ದಳಪತಿ ವಿಜಯ್‌ಗೆ ಪತ್ನಿ ಸಂಗೀತಾದಿಂದ ಡಿವೋರ್ಸ್ ಶಾಕ್! ನಟಿಯ ಜೊತೆ ಅಫೇರ್ ಆರೋಪ; ಕೋರ್ಟ್ ನೋಟಿಸ್‌

File Pic of TVK Chief Vijay, Inset Sangeetha

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಅಧ್ಯಕ್ಷ, ನಟ ಜೋಸೆಫ್ ವಿಜಯ್ ಚಂದ್ರಶೇಖರ್ ಅವರಿಗೆ ಈಗ ವೈಯಕ್ತಿಕ ಜೀವನದಲ್ಲಿ ಬಹುದೊಡ್ಡ ಹಿನ್ನಡೆಯಾಗಿದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 27, 2026ರಂದು ದಾಖಲಾಗಿರುವ ಈ ಅರ್ಜಿ ತಮಿಳುನಾಡು ರಾಜಕೀಯ ಹಾಗೂ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ : ಮಳೆಗೆ ತಾತ್ಕಾಲಿಕ ಬ್ರೇಕ್ : ರಾಜ್ಯದಲ್ಲಿ ಮತ್ತೆ ಸುಡುಬಿಸಿಲು, ತಾಪಮಾನದಲ್ಲಿ ಭಾರಿ ಏರಿಕೆ!

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: 56 ಸಾವಿರ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದ ಪರಮೇಶ್ವರ್!

ಪತ್ನಿಯ ಗಂಭೀರ ಆರೋಪಗಳೇನು?
ಸಂಗೀತಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿಜಯ್ ವಿರುದ್ಧ ‘ಪರಸ್ತ್ರೀ ಸಂಬಂಧ’ (Infidelity) ದ ಗಂಭೀರ ಆರೋಪವನ್ನು ಹೊರಿಸಿದ್ದಾರೆ. 2021ರಲ್ಲಿ ವಿಜಯ್ ಅವರಿಗೆ ಒಬ್ಬ ನಟಿಯೊಂದಿಗೆ ಅಕ್ರಮ ಸಂಬಂಧ ಇರುವುದು ತನಗೆ ತಿಳಿಯಿತು ಎಂದು ಅವರು ಉಲ್ಲೇಖಿಸಿದ್ದಾರೆ. 2021ರ ಸೆಪ್ಟೆಂಬರ್‌ನಿಂದ 2022ರ ಫೆಬ್ರವರಿವರೆಗೆ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಮಕ್ಕಳ ಶಿಕ್ಷಣ ಮತ್ತು ಭಾವನಾತ್ಮಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂದು ಸುಮ್ಮನಿದ್ದೆ ಎಂದು ಸಂಗೀತಾ ತಿಳಿಸಿದ್ದಾರೆ.

ಆದರೆ, ನಟಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಭರವಸೆ ನೀಡಿದ್ದ ವಿಜಯ್, ಅದನ್ನು ಮುಂದುವರಿಸಿದ್ದಾರೆ. ಅವರು ನಟಿಯೊಂದಿಗೆ ವಿದೇಶ ಪ್ರವಾಸ ಮತ್ತು ಖಾಸಗಿ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಂಗೀತಾ, ಈಗ ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 27(1)(a) ಮತ್ತು 27(1)(d) ಅಡಿಯಲ್ಲಿ ವಿಚ್ಛೇದನಕ್ಕೆ ಮೊರೆ ಹೋಗಿದ್ದಾರೆ.

ಏಪ್ರಿಲ್ 20ಕ್ಕೆ ಕೋರ್ಟ್‌ಗೆ ಹಾಜರಾಗಲು ಸೂಚನೆ
ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ವಿಜಯ್ ಅವರಿಗೆ ನೋಟಿಸ್ ನೀಡಿದ್ದು, ಏಪ್ರಿಲ್ 20, 2026 ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.

ಅಭಿಮಾನಿ ಮತ್ತು ಪತ್ನಿಯಾದ ಕಥೆ
ಲಂಡನ್ ಮೂಲದ ಶ್ರೀಲಂಕಾದ ಉದ್ಯಮಿ ಸ್ವರ್ಣಲಿಂಗಂ ಅವರ ಪುತ್ರಿಯಾಗಿರುವ ಸಂಗೀತಾ, 1996ರಲ್ಲಿ ವಿಜಯ್ ಅವರ ‘ಪೂವೇ ಉನಕ್ಕಾಗ’ ಸಿನಿಮಾ ನೋಡಿ ಅವರ ಅಭಿಮಾನಿಯಾಗಿದ್ದರು. ವಿಜಯ್ ಅವರನ್ನು ಭೇಟಿಯಾಗಲೆಂದೇ ಲಂಡನ್‌ನಿಂದ ಚೆನ್ನೈಗೆ ಬಂದಿದ್ದರು. ನಂತರ ಪ್ರೀತಿಯಲ್ಲಿ ಬಿದ್ದ ಈ ಜೋಡಿ 1999ರ ಆಗಸ್ಟ್ 25ರಂದು ವಿವಾಹವಾಗಿದ್ದರು. ಇವರಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

ರಾಜಕೀಯ ಹಾದಿಯಲ್ಲಿ ಮುಳ್ಳಿನ ಬೇಲಿ
2026ರ ತಮಿಳುನಾಡು ವಿಧಾನಸಭೆ ಚುನಾವಣೆಯೇ ಗುರಿಯಾಗಿಟ್ಟುಕೊಂಡು ಪಕ್ಷ ಸ್ಥಾಪಿಸಿರುವ ವಿಜಯ್‌ಗೆ ಇತ್ತೀಚಿನ ದಿನಗಳು ಸವಾಲಾಗಿ ಪರಿಣಮಿಸಿವೆ:

ಕರೂರ್ ಕಾಲ್ತುಳಿತ ಪ್ರಕರಣ: ಸೆಪ್ಟೆಂಬರ್ 2025ರಲ್ಲಿ ನಡೆದ ದುರಂತದಲ್ಲಿ 41 ಜೀವಗಳು ಬಲಿಯಾಗಿದ್ದವು, ಇದು ಸಿಬಿಐ ತನಿಖೆಯಲ್ಲಿದೆ.

ಸಿನಿಮಾ ಬಿಡುಗಡೆ ವಿಳಂಬ: ಅವರ ಕೊನೆಯ ಸಿನಿಮಾ ‘ಜನನಾಯಕನ್’ ಸೆನ್ಸಾರ್ ಮತ್ತು ಕಾನೂನು ಸಂಘರ್ಷದಿಂದಾಗಿ ಇನ್ನೂ ತೆರೆಕಂಡಿಲ್ಲ.

ಐಟಿ ಸಂಕಷ್ಟ: 15 ಕೋಟಿ ರೂ. ಅಘೋಷಿತ ಆದಾಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ದಂಡದ ಬಿಸಿ ಎದುರಿಸುತ್ತಿದ್ದಾರೆ.

ಈಗ ಪತ್ನಿಯಿಂದಲೇ ವಿಚ್ಛೇದನ ಮತ್ತು ಅಕ್ರಮ ಸಂಬಂಧದ ಆರೋಪ ಎದುರಿಸುತ್ತಿರುವುದು ವಿಜಯ್ ಅವರ ‘ಕ್ಲೀನ್ ಇಮೇಜ್’ಗೆ ಧಕ್ಕೆ ತಂದಿದ್ದು, ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಇದು ದೊಡ್ಡ ತಡೆಯಾಗುವ ಸಾಧ್ಯತೆಯಿದೆ.

RECENT NEWS