D. K. Shivakumar | ಮುಂದಿನ CM ಡಿಕೆ ಶಿವಕುಮಾರ್, ಹುಲಿಗೆಮ್ಮ ದೇವಿಯ ಜೋಗತಿ ಭವಿಷ್ಯ

Next CM DK Shivakumar: Huligemma Devi's Jogati's future

ಬೆಂಗಳೂರು: ರಾಜ್ಯ ರಾಜಕರಾಣದಲ್ಲಿ ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರದ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಗದಗದ ರಾಚೋಟೇಶ್ವರ ನಗರದ ನಿವಾಸಿ, ಹುಲಿಗೆಮ್ಮ ದೇವಿಯ ಜೋಗತಿ ಭೈಲಮ್ಮ ಬಾಳಮಣ್ಣ ಭವಿಷ್ಯ ನುಡಿದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಅಭಿಮಾನಿಯೊಬ್ಬರು ಭವಿಷ್ಯ ಕೇಳಿರುವ ವಿಡಿಯೋ ವೈರಲ್ ಆಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ತಾಳಿ ಕಟ್ಟುವ ಮುನ್ನವೇ ಸ್ಮೃತಿ ಮಂಧಾನ ತಂದೆಗೆ ಹೃದಯಘಾತ, ಮದುವೆ ಮುಂದೂಡಿಕೆ..!

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ: ಪುರುಷರು ಮೂತ್ರ ವಿಸರ್ಜಿಸುವಾಗ ಕುಳಿತುಕೊಳ್ಳಬೇಕೇ? ನಿಂತುಕೊಳ್ಳಬೇಕೇ?

ಇದನ್ನು ಮಿಸ್‌ ಮಾಡದೇ ಓದಿ: ಖಾಲಿ ಹೊಟ್ಟೆಗೆ ಕಾಫಿ ಕುಡಿಯೋ ಮುನ್ನ ಇದನ್ನು ಮಿಸ್ ಮಾಡದೇ ಓದಿ…!

ಗದ್ದುಗೆ ಹಾಕಿ ದೇವಿ ಕೊಡ ಎತ್ತುವ ಮೂಲಕ ಜೋಗತಿ ಅಮ್ಮ ಭವಿಷ್ಯ ನುಡಿಸಿದ್ದಾರೆ. ಅಂದ ಹಾಗೇ ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯ ಸುಳ್ಳು ಆಗುವುದಿಲ್ಲ ಎನ್ನುವುದು ಈ ಭಾಗದಲ್ಲಿ ನಂಬಿಕೆ ಹೆಚ್ಚಾಗಿದೆ, ಹೀಗಾಗಿ ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯದ ಬಗ್ಗೆ ಎಲ್ಲರಲ್ಲಿ ಚರ್ಚೆ ಮಾಡುವಂತೆ ಮಾಡಿದೆ. ದೇವಿಯ ಆರಾಧಕಿಯಾಗಿರುವ ಭೈಲಮ್ಮ, ’ ಬಿಟ್ಟು ಕೊಡ್ತಾರಾ, ಎಲ್ಲೂ ಮಿಸಕಬೇಡ’ ಎಂದು ಹೇಳಿದ್ದಾರೆ.

Next CM DK Shivakumar Huligemma Devi's Jogati's future
Next CM DK Shivakumar Huligemma Devi’s Jogati’s future

ಇನ್ನೂ ಇದೇ ವೇಳೆ ಜೋಗತಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು ಅವರು ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯ ಎಂದಿಗೂ ಕೂಡ ಸುಳ್ಳು ಆಗೋದಿಲ್ಲ. ಇನ್ನೂ ಒಂದುವರೆ ಎರಡು ತಿಂಗಳ ಒಳಗಾಗಿ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಚಿಂತೆ ಮಾಡಬೇಡಿ ಅಂತ ಹೇಳಿದ್ದಾರೆ. ಇದಲ್ಲದೇ ಖುಷಿ ಖುಷಿಯಿಂದ ಡಿಕೆಶಿಗೆ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡುತ್ತಾರೆ ಜೋಗತಿ ಭವಿಷ್ಯ ನುಡಿದಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಲಾಗಿದೆ.

dk shivakumar
dk shivakumar

ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಿಎಂ ಹುದ್ದೆ ಹಸ್ತಾಂತರದ ನಡುವೆ ಭವಿಷ್ಯ ನುಡಿದಿರುವುದು ಸರಿಯಾಗಲಿದ್ಯ ಎನ್ನುವುದನ್ನು ಕಾದು ನೋಡಬೇಕಾಗಿದೆ. ಹುಲಿಗೆಮ್ಮ ದೇವಿಯ ಕಟ್ಟಾ ಆರಾಧಕಿಯಾಗಿರುವ ಭೈಲಮ್ಮ, ಗದಗಿನ ರಾಚೋಟೇಶ್ವರ ನಗರದ ನಿವಾಸಿಯಾಗಿದ್ದಾರೆ. ಇನ್ನೂ ಸಿಎಂ ಖುರ್ಚಿ ಬಿಟ್ಟುಕೊಡುವ ಬಗ್ಗೆ ಹೈಕಮಾಂಡ್ ನಿರ್ಧಾರವೇ ಫೈನಲ್ ಆಗಿದ್ದು, ರಾಹುಲ್‌ ಗಾಂಧಿ ವಿದೇಶದಿಂದ ವಾಪಸ್ಸು ಬಂದ ಬಳಿಕ ಎಲ್ಲವೂ ಅಂತಿಮವಾಗ ಬಹುದು ಎನ್ನಲಾಗಿದೆ.

RECENT NEWS