Ration card | ರಾಜ್ಯದ `ಪಡಿತರ ಚೀಟಿ’ದಾರರಿಗೆ ಗುಡ್ ನ್ಯೂಸ್ : ಫೆಬ್ರವರಿಗೆ ‘ಇಂದಿರಾ ಕಿಟ್’ ವಿತರಣೆ…!

indira kit
indira kit

ನವದೆಹಲಿ : ರಾಜ್ಯದ ಪಡಿತರ ಚೀಟಿದಾರರಿಗೆ ಸಚಿವ ಕೆ.ಹೆಚ್. ಮುನಿಯಪ್ಪ ಸಿಹಿಸುದ್ದಿ ನೀಡಿದ್ದು, ಮುಂದಿನ ವರ್ಷ ಫೆಬ್ರವರಿಗೆ ಇಂದಿರಾ ಕಿಟ್ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ‘ಇಂದಿರಾ ಗಾಂಧಿ’ ಹೆಸರಿನ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು. ಈ ಕಿಟ್‌ನಲ್ಲಿ ಬೇಳೆ, ಎಣ್ಣೆ, ಉಪ್ಪು ಮತ್ತು ಸಕ್ಕರೆ ಇರುತ್ತದೆ ಎಂದು ಸಚಿವರು ವಿವರಿಸಿದರು.

ಇದನ್ನು ಮಿಸ್ ಮಾಡದೇ ಓದಿ: ಇನ್ಮುಂದೆ ‘ನೌಕರರಿ’ಗೆ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ‘ವೇತನ’ ಪಾವತಿ ಕಡ್ಡಾಯ…!

ಇದನ್ನು ಮಿಸ್ ಮಾಡದೇ ಓದಿ: ‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : 23ನೇ ಕಂತಿನ ಹಣ ಈ ದಿನದಂದು ಬರಲಿದೆ…!

 

indira kit
indira kit

ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಕಿಟ್‌ನಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು. ಒಬ್ಬರು ಅಥವಾ ಇಬ್ಬರು ಸದಸ್ಯರಿದ್ದರೆ ಕಿಟ್‌ನಲ್ಲಿ 750 ಗ್ರಾಂ ತೊಗರಿ ಬೇಳೆ, ಅರ್ಧ ಲೀಟರ್‌ ಅಡುಗೆ ಎಣ್ಣೆ, ತಲಾ ಅರ್ಧ ಕಿಲೋ ಸಕ್ಕರೆ ಮತ್ತು ಉಪ್ಪು, ಮೂವರು ಅಥವಾ ನಾಲ್ವರು ಸದಸ್ಯರಿದ್ದರೆ ಒಂದೂವರೆ ಕಿಲೋ ಗ್ರಾಂ ತೊಗರಿ ಬೇಳೆ, ಒಂದು ಲೀಟರ್‌ ಅಡುಗೆ ಎಣ್ಣೆ, ತಲಾ ಒಂದು ಕಿಲೋ ಸಕ್ಕರೆ ಮತ್ತು ಉಪ್ಪು, ಐವರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 2,250 ಗ್ರಾಂ ತೊಗರಿ ಬೇಳೆ, ಒಂದೂವರೆ ಲೀಟರ್‌ ಅಡುಗೆ ಎಣ್ಣೆ, ತಲಾ ಒಂದೂವರೆ ಕಿಲೋ ಸಕ್ಕರೆ ಮತ್ತು ಉಪ್ಪು ವಿತರಿಸಲಾಗುವುದು.

indira kit
indira kit

“ಇಂದಿರಾ ಆಹಾರ ಕಿಟ್” ಕರ್ನಾಟಕ ಸರ್ಕಾರದ ಕಾರ್ಯಕ್ರಮವಾಗಿದ್ದು, ಇದು ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ 5 ಕೆಜಿ ಉಚಿತ ಅಕ್ಕಿಯನ್ನು ತಲಾ ಒಂದು ಕಿಲೋಗ್ರಾಂ ತೊಗರಿ ಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡಿರುವ ಆಹಾರ ಕಿಟ್‌ನೊಂದಿಗೆ ಬದಲಾಯಿಸುತ್ತದೆ. ಅರ್ಹ ಬಿಪಿಎಲ್ ಕುಟುಂಬಗಳಿಗೆ ಹೆಚ್ಚು ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಒದಗಿಸುವ ಪ್ರಯತ್ನದ ಭಾಗವಾಗಿ ಈ ಬದಲಾವಣೆಯನ್ನು ಮಾಡಲಾಗಿದೆ.

ಇದನ್ನು ಮಿಸ್ ಮಾಡದೇ ಓದಿ: ದ್ವಿಚಕ್ರ ವಾಹನಗಳಲ್ಲಿ ‘ಮಕ್ಕಳಿಗೆ ಹೆಲ್ಮೆಟ್’ ಕಡ್ಡಾಯ, ಕರ್ನಾಟಕ ಹೈಕೋರ್ಟ್…!

ಇದನ್ನು ಮಿಸ್ ಮಾಡದೇ ಓದಿ: ಇಲ್ಲಿವೆ `ಕರ್ನಾಟಕದ CM, DCM, ಎಲ್ಲಾ ಸಚಿವರುಗಳ ದೂರವಾಣಿ ಸಂಖ್ಯೆ’ ಪಟ್ಟಿ.!

 

Siddaramaiah government’s Anna Bhagya gets surgery, Indira Food Kit