ಟ್ರಂಪ್‌ರಿಂದ ಪಾಕ್ ಪ್ರಧಾನಿ ಪ್ರಾಣ ಉಳಿಯಿತೇ? ಭಾರತ-ಪಾಕ್ ಯುದ್ಧದ ಬಗ್ಗೆ ಅಮೆರಿಕ ಅಧ್ಯಕ್ಷರ ಹೇಳಿಕೆಯ ಅಸಲಿಯತ್ತೇನು?

I was the one who prevented India-Pakistan nuclear war Donald Trump's surprising statement

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ವಿವಾದಾತ್ಮಕ ಮತ್ತು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. “ನಾನೇ ಇಲ್ಲದಿದ್ದರೆ ಭಾರತ-ಪಾಕ್ ನಡುವೆ ಅಣು ಯುದ್ಧ ನಡೆಯುತ್ತಿತ್ತು ಮತ್ತು ಪಾಕ್ ಪ್ರಧಾನಿ ಪ್ರಾಣ ಕಳೆದುಕೊಳ್ಳುತ್ತಿದ್ದರು” ಎಂಬರ್ಥದಲ್ಲಿ ಟ್ರಂಪ್ ಮಾತನಾಡಿದ್ದು, ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ಸಂಸತ್ತಿನ ‘ಸ್ಟೇಟ್ ಆಫ್ ಯೂನಿಯನ್’ ಭಾಷಣದಲ್ಲಿ ಮಾತನಾಡಿದ ಟ್ರಂಪ್, ತಾವು ಅಧಿಕಾರಕ್ಕೆ ಬಂದ ಕೇವಲ 10 ತಿಂಗಳಲ್ಲಿ ಎಂಟು ಯುದ್ಧಗಳನ್ನು ತಡೆದಿದ್ದೇನೆ ಎಂದು ಪ್ರತಿಪಾದಿಸಿದರು. ಈ ವೇಳೆ ಭಾರತ-ಪಾಕ್ ವಿಷಯ ಪ್ರಸ್ತಾಪಿಸುತ್ತಾ, “ನಾನು ಮಧ್ಯಪ್ರವೇಶ ಮಾಡದಿದ್ದರೆ 35 ಮಿಲಿಯನ್ (3.5 ಕೋಟಿ) ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದಾರೆ” ಎಂದರು.

ಗೊಂದಲಕ್ಕೆ ಕಾರಣವಾದ ಟ್ರಂಪ್ ಮಾತು: ಟ್ರಂಪ್ ಈ ಮಾತುಗಳನ್ನು ಹೇಳುವಾಗ ವಿರಾಮವಿಲ್ಲದೆ ಮಾತನಾಡಿದ್ದರಿಂದ, “ನಾನಿಲ್ಲದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮೃತಪಡುತ್ತಿದ್ದರು ಎಂದು 35 ಮಿಲಿಯನ್ ಜನ ಹೇಳುತ್ತಿದ್ದಾರೆ” ಎಂಬ ತಪ್ಪು ಅರ್ಥ ಸ್ಫುರಿಸಿತು. ಇದು ಸಭೆಯಲ್ಲಿದ್ದವರಲ್ಲಿ ಮತ್ತು ರಾಜತಾಂತ್ರಿಕ ವಲಯದಲ್ಲಿ ಗೊಂದಲ ಮೂಡಿಸಿತು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಭಾರತದ ಸ್ಪಷ್ಟನೆ: ಹಿಂದೆಯೂ ಟ್ರಂಪ್ ಇಂತಹ ಹೇಳಿಕೆಗಳನ್ನು ನೀಡಿದ್ದರು. ಎರಡೂ ದೇಶಗಳಿಗೆ 200% ಸುಂಕದ (Tariff) ಬೆದರಿಕೆ ಹಾಕಿದ್ದರಿಂದಲೇ ಯುದ್ಧ ನಿಂತಿತು ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು. ಆದರೆ, ಭಾರತ ಸರ್ಕಾರ ಇದನ್ನು ಈಗಾಗಲೇ ತಳ್ಳಿಹಾಕಿದೆ. ‘ಆಪರೇಷನ್ ಸಿಂದೂರ್’ ಸಂದರ್ಭದಲ್ಲಿ ಪಾಕ್ ಜೊತೆಗಿನ ಕದನ ವಿರಾಮದಲ್ಲಿ ಯಾವುದೇ ಮೂರನೇ ದೇಶದ ಹಸ್ತಕ್ಷೇಪ ಇರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

RECENT NEWS