ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 34 ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 18ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ಮತ್ತು ಪಿಬಿಕೆಎಸ್ ಎರಡೂ ತಮ್ಮ ಇತ್ತೀಚಿನ ಪಂದ್ಯಗಳಲ್ಲಿ ಮುಖಾಮುಖಿಯ ಪಂದ್ಯಗಳಲ್ಲಿ ಹೆಚ್ಚಿನ ಗೆಲುವು ಕಾಣುತ್ತಿರುವುದರಿಂದ ಇಂದಿನ ಪಂದ್ಯ ಹೆಚ್ಚಿನ ಕೂತಹಲವನ್ನು ಪಡೆದುಕೊಂಡಿರುವುದರಲ್ಲಿ ಸುಳ್ಳಲ್ಲ.

ಐಪಿಎಲ್ ಕರ್ನಾಟಕ
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ತಂಡವನ್ನು ಎದುರಿಸಿದ ಬೆಂಗಳೂರು ಪಂದ್ಯದುದ್ದಕ್ಕೂ ಅಸಾಧಾರಣವಾಗಿ ಪ್ರದರ್ಶನ ನೀಡಿ ಅದ್ಭುತ ಗೆಲುವು ದಾಖಲಿಸಿರುವುದನ್ನು ನಾವು ಕಾಣಬಹುದಾಗಿದೆ. ಈಗ ಅವರು ಮತ್ತೊಂದು ಉತ್ತಮ ಪ್ರದರ್ಶನವನ್ನು ನೀಡುವ ಮತ್ತು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸುವ ಭರವಸೆ ಹೊಂದಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 33 ಬಾರಿ ಮುಖಾಮುಖಿಯಾಗಿವೆ. ಪಂಜಾಬ್ 17 ಬಾರಿ ಗೆದ್ದಿದ್ದರೆ, ಆರ್ಸಿಬಿ 16 ಬಾರಿ ಗೆದ್ದಿದೆ.
ಇದನ್ನೂ ಓದಿ – ಹಿಂದುಳಿದ ವರ್ಗಗಳ 91 ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲು ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
ಆರ್ಸಿಬಿ ಐಪಿಎಲ್ 2025 ತಂಡ:
ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲಿಯಾಮ್ ಲಿವಿಂಗ್ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಮನೋಜ್ ಭಾಂಡಗೆ, ಜೇಕಬ್ ಬೆತೆಲ್, ಜೋಶ್ ಹೇಜಲ್ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಲುಂಗಿಸಾನಿ ಎನ್ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ, ಯಶ್ ದಯಾಳ್.

ಪಿಬಿಕೆಎಸ್ ಐಪಿಎಲ್ 2025 ತಂಡ: ಶ್ರೇಯಸ್ ಅಯ್ಯರ್, ನೇಹಾಲ್ ವಧೇರಾ, ವಿಷ್ಣು ವಿನೋದ್, ಜೋಶ್ ಇಂಗ್ಲಿಸ್, ಹರ್ನೂರ್ ಪನ್ನು, ಪೈಲಾ ಅವಿನಾಶ್, ಪ್ರಭ್ಸಿಮ್ರನ್ ಸಿಂಗ್, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಹರ್ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲಾ ಒಮರ್ಜೈ, ಪ್ರಿಯಾಂಶ್ ಆರ್ಯ, ಆರೋನ್ ಹಾರ್ಡಿ, ಮುಶೀರ್ ಖಾನ್, ಸೂರ್ಯಾಂಶ್ ಶೇಡ್ಜ್, ಅರ್ಷ್ದೀಪ್ ಸಿಂಗ್, ಯಜುವೇಂದ್ರ ಚಾಹಲ್, ವೈಶಾಕ್ ವಿಜಯಕುಮಾರ್, ಯಶ್ ಠಾಕೂರ್.
Follow Me