ಮಾನವನ ಸರ್ವತೋಮುಖ ಅಭಿವೃದ್ಧಿಗೆ ಮೂಲ ಕಾರಣರೂ ಋಷಿ ಮುನಿಗಳು: ಅರುಣ್

Sages and sages are the root cause of all-round development of humanity: Arun

ರಾಮನಗರ : ಭಾರತೀಯರ ಸನಾತನ ಧರ್ಮಕ್ಕೆ ಮೂಲ ಕಾರಣವೆಂದರೆ ನಮ್ಮ ಮಹರ್ಷಿಗಳು, ನಮ್ಮದು ಸನಾತನ ಪರಂಪರೆಯ ನಾಡು. ವೈದ್ಯ, ವೈಜ್ಞಾನಿಕ, ಸಾಹಿತ್ಯ, ಆರ್ಥಿಕ, ಖಗೋಳಶಾಸ್ತ್ರ, ಗಣಿತ, ವ್ಯವಸಾಯ, ಶೃಂಗಾರ, ಕಲೆ ಹೀಗೆ ಮುಂತಾದ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಮೂಲ ಕಾರಣರೂ ನಮ್ಮ ಋಷಿ ಮುನಿಗಳು ಎಂದು ಸಾಹಿತಿಗಳಾದ ಅರುಣ್ ಕವಣಾಪುರ ಅವರು ಅಭಿಪ್ರಾಯ ಪಟ್ಟರು.

ಅವರು ಜ. 25ರಂದು ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ!

ನಮ್ಮ ಭಾರತೀಯ ಮಹರ್ಷಿಗಳೆಂದರೆ ಕೃಷ್ಣ ದ್ವಿಪಾಯನ ಮಹರ್ಷಿ, ವಾಲ್ಮೀಕಿ ಮಹರ್ಷಿ, ನಾರದ, ವಸಿಷ್ಠ, ಹಂಗಿರಸ, ಮಾರ್ಕಂಡೇಯ, ವಿಶ್ವಾಮಿತ್ರ, ಭೃಗು, ಕಶ್ಯಪ, ಸವಿತಾ ಮಹರ್ಷಿ, ಮತಂಗ, ದೂರ್ವಾಸ ಹೀಗೆ ಮಹರ್ಷಿಗಳ ಪರಂಪರೆ ಇದ್ದು, ಇವರು ಮಾನವ ಕುಲದ ಅಭಿವೃದ್ಧಿಗಾಗಿ ಸಂಸ್ಕಾರಗಳನ್ನು ವೇದಗಳ ಕಾಲದಿಂದಲೂ ನೀಡುತ್ತಾ ಬಂದಿದ್ದಾರೆ. ಇವರಲ್ಲಿ ಒಬ್ಬರಾದ ಸವಿತಾ ಮಹರ್ಷಿಗಳು, ಇವರ ಜಯಂತೋತ್ಸವವು ರಥಸಪ್ತಮಿಯ ಮಾಘ ಮಾಸದಂದು ಆಚರಿಸಲಾಗುತ್ತದೆ. ಈ ರಥ ಸಪ್ತಮಿ ಋತುಮಾನದ ಹಬ್ಬವಾಗಿದೆ. ಸೂರ್ಯನಾರಾಯಣನ ಉಪಾಸಕರಿಗೆ ಸವಿತಾ ಜನಾಂಗವೆಂದು ಕರೆಯಲಾಗುತ್ತದೆ, ಸವಿತಾ ಮಹರ್ಷಿಗಳು ವೇದಗಳಲ್ಲಿ ಒಂದಾದ ಸಾಮವೇದವನ್ನು ಗಾಯನ ಹಾಗೂ ರಾಗ ರೂಪದಲ್ಲಿ ನೀಡಿದ್ದಾರೆ ಎಂದರು.

ಸವಿತಾ ಮಹರ್ಷಿಯವರು ಮಾಘ ಮಾಸದ ಸುಕ್ಲ ಪಕ್ಷದ ರಥಸಪ್ತಮಿಯ ದಿವಸ ಜನಿಸಿದವರು, ಧಾರ್ಮಿಕ ನೆಲೆಯಲ್ಲಿ ಹೇಳುವುದಾದರೆ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ, ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ನಂಬಲಾಗುತ್ತದೆ. ಕಣ್ಕಂಡ ದೇವರ ವರ ಬಲದಿಂದ ಹುಟ್ಟಿದ ಸವಿತಾ ಸಮಾಜದವರನ್ನು ಸೂರ್ಯವಂಶದಲ್ಲಿ ಜನಿಸಿದವರು ಎಂಬ ನಂಬಿಕೆ ಇದೆ. ರಾಷ್ಟ್ರಕೂಟರು, ವಿಜಯನಗರ, ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾಧನೆಗಳಾದ ಕತ್ತಿ, ಕನ್ನಡಿ, ಕತ್ತರಿಗಳನ್ನು ಕೆತ್ತಿಸಲಾಗಿದೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಸವಿತಾ ಸಮಾಜವು ತನ್ನ ಸೇವಾ ಕಾರ್ಯ ಸಿದ್ಧಿಗಳಿಂದಲೇ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಪ್ರಪಂಚದ ಎಲ್ಲಾ ಆವಿಷ್ಕಾರಗಳ ಮೂಲ ನಮ್ಮ ಭಾರತ, ವಿಶ್ವದ ಪ್ರಥಮ ಪ್ಲಾಸ್ಟಿಕ್ ಸರ್ಜರಿ ಮಾಡಿದವರು ಭಾರತೀಯರು, ಅವರನ್ನು ಆಚಾರ್ಯ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದರು, ಗುರುಕುಲಗಳು ಇದ್ದವು ಆಚಾರ್ಯರೇ ಸವಿತಾ ಜನಾಂಗದವರು ಅಥವಾ ಕ್ಷೌರಿಕರು ಇದು ಅಕ್ಷರ ಸಹ ಸತ್ಯ, ದಿವಂಗತ ರಾಜು ದೀಕ್ಷಿತ್ ರವರು ಸಂಶೋಧಿಸಿ ಹೇಳಿರುವ ಮಾತು ಇದು ಎಂದರು.

ಸವಿತಾ ಸಮಾಜ ಆದಿಕಾಲದಿಂದಲೂ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಸೇವೆ ಸಲ್ಲಿಸುತ್ತಿದೆ, ಆ ಸಮುದಾಯ 27ಕ್ಕೂ ಹೆಚ್ಚು ಒಳ ಪಂಗಡಿಗಳಿವೆ. ಹಡಪದರು, ಕಾಯಕದವರು, ನಾಯಿಂದ, ಭಂಡಾರಿ, ನಾವಿ, ನಯನ, ಕ್ಷೇತ್ರೀಯ ಮುಂತಾದ ಹೆಸರುಗಳಿಂದ ಕರೆಯುವ ಇವರೆಲ್ಲರನ್ನು ಒಗ್ಗೂಡಿಸಿದರೆ ಸವಿತಾ ಸಮಾಜ, ಸವಿತಾ ಶಬ್ದ ವೇದಗಳಲ್ಲಿ ಸೂರ್ಯದೇವನ ಮಹಿಮೆಗಳನ್ನ ಒಳಗೊಂಡದ್ದು ಎಂಬ ಅರ್ಥ ಕೊಡುತ್ತದೆ, ವೇದ ಎಂದರೆ ಜ್ಞಾನವನ್ನು ಪಸರಿಸುವ ಕಾರ್ಯ ಮಾಡಿದವರು ಸವಿತಾ ಮಹರ್ಷಿಗಳು ಇವರ ಮಗಳೇ ಗಾಯತ್ರಿ ಎಂಬುದು ವಿಶೇಷ, ಸಮುದಾಯದ ಹೆಮ್ಮೆಯ ಸಂಗತಿ ಎಂದರು.

ಸವಿತಾ ಮಹರ್ಷಿ ಜಯಂತಿ ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ವಿಪರ್ಯಾಸ, ಸವಿತಾ ಮಹರ್ಷಿಯ ಸಂದೇಶಗಳು ಸಮಾನತೆ ಮತ್ತು ಸಾಮಾಜಿಕ ನ್ಯಾಯ ವಿದ್ಯಾಭ್ಯಾಸ ಮತ್ತು ಜ್ಞಾನ ಪ್ರಸಾರ, ಪ್ರಚಾರ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮಾಜಿಕ ಸೇವೆ ಶೈಕ್ಷಣಿಕ ಉನ್ನತಿಯ ಮೂಲಕ ಸವಿತಾ ಸಮಾಜ ಸಾಮಾಜಿಕ ಕಳಕಳಿಯನ್ನು ಮೆರೆಯಬೇಕಾದ ಅವಶ್ಯಕತೆ ಇದೆ. ಹಿಂದಿನ ಕಾಲದಿಂದಲೂ ಕ್ಷೌರಿಕರು ಅಥವಾ ಸವಿತಾ ಸಮಾಜದವರು ಶಸ್ತ್ರಚಿಕಿತ್ಸೆ ಮತ್ತು ದಂತ ಚಿಕಿತ್ಸೆಯಲ್ಲಿ ಪರಿಣಿತಿ ಪಡೆದವರು. ಮುಂದೆ ಇಪ್ಪತ್ತನೇ ಶತಮಾನದಲ್ಲಿ ಪ್ರಸಾದನ ಕಲೆ, ಕ್ಷೌರ ವೃತ್ತಿಯಿಂದ ಕವಲೊಡೆಯಿತು ಅಂದರೆ ಪ್ರಸಾದನ ಕಲೆ ಕೂಡ ಕ್ಷೌರವೃತ್ತಿಯ ಕುಲಕಸುವಿನೊಂದಿಗೆ ಬಂದದ್ದು. ಇಂದಿನ ಕಾಲಘಟ್ಟದ ಸ್ಪರ್ಧೆಯನ್ನು ಮೆಟ್ಟಿ ನಿಲ್ಲಬೇಕಾದರೆ ಕೌಶಲ್ಯ ಭರಿತರಾಗಬೇಕು. ಪ್ರಸಾಧನ ಕಲೆಯಲ್ಲಿ ಹೆಚ್ಚಿನ ಪರಿಣಿತಿಯನ್ನು ಪಡೆಯಬೇಕು. ಸರಕಾರದ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ತರಬೇತಿ ಹೊಂದಿ ಶೈಕ್ಷಣಿಕ ಪ್ರಮಾಣಪತ್ರ ಪಡೆದು ಈ ವೃತ್ತಿಯಲ್ಲಿ ನಿಪುಣರಾದಗ ಮಾತ್ರ ಸಬಲರಾಗಿ ಬದುಕು ಸಾಗಿಸಲು ಸಾಧ್ಯ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಎನ್ನುವಂತೆ ಕೌಶಲ್ಯ ಬಲ್ಲವನಿಗೆ ನಿರುದ್ಯೋಗವಿಲ್ಲ ಎಂದು ಹೇಳಿದರು.

ಸವಿತಾ ಸಮಾಜವು ಇಂದಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಹಿನ್ನಲೆಯಲ್ಲಿ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮುದಾಯದ ಜನರನ್ನ ಸಂಘಟಿಸಲು, ಸಮಾಜಿಕವಾಗಿ, ಆರ್ಥಿಕವಾಗಿ ಬಲಪಡಿಸಲು ಸಹಕಾರಿಯಾಗಲಿದೆ. ಇಂಥ ಜಯಂತಿಗಳ ಆಚರಣೆ ಕೇವಲ ಸವಿತಾ ಸಮಾಜದವರಿಗೆ ಸೀಮಿತವಾಗದೆ ಸರ್ವರ ಏಳಿಗೆಯ ಪ್ರತೀಕವಾಗಲಿ ಸವಿತಾ ಮಹರ್ಷಿಗಳ ಹಾದಿಯಲ್ಲಿ ನಾವೆಲ್ಲ ಸಾಗಿ ಆಚಾರ ವಿಚಾರ ಮೈಗೂಡಿಸಿಕೊಳ್ಳೋಣ ಸಮಾಜದಲ್ಲಿ ಸತ್ಪ್ರಜೆಗಳಾಗಿ ಸರ್ವರನ್ನು ಗೌರವಿಸೋಣನ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು, ಸಮುದಾಯದ ಮುಖಂಡರು ಹಾಜರಿದ್ದರು.

Sages and sages are the root cause of all-round development of humanity: Arun