ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: ಉದಯಪುರದಲ್ಲಿ ಹಳದಿ ಶಾಸ್ತ್ರದ ಫೋಟೋ ಹಂಚಿಕೊಂಡ ಆಶಿಕಾ ರಂಗನಾಥ್!

"Rashmika Mandanna and Vijay Deverakonda Haldi Ceremony in

ಉದಯಪುರ: ದಕ್ಷಿಣ ಭಾರತದ ಮೋಸ್ಟ್ ಫೇವರಿಟ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸಂಭ್ರಮ ರಾಜಸ್ಥಾನದ ಉದಯಪುರದಲ್ಲಿ ಕಳೆಗಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಈಗ ಅಧಿಕೃತವಾಗಿ ಸಪ್ತಪದಿ ತುಳಿಯಲು ಸಜ್ಜಾಗಿದ್ದು, ಬುಧವಾರ (ಫೆ. 25) ಹಳದಿ ಶಾಸ್ತ್ರದ ವಿಧಿವಿಧಾನಗಳು ಅದ್ದೂರಿಯಾಗಿ ನೆರವೇರಿವೆ.

ಆಪ್ತರ ಸಮ್ಮುಖದಲ್ಲಿ ಹಳದಿ ಶಾಸ್ತ್ರ: ಮದುವೆಗೂ ಮುನ್ನ ನಡೆಯುವ ಸಂಪ್ರದಾಯದಂತೆ ಹಳದಿ ಶಾಸ್ತ್ರಕ್ಕೆ ಇಡೀ ಕುಟುಂಬ ಸಾಕ್ಷಿಯಾಗಿದೆ. ಈ ಸಂಭ್ರಮದ ಫೋಟೋಗಳನ್ನು ಸ್ವತಃ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕನ್ನಡದ ನಟಿ, ರಶ್ಮಿಕಾ ಅವರ ಆಪ್ತ ಗೆಳತಿ ಆಶಿಕಾ ರಂಗನಾಥ್ ಕೂಡ ಹಳದಿ ಶಾಸ್ತ್ರದಲ್ಲಿ ಭಾಗಿಯಾಗಿರುವ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದಾರೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಗೆಳತಿಗಾಗಿ ಉದಯಪುರಕ್ಕೆ ಹಾರಿದ ಆಶಿಕಾ: ಸಿನಿಮಾ ವೃತ್ತಿಜೀವನದ ಆರಂಭದಿಂದಲೂ ರಶ್ಮಿಕಾ ಮತ್ತು ಆಶಿಕಾ ರಂಗನಾಥ್ ಗಾಢ ಸ್ನೇಹ ಹೊಂದಿದ್ದಾರೆ. ಈ ಕಾರಣದಿಂದಲೇ ರಶ್ಮಿಕಾ ತಮ್ಮ ಮದುವೆಗೆ ಆಶಿಕಾ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಸದ್ಯ ತಮ್ಮೆಲ್ಲಾ ಶೂಟಿಂಗ್ ಕೆಲಸಗಳಿಗೆ ಬಿಡುವು ನೀಡಿರುವ ಆಶಿಕಾ, ಉದಯಪುರದಲ್ಲಿ ಗೆಳತಿಯ ಮದುವೆಯ ಪ್ರತಿ ಕ್ಷಣವನ್ನೂ ಸಂಭ್ರಮಿಸುತ್ತಿದ್ದಾರೆ

ಫೆಬ್ರವರಿ 26ಕ್ಕೆ ವಿವಾಹ ಮಹೋತ್ಸವ: ವರದಿಗಳ ಪ್ರಕಾರ, ಈ ಮದುವೆಗೆ ಕೇವಲ 100 ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಬುಧವಾರ ರಾತ್ರಿ ಅದ್ದೂರಿ ‘ಸಂಗೀತ್’ ಕಾರ್ಯಕ್ರಮ ನಡೆಯಲಿದ್ದು, ಫೆಬ್ರವರಿ 26ರ ಗುರುವಾರ ವಿಜಯ್ ಮತ್ತು ರಶ್ಮಿಕಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯ ನಂತರ ಸಿನಿಮಾ ಗಣ್ಯರಿಗಾಗಿ ಭರ್ಜರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಸದ್ಯ ‘ವಿರೋಶ್’ (ViRash) ಜೋಡಿಯ ಮದುವೆ ಅಪ್‌ಡೇಟ್ ಪಡೆಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

RECENT NEWS