ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಗುರುವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎನ್ಡಬ್ಲ್ಯೂಯು ಪೊಚ್ ಆಹ್ವಾನಿತ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ 2025 ರ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. 84.52 ಮೀಟರ್ ದೂರ ಎಸೆದ ನೀರಜ್, ಸ್ಥಳೀಯ ಪ್ರತಿಸ್ಪರ್ಧಿಗಳಾದ ಡೌ ಸ್ಮಿತ್ (82.44 ಮೀ) ಮತ್ತು ಡಂಕನ್ ರಾಬರ್ಟ್ಸನ್ (71.22 ಮೀ) ಅವರನ್ನು ಸುಲಭವಾಗಿ ಸೋಲಿಸಿ ಅಗ್ರಸ್ಥಾನ ಪಡೆದರು.

ಅವರು ಬುಧವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ ಸ್ಪರ್ಧೆಯಲ್ಲಿ ಚೋಪ್ರಾ 84.52 ಮೀಟರ್ ದೂರಕ್ಕೆ ಈಟಿ ಎಸೆದು ಆರು ಜನರ ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಆರು ಸ್ಪರ್ಧಿಗಳ ಕಣದಲ್ಲಿ ಚೋಪ್ರಾ 84.52 ಮೀ. ದೂರ ಎಸೆಯುವ ಮೂಲಕ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದರು. ಚೋಪ್ರಾ ಮತ್ತು ಸ್ಮಿತ್ ಮಾತ್ರ ಸ್ಪರ್ಧೆಯಲ್ಲಿ 80 ಮೀಟರ್ ಗಡಿ ದಾಟಿದ ಇಬ್ಬರು ಕ್ರೀಡಾಪಟುಗಳಾಗಿದ್ದರು. ದಕ್ಷಿಣ ಆಫ್ರಿಕಾದ ಡಂಕನ್ ರಾಬರ್ಟ್ಸನ್ 71.22 ಮೀಟರ್ ದೂರ ಜಿಗಿದು ಮೂರನೇ ಸ್ಥಾನ ಪಡೆದುಕೊಂಡಿದ್ದರು.\

ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಮತ್ತು ವಿಶ್ವ ದಾಖಲೆ ಹೊಂದಿರುವ ಜೆಕ್ ಗಣರಾಜ್ಯದ ಜಾನ್ ಜೆಲೆಜ್ನಿ ಅವರ ಹೊಸ ತರಬೇತುದಾರರ ಅಡಿಯಲ್ಲಿ ಚೋಪ್ರಾ ಪೊಚೆಫ್ಸ್ಟ್ರೂಮ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚೋಪ್ರಾ ಮೇ 16 ರಂದು ದೋಹಾ ಡೈಮಂಡ್ ಲೀಗ್ ನಲ್ಲಿ ತಮ್ಮ ಎಲೈಟ್ ಮಟ್ಟದ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Follow Me