ರಾಜ್ಯದ 3 ಜಿಲ್ಲೆಗಳ ಕೋರ್ಟಿಗೆ ಬಾಂ***ಬ್ ಬೆದರಿಕೆ ಇ-ಮೇಲ್ ಸಂದೇಶ

Breaking News

ಧಾರವಾಡ : ಧಾರವಾಡ ಹೈಕೋರ್ಟ್ ಪೀಠಕ್ಕೆ ಕಿಡಿಗೇಡಿಗಳು ಬಾಂ***ಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಇ-ಮೇಲ್ ಮೂಲಕ ಬಾಂ***ಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಹೈಕೋರ್ಟ್ ಪೀಠದಿಂದ ವಕೀಲರು ಮತ್ತು ಸಿಬ್ಬಂದಿಗಳು ತಕ್ಷಣ ಹೊರಗಡೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಗರಗ ಠಾಣೆ ಪೋಲಿಸರು ದೌಡಾಯಿಸಿದ್ದಾರೆ. ಒಂದು ತಿಂಗಳ ಹಿಂದೆ ಇದೇ ರೀತಿ ಸ್ಪೋಟಿಸುವುದಾಗಿ ಈ ಮೇಲ್ ಸಂದೇಶ ಬಂದಿತ್ತು.

ಇದನ್ನು ಮಿಸ್‌ ಮಾಡದೇ ಓದಿ : ರಾಜಸ್ಥಾನದ ಭಿವಾಡಿಯಲ್ಲಿ ಭೀಕರ ಅಗ್ನಿ ದುರಂತ, ಕನಿಷ್ಠ 7 ಮಂದಿ ಸಜೀವ ದಹನ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಶಬರಿಮಲೆ ಮಹಿಳೆಯರ ಎಂಟ್ರಿ, ಸುಪ್ರೀಂಕೋರ್ಟ್‌ನಿಂದ ಮಹತ್ವದ ಮಾಹಿತಿ

ಅದೇ ರೀತಿ ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಬಾಂ***ಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದೆ. R***DX ಸ್ಪೋಟಿ***ಸೋದಾಗಿ ಅಪರಿಚಿತ ವ್ಯಕ್ತಿಯಿಂದ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ತಮಿಳುನಾಡು ಮೂಲದ ವ್ಯಕ್ತಿಯಿಂದ ನ್ಯಾಯಾಧೀಶರಿಗೆ ಈ ಒಂದು ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 12:30ಕ್ಕೆ RDX ಮುಖಾಂತರವಾಗಿ ಕಳುಹಿಸಿದ್ದಾರೆ ವಿಷಯ ತಿಳಿದು ಕೋರ್ಟ್ ಕಲಾಪವನ್ನು ಸಿಬ್ಬಂದಿಗಳು ಸ್ಥಗಿತಗೊಳಿಸಿ ಹೊರಬಂದಿದ್ದಾರೆ. ಮತ್ತು ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.

kannadanadulogo
kannadanadulogo

ಹಾಗೆ ಮಡಿಕೇರಿ ನ್ಯಾಯಾಲಯಕ್ಕೂ ಕೂಡ ಕಿಡಿಗೇಡಿಗಳು ಬಾಂ***ಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನ್ಯಾಯಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ಬಂದಿದೆ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಈ ಒಂದು ಸಂದೇಶ ಬಂದಿದೆ ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ಪತ್ತೆ ದಳ, ಭದ್ರತಾ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.

Bom****b threat email sent to courts in 3 districts of the state

RECENT NEWS