Legal News | ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣು ಮಕ್ಕಳಿಗೂ ಸಮಾನ ಪಾಲಿದೆ: ಹೈಕೋರ್ಟ್ ಮಹತ್ವದ ತೀರ್ಪು

karnataka high court

ಬೆಂಗಳೂರು: ಪಿತ್ರಾರ್ಜಿತ ಆಸ್ತಿಯಲ್ಲಿ ಮೃತ ಹೆಣ್ಣುಮಕ್ಕಳ ಪಾಲು ನೀಡಲು ನಿರಾಕರಿಸುವುದು ಸಂವಿಧಾನದ(Constitution) ಸಮಾನತೆಯ ತತ್ವಕ್ಕೆ ವಿರುದ್ಧವಾಗುತ್ತದೆ. ಆದ್ದರಿಂದ ಮೃತ ಹೆಣ್ಣುಮಕ್ಕಳಿಗೂ ಸಮಾನ ಪಾಲು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ( High Court) ಮಹತ್ವದ ತೀರ್ಪಿನಲ್ಲಿ ತಿಳಿಸಿದೆ. ಈ ತೀರ್ಪನ್ನು 2024ರಲ್ಲಿ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮಗದಮ್​ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿತ್ತು.

ಸಹೋದರಿಯರಾದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ಗದಗ ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಈ ಆದೇಶವನ್ನು ನೀಡಲಾಗಿದೆ. ನರಗುಂದ ತಾಲ್ಲೂಕಿನ ಚನ್ನಬಸಪ್ಪ ಹೊಸಮನಿ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ನೇತೃತ್ವದ ಪೀಠವು ಈ ಆದೇಶವನ್ನು ನೀಡಿತ್ತು.

High Court

ಪ್ರಕರಣದ ಹಿನ್ನೆಲೆಯನ್ನು ಸ್ಪಷ್ಟಪಡಿಸುತ್ತಾ, ಅರ್ಜಿದಾರರಾದ ಚನ್ನಬಸಪ್ಪ ಅವರು ಅಕ್ಟೋಬರ್ 3, 2023 ರಂದು ಗದಗದ ಮುಖ್ಯ ಸಿವಿಲ್ ನ್ಯಾಯಾಧೀಶರು ಮೃತ ಸಹೋದರಿಯರಾದ ನಾಗವ್ವ ಮತ್ತು ಸಂಗವ್ವ ಅವರಿಗೆ ಪೂರ್ವಜರ ಆಸ್ತಿಯಲ್ಲಿ ಸಮಾನ ಪಾಲು (ಮೃತರ ಉತ್ತರಾಧಿಕಾರಿಗಳಿಗೆ) ನೀಡುವಂತೆ ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ 2005 ರ ಮೊದಲು ಸಂಗವ್ವ, ನಾಗವ್ವ ನಿಧನರಾದರು. ಅವರಿಗೆ ಆಸ್ತಿಯಲ್ಲಿ ಹಂಚಿಕೊಳ್ಳಲು ಅವಕಾಶವಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶವನ್ನು ತಿದ್ದುಪಡಿ ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.

High Court

ಹಿಂದೂ ಉತ್ತರಾಧಿಕಾರ ಕಾಯ್ದೆ, 2005 ರ ತಿದ್ದುಪಡಿಗೆ ಮೊದಲು ಮರಣ ಹೊಂದಿದ ಮಹಿಳೆಯರು ಪಿತ್ರಾರ್ಜಿತ ಆಸ್ತಿಯ ಉತ್ತರಾಧಿಕಾರಿಗಳಲ್ಲ ಎಂದು ಅರ್ಜಿದಾರರು ವಾದಿಸಿದರು. ಆದಾಗ್ಯೂ, ಹೆಣ್ಣುಮಕ್ಕಳಿಗೂ ಕುಟುಂಬದ ಆಸ್ತಿಯಲ್ಲಿ ಸಮಾನ ಪಾಲು ಇರುತ್ತದೆ ಎಂದು ಪೀಠ ಹೇಳಿದೆ. ಕಾಯ್ದೆಗೆ ಮೊದಲು ಮರಣ ಹೊಂದಿದ ಮಗ ಆಸ್ತಿಯ ಹಕ್ಕುಗಳನ್ನು ಉಳಿಸಿಕೊಂಡಿದ್ದರೆ, ಅದು ಮಗಳಿಗೂ ಅನ್ವಯಿಸುತ್ತದೆ ಅಂತ ತೀರ್ಪು ನೀಡಿದೆ.

 

ಇದೇ ವೇಳೆ ನ್ಯಾಯಪೀಠ ಪೂರ್ವಜ ಮಗಳು-ಮಗನ ನಡುವೆ ಯಾವುದೇ ತಾರತಮ್ಯವನ್ನು ಅನುಮತಿಸಲಾಗುವುದಿಲ್ಲ. ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ತಾರತಮ್ಯವು ಭಾರತದ ಸಂವಿಧಾನದ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಹೆಣ್ಣುಮಕ್ಕಳಿಗೂ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಪೀಠ ಹೇಳಿದೆ