ಬೆಂಗಳೂರಿನ ಈ ಪೊಲೀಸ್ ಠಾಣೆಗೆ ರಾತ್ರಿಯಾದರೆ ‘ಕಳ್ಳರ ಭಯ’! ₹7 ಕೋಟಿ ಹಣ ರಕ್ಷಿಸಲು ಗೇಟ್ ಲಾಕ್ ಮಾಡಿದ ಸಿದ್ದಾಪುರ ಪೊಲೀಸರು!

ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯ ಗೇಟ್ ಮತ್ತು ವಶಪಡಿಸಿಕೊಂಡ ಹಣದ ಸಾಂಕೇತಿಕ ಚಿತ್ರ.

ಬೆಂಗಳೂರು: ಸಾಮಾನ್ಯವಾಗಿ ಕಳ್ಳರ ಭಯದಿಂದ ಸಾರ್ವಜನಿಕರು ತಮ್ಮ ಮನೆ ಬಾಗಿಲು, ಗೇಟ್‌ಗಳಿಗೆ ಭದ್ರವಾದ ಬೀಗ ಹಾಕಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಈಗ ಸಿಲಿಕಾನ್ ಸಿಟಿಯಲ್ಲಿ ಉಲ್ಟಾ ಸನ್ನಿವೇಶ ನಿರ್ಮಾಣವಾಗಿದೆ. ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಈಗ ಕಳ್ಳರ ಭಯದಿಂದ ತಡರಾತ್ರಿಯಾಗುತ್ತಿದ್ದಂತೆ ಪೊಲೀಸ್ ಠಾಣೆಯ ಗೇಟ್‌ಗೆ ಬೀಗ ಜಡಿಯುತ್ತಿದ್ದಾರೆ! ಹೌದು, ಇದು ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಂಡುಬರುತ್ತಿರುವ ವಿಚಿತ್ರ ಹಾಗೂ ಅಚ್ಚರಿಯ ಬೆಳವಣಿಗೆ.

7 ಕೋಟಿ ರೂಪಾಯಿಗಳ ‘ದೊಡ್ಡ’ ತಲೆನೋವು!

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ‘ದಿ ಗ್ರೇಟ್ ಏಳು ಕೋಟಿ ರಾಬರಿ’ ಪ್ರಕರಣ ನಡೆದಿತ್ತು. ಈ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ದಕ್ಷಿಣ ವಿಭಾಗದ ಪೊಲೀಸರು, ದರೋಡೆಯಾಗಿದ್ದ ಸುಮಾರು 7 ಕೋಟಿ ರೂಪಾಯಿಗಳನ್ನು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ. ಆದರೆ, ಈಗ ಇದೇ ಹಣ ಪೊಲೀಸರಿಗೆ ದೊಡ್ಡ ಟೆನ್ಶನ್ ತಂದಿಟ್ಟಿದೆ. ವಶಪಡಿಸಿಕೊಂಡ ಈ ಕೋಟ್ಯಂತರ ರೂಪಾಯಿ ಹಣ ಪ್ರಸ್ತುತ ಸಿದ್ದಾಪುರ ಪೊಲೀಸ್ ಠಾಣೆಯಲ್ಲೇ ಇರುವುದು ಈ ಎಲ್ಲ ಆತಂಕಕ್ಕೆ ಮೂಲ ಕಾರಣ.

ರಾತ್ರಿಯಾದರೆ ಪೊಲೀಸರಿಗೂ ನಡುಕ! 

ಠಾಣೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಇರುವುದರಿಂದ, ನೈಟ್ ಬೀಟ್‌ನಲ್ಲಿ ಇರುವ ಪೊಲೀಸರ ಮೈಯೆಲ್ಲಾ ಕಣ್ಣಾಗಿರುತ್ತದೆ. ತಡರಾತ್ರಿಯಾಗುತ್ತಿದ್ದಂತೆ ಠಾಣೆಯ ಮುಖ್ಯ ಗೇಟ್ ಅನ್ನು ಬಂದ್ ಮಾಡಿ, ಭದ್ರವಾದ ಬೀಗ ಹಾಕಲಾಗುತ್ತಿದೆ . ಯಾರಾದರೂ ದೂರು ನೀಡಲು ಬಂದರೆ ಮಾತ್ರ ಕೂಲಂಕುಷವಾಗಿ ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ. ಇಲ್ಲದಿದ್ದರೆ ಅನ್ಯ ವ್ಯಕ್ತಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪೊಲೀಸರನ್ನ ಕಂಡು ಕಳ್ಳರು ಹೆದರಬೇಕಾದ ಕಾಲದಲ್ಲಿ, ರಿಕವರಿ ಮಾಡಿದ ಹಣದ ರಕ್ಷಣೆಗಾಗಿ ಪೊಲೀಸರೇ ಗೇಟ್ ಬಂದ್ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ಹಣ ಕೋರ್ಟ್‌ಗೆ ಹಸ್ತಾಂತರವಾಗಲು ವಿಳಂಬವೇಕೆ?
ಸಾಮಾನ್ಯವಾಗಿ ಯಾವುದೇ ಪ್ರಾಪರ್ಟಿಯನ್ನು ಸೀಸ್ ಮಾಡಿದ ನಂತರ ಅದನ್ನು ಪಿಎಫ್ (Property Form) ಹಾಕಿ ಕೋರ್ಟ್‌ಗೆ ಕಳುಹಿಸಲಾಗುತ್ತದೆ. ಈ ಪ್ರಕರಣದಲ್ಲೂ ಪೊಲೀಸರು ಅಪ್ಲಿಕೇಶನ್ ಸಲ್ಲಿಸಿದ್ದಾರೆ. ಆದರೆ, ಹಣದ ಮೂಲ ವಾರಸುದಾರರು (CMS ಅಧಿಕಾರಿಗಳು) ಕೋರ್ಟ್ ಮೊರೆ ಹೋಗಿ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಹಣವನ್ನು ಹಿಂಪಡೆಯಲು ಪ್ರಕ್ರಿಯೆ ನಡೆಯುತ್ತಿದೆ. ಈ ಕಾನೂನಾತ್ಮಕ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ, ಅಷ್ಟು ದೊಡ್ಡ ಮೊತ್ತವನ್ನು ಠಾಣೆಯಲ್ಲೇ ಇಟ್ಟುಕೊಳ್ಳುವುದು ಸಿಬ್ಬಂದಿಗಳ ನಿದ್ದೆ ಗೆಡಿಸಿದೆ. ಒಟ್ಟಿನಲ್ಲಿ, ದರೋಡೆಕೋರರನ್ನು ಮಟ್ಟಹಾಕಿದ ಸಿದ್ದಾಪುರ ಪೊಲೀಸರು ಈಗ ಅವರು ರಿಕವರಿ ಮಾಡಿದ ಹಣಕ್ಕೇ ಕಾವಲುಗಾರರಾಗಿ ನಿಂತಿದ್ದಾರೆ. ಕಾನೂನು ಪ್ರಕ್ರಿಯೆ ಆದಷ್ಟು ಬೇಗ ಮುಗಿದು ಹಣ ಕೋರ್ಟ್ ಅಥವಾ ವಾರಸುದಾರರ ಕೈ ಸೇರಿದರೆ ಮಾತ್ರ ಈ ಪೊಲೀಸರ ಆತಂಕ ದೂರವಾಗಲಿದೆ.

ಇದನ್ನು ಓದಿ : ಅಮೆರಿಕನ್ ಡಾಲರ್ ಎದುರು ಪಾತಾಳಕ್ಕಿಳಿದ ರೂಪಾಯಿ : ಸಾರ್ವಕಾಲಿಕ ಕನಿಷ್ಠ ಮಟ್ಟ 92.15 ರೂ.ಗೆ ಕುಸಿತ! ಕಾರಣವೇನು?

ಜಿಲ್ಲಾವಾರು ಬೆಸ್ಕಾಂ ವಾಟ್ಸಾಪ್ ಸಂಖ್ಯೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ, ವಿದ್ಯುತ್ ದೂರುಗಳಿಗೆ ಪರಿಹಾರ ಈಗ ಸುಲಭ

FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು)

  1. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಷ್ಟು ಹಣ ರಿಕವರಿ ಮಾಡಲಾಗಿದೆ?
    ಒಟ್ಟು 7 ಕೋಟಿ ರೂಪಾಯಿ ದರೋಡೆ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
  2. ಪೊಲೀಸ್ ಠಾಣೆಯ ಗೇಟ್ ಏಕೆ ಕ್ಲೋಸ್ ಮಾಡಲಾಗುತ್ತಿದೆ?
    ಠಾಣೆಯಲ್ಲಿರುವ ₹7 ಕೋಟಿ ಹಣದ ಭದ್ರತೆ ಮತ್ತು ಕಳ್ಳರ ಭಯದಿಂದ ರಾತ್ರಿ ವೇಳೆ ಗೇಟ್ ಲಾಕ್ ಮಾಡಲಾಗುತ್ತಿದೆ.
  3. ಹಣವನ್ನು ಇನ್ನೂ ಕೋರ್ಟ್‌ಗೆ ಏಕೆ ನೀಡಿಲ್ಲ?
    ಕಾನೂನಾತ್ಮಕ ಪ್ರಕ್ರಿಯೆಗಳು ಮತ್ತು ವಾರಸುದಾರರ ದಾಖಲೆಗಳ ಪರಿಶೀಲನೆ ವಿಳಂಬವಾಗುತ್ತಿರುವುದರಿಂದ ಹಣ ಇನ್ನೂ ಠಾಣೆಯಲ್ಲೇ ಇದೆ.

English Summary : Siddapura Police in Bengaluru are locking their station gates at night due to the security concerns of ₹7 crore recovered in a robbery case. The delay in legal procedures to hand over the cash to the court has put the staff in constant fear of potential theft.

RECENT NEWS