೆ ಬೆಳೆದ ಬೆಳೆಗೆ ಬೆಂಕಿ ಹಚ್ಚುವಷ್ಟು ನೀಚರಲ್ಲ. ಬೆಂಕಿ ಹಚ್ಚಿದವರಲ್ಲಿ ಸುಮಾರು 13 ಜನ ರೈತರಲ್ಲ ಎಂಬುದು ತಿಳಿದು ಬಂದಿದೆ. ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಇದಿಷ್ಟನ್ನು ವಿರೊಧ ಪಕ್ಷದ ಸದಸ್ಯರುಗಳು ಕೇಳಿ, ನಮ್ಮ ಸರ್ಕಾರ ರೈತರ ಪರವಾಗಿದೆಯೋ ಅಥವಾ ಮೋದಿಯವರ ಕೇಂದ್ರ ಸರ್ಕಾರ ರೈತರ ಪರವಾಗಿದೆಯೋ ಎಂಬುದನ್ನು ತೀರ್ಮಾನಿಸಬೇಕಾಗಿದೆ.

Good news for farmers milk subsidy Rs 7 Increase: CM Siddaramaiah’s announcement