1. ಭಾರತದ ಸಂವಿಧಾನದ ಯಾವ ವಿಧಿಯು ‘ಸಮಾನತೆಯ ಹಕ್ಕನ್ನು’ ಪ್ರತಿಪಾದಿಸುತ್ತದೆ?
A. ವಿಧಿ 32
B. ವಿಧಿ 23 ಮತ್ತು 24
C. ವಿಧಿ 14 ರಿಂದ 18
D. ವಿಧಿ 19 ರಿಂದ 22
ಸರಿಯಾದ ಉತ್ತರ C. ವಿಧಿ 14 ರಿಂದ 18
ಕಾರಣ : ಸಂವಿಧಾನದ 14 ರಿಂದ 18ನೇ ವಿಧಿಗಳು ಕಾನೂನಿನ ಮುಂದೆ ಸಮಾನತೆ ಮತ್ತು ತಾರತಮ್ಯದ ನಿಷೇಧದ ಬಗ್ಗೆ ತಿಳಿಸುತ್ತವೆ.
2. ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು?
A. ಮಹಮ್ಮದ್ ಗವಾನ್
B. ಶ್ರೀಕೃಷ್ಣದೇವರಾಯ
C. ಹರಿಹರ ಮತ್ತು ಬುಕ್ಕ
D. ಇಮ್ಮಡಿ ಪುಲಿಕೇಶಿ
ಸರಿಯಾದ ಉತ್ತರ C. ಹರಿಹರ ಮತ್ತು ಬುಕ್ಕ
ಕಾರಣ : ಕ್ರಿ.ಶ. 1336 ರಲ್ಲಿ ಸಂಗಮ ವಂಶದ ಈ ಸಹೋದರರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.ಇವರು ಸಂಗಮ ವಂಶಕ್ಕೆ ಸೇರಿದ ಇಬ್ಬರು ಸಹೋದರರು.
3. ವಿಶ್ವದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
A. ಆಗುಂಬೆ
B. ಅಮೆಜಾನ್ ಮಳೆಕಾಡು
C. ಮೌಸಿನ್ ರಾಮ್
D. ಚಿರಾಪುಂಜಿ
ಸರಿಯಾದ ಉತ್ತರ C ಮೌಸಿನ್ ರಾಮ್
ಕಾರಣ : ಮೇಘಾಲಯದ ಮೌಸಿನ್ ರಾಮ್ ಪ್ರಸ್ತುತ ವಿಶ್ವದಲ್ಲೇ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶವಾಗಿದೆ. ಈ ಸ್ಥಳವು ಭಾರತದ ಮೇಘಾಲಯ ರಾಜ್ಯದಲ್ಲಿದೆ.
4. ಬ್ಯಾಕಿಂಗ್ ಸೋಡಾದ ರಾಸಾಯನಿಕ ಹೆಸರೇನು?
A. ಕ್ಯಾಲ್ಸಿಯಂ ಕಾರ್ಬೋನೇಟ್
B. ಸೋಡಿಯಂ ಕಾರ್ಬೋನೇಟ್
C. ಸೋಡಿಯಂ ಬೈಕಾರ್ಬೋನೇಟ್
D. ಸೋಡಿಯಂ ಕ್ಲೋರೈಡ್
ಸರಿಯಾದ ಉತ್ತರ C, ಸೋಡಿಯಂ ಬೈಕಾರ್ಬೋನೇಟ್, ಕಾರಣ : ಇದನ್ನು ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ಎಂದೂ ಕರೆಯುತ್ತಾರೆ.
5. ಕರ್ನಾಟಕದ ಯಾವ ಜಿಲ್ಲೆಯನ್ನು ‘ಭಾರತದ ಕಾಫಿ ನಾಡು’ ಎಂದು ಕರೆಯಲಾಗುತ್ತದೆ?
A. ಕೊಡಗು
B. ಹಾಸನ
C. ಶಿವಮೊಗ್ಗ
D. ಚಿಕ್ಕಮಗಳೂರು
ಸರಿಯಾದ ಉತ್ತರ D,
ಕಾರಣ : ಬಾಬಾ ಬುಡನ್ ಗಿರಿಯಲ್ಲಿ ಮೊದಲ ಬಾರಿಗೆ ಕಾಫಿ ಬೆಳೆ ಪರಿಚಯಿಸಿದ್ದರಿಂದ ಇದನ್ನು ಕಾಫಿ ನಾಡು ಎನ್ನುತ್ತಾರೆ. ಬಾಬಾ ಬುಡನ್ ಗಿರಿ ಶ್ರೇಣಿ ಇಲ್ಲಿದೆ.
6. ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಾವ ವರ್ಷದಲ್ಲಿ ಸ್ಥಾಪನೆಯಾಯಿತು?
A. 1949
B. 1935
C. 1950
D. 1947
ಸರಿಯಾದ ಉತ್ತರ B
ಕಾರಣ: ಏಪ್ರಿಲ್ 1, 1935 ರಂದು RBI ಕಾಯ್ದೆಯಡಿ ಇದನ್ನು ಸ್ಥಾಪಿಸಲಾಯಿತು. ಇದು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಅವಧಿಯಲ್ಲಿ ಸ್ಥಾಪನೆಯಾಯಿತು.
7. ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
A. ರಾಜಾರಾಮ್ ಮೋಹನ್ ರಾಯ್
B. ಜ್ಯೋತಿಬಾ ಫುಲೆ
C. ದಯಾನಂದ ಸರಸ್ವತಿ
D. ಸ್ವಾಮಿ ವಿವೇಕಾನಂದ
ಸರಿಯಾದ ಉತ್ತರ A
ಕಾರಣ: ಏಪ್ರಿಲ್ 1, 1935 ರಂದು RBI ಕಾಯ್ದೆಯಡಿ ಇದನ್ನು ಸ್ಥಾಪಿಸಲಾಯಿತು. ಇದು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಅವಧಿಯಲ್ಲಿ ಸ್ಥಾಪನೆಯಾಯಿತು. ಇವರು 1828 ರಲ್ಲಿ ಸಾಮಾಜಿಕ ಸುಧಾರಣೆಗಾಗಿ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು.
8.ಮಾನವನ ದೇಹದ ಅತಿ ದೊಡ್ಡ ಗ್ರಂಥಿ ಯಾವುದು?
A. ಮೇದೋಜೀರಕ ಗ್ರಂಥಿ
B. ಯಕೃತ್ತು (Liver)
C. ಥೈರಾಯ್ಡ್ ಗ್ರಂಥಿ
D. ಪಿಟ್ಯುಟರಿ ಗ್ರಂಥಿ
ಸರಿಯಾದ ಉತ್ತರ B
ಕಾರಣ: ಯಕೃತ್ತು ಮಾನವ ದೇಹದ ಅತಿ ದೊಡ್ಡ ಆಂತರಿಕ ಗ್ರಂಥಿ ಮತ್ತು ಅಂಗವಾಗಿದೆ. ಇದು ಪಿತ್ತರಸವನ್ನು (Bile) ಉತ್ಪಾದಿಸುತ್ತದೆ.
9. ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
A. ಸುಮಾರು 5 ನಿಮಿಷ
B. ಸುಮಾರು 8 ನಿಮಿಷ 20 ಸೆಕೆಂಡ್
C. ಸುಮಾರು 10 ನಿಮಿಷ
D. ಸುಮಾರು 2 ನಿಮಿಷ
ಸರಿಯಾದ ಉತ್ತರ B
ಅಂತರದ ಪ್ರಕಾರ ಇದು ಸರಿ ಸುಮಾರು 8 ನಿಮಿಷ ತೆಗೆದುಕೊಳ್ಳುತ್ತದೆ, ಇದು 8 ನಿಮಿಷಗಳಿಗಿಂತ ಸ್ವಲ್ಪ ಹೆಚ್ಚು ಸಮಯ.
“ಈ ಪ್ರಶ್ನೆಗಳು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ” ಪ್ರತಿ ದಿನ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಇದೇ ರೀತಿಯ ಪ್ರಶ್ನೆಗಳನ್ನು ಪ್ರತಿ ದಿನ ನೀಡಲಾಗುವುದು