Rcb Vs Dc IPL 2025 | ಕೊಹ್ಲಿ ತವರಲ್ಲಿ ಗೆದ್ದು ಬೀಗಿದ RCB, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ..

rcb vs dc

ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಮೋಘ ಗೆಲುವು ಕಂಡಿದೆ.

ಈ ಮೂಲಕ ತವರು ನೆಲದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಅದರದ್ದೇ ಆದ ನೆಲದಲ್ಲಿ ಸೋಲಿಸುವ ಮೂಲಕ ತನ್ನ ಸೇಡನ್ನು ತೀರಿಸಿಕೊಂಡಿದೆ.ಇನ್ನೂ ಗೆಲುವಿನೊಂದಿಗೆ ಆರ್‌ರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಈ ಮೂಲಕ ಪ್ಲೇ ಆಪ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

krunal pandya and virat kohli

ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಮಾಡಲು ನಿರ್ಧರಿಸಿತು, ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಡಿಸಿ 8 ವಿಕೆಟ್‌ ಕಳೆದುಕೊಂಡು 162 ರನ್‌ ಗನ್ನು ಗಳಿಸಿದರು. ಗೆಲುವಿನ ರನ್‌ ಅನ್ನು ಬೆನ್ನತ್ತಿದ್ದ ಆರ್‌ಸಿಬಿಗೆ 4 ವಿಕೆಟ್‌ ಕಳೆದುಕೊಂಡು 165 ಅನ್ನು ಗಳಿಸುವುದರ ಮೂಲಕ ತನ್ನ ಗೆಲುವು ಕಂಡಿತು.

krunal pandya and virat kohli

ಸಂಕ್ಷಿಪ್ತ ಸ್ಕೋರು ವಿವರ ಹೀಗಿದೆ:

ಡೆಲ್ಲಿ ಕ್ಯಾಪಿಟಲ್ಸ್ ತಂಡ: 20 ಓವರ್‌ಗಳಲ್ಲಿ 8ಕ್ಕೆ162 (ಅಭಿಷೇಕ್ ಪೊರೆಲ್ 28, ಫಾಫ್ ಡುಪ್ಲೆಸಿ 22, ಕೆ.ಎಲ್. ರಾಹುಲ್ 41, ಟ್ರಿಸ್ಟನ್ ಸ್ಟಬ್ಸ್‌ 34, ಭುವನೇಶ್ವರ್ ಕುಮಾರ್ 33ಕ್ಕೆ3, ಜೋಶ್ ಹೇಜಲ್‌ವುಡ್ 36ಕ್ಕೆ2)

ರಾಯಲ್ ಚಾಲೆಂಜರ್ಸ್ ಬೆಂಗಳೂರು: 18.3 ಓವರ್‌ಗಳಲ್ಲಿ 4ಕ್ಕೆ165 (ವಿರಾಟ್ ಕೊಹ್ಲಿ 51, ಕೃಣಾಲ್ ಪಾಂಡ್ಯ ಅಜೇಯ 73, ಟಿಮ್ ಡೇವಿಡ್ ಅಜೇಯ 19, ಅಕ್ಷರ್ ಪಟೇಲ್ 19ಕ್ಕೆ2, ದುಷ್ಮಂತ ಚಾಮೀರ 24ಕ್ಕೆ1) ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ ಕೃಣಾಲ್‌ ಪಾಂಡ್ಯ’

RCB beat DC, RCB won by 6 wickets (with 9 balls remaining)