ರಾಯಚೂರು: ನಟ ಯುವ ರಾಜ್‌ಕುಮಾರ್ ಅವರು ಗುರುರಾಯರ (Mantralayam) ದರ್ಶನ ಪಡೆದು, ಬಳಿಕ ರಾಯಚೂರಿನ ಹನುಮಾನ್ ದೇವಾಲಯದಲ್ಲಿ(Hanuman) ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಎಕ್ಕಸಿನಿಮಾ ಯಶಸ್ಸಿಗಾಗಿ ನಟ ಯುವ ರಾಜ್‌ಕುಮಾರ್(Yuva Rajkumar) ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ ಅಂತ ತಿಳಿದು ಬಂದಿದೆ.
ಇದನ್ನು ಮಿಸ್ ಮಾಡದೇ ಓದಿ: ದ್ವಿಚಕ್ರವಾಹನ ಸವಾರರೇ ಗಮನಿಸಿ: ಇನ್ಮುಂದೆ ಈ ರೀತಿಯ ಹೆಲ್ಮೆಟ್ ಧರಿಸುವುದು ಕಡ್ಡಾಯ…!
ಈ ವೇಳೆ ರಾಯಚೂರಿನಲ್ಲಿ (Raichur) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಹೊಸ ಕೆಲಸವನ್ನು ಶುರು ಮಾಡುವುದಕ್ಕೆ ಮುನ್ನ ರಾಯರ ಮಠಕ್ಕೆ ಭೇಟಿ ನೀಡುವುದು ವಾಡಿಕೆಯಾಗಿದೆ ಹೀಗಾಗಿ ಎಕ್ಕ ಸಿನಿಮಾದ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಪೂಜೆ ಮಾಡಿಸಲಾಗಿದೆ ಅಂತ ತಿಳಿಸಿದರು.
ಇನ್ನೂ ಬ್ಯಾಂಗಲ್ ಬಂಗಾರಿ ಹಾಡು ಹಿಟ್ ಆಗಿದೆ, ಇದಕ್ಕೆಲ್ಲಾ ದೇವರ ಆಶೀರ್ವಾದವೇ ಅಂತ ಅವರು ಇದೇ ವೇಳೆ ತಮ್ಮ ಚಿತ್ರದ ಹಾಡಿನ ಯಶಸ್ಸಿನ ಬಗ್ಗೆ ಮಾಧ್ಯಮಗಳಿಗೆ ಸಂತಸವನ್ನು ಹಂಚಿಕೊಂಡರು. ಇನ್ನೂ ನಟ ಯುವ ರಾಜ್‌ಕುಮಾರ್ ಹಾಗೂ ನಟಿ ಸಂಜನಾ ಆನಂದ್ ಜೊತೆಗೆ ನಟಿಸಿರುವ ಸ್ಯಾಂಡಲ್‌ವುಡ್‌ನ ಎಕ್ಕ ಸಿನಿಮಾ ಇದೇ ಜುಲೈ 18ರಂದು ತೆರೆ ಕಾಣಲಿದೆ ಎನ್ನಲಾಗಿದೆ.
ಇದನ್ನು ಮಿಸ್ ಮಾಡದೇ ಓದಿ: ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು?
Follow Me