ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪಿಎಂ-ಕಿಸಾನ್’ (PM-Kisan) ಯೋಜನೆಯಡಿ ಪ್ರೋತ್ಸಾಹಧನ ಪಡೆಯುವ ರೈತರಿಗೆ ಕೃಷಿ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಇನ್ನು ಮುಂದೆ ಪಿಎಂ-ಕಿಸಾನ್ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ‘ಕೇಂದ್ರ ಸರ್ಕಾರದ ರೈತರ ಗುರುತಿನ ಐಡಿ‘ (Central Farmer ID) ಹೊಂದುವುದು ಕಡ್ಡಾಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ಹೊಸ ನಿಯಮ?
ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ, ರಾಜ್ಯ ಸರ್ಕಾರದ ‘ಫ್ರೂಟ್ಸ್’ (FRUITS) ತಂತ್ರಾಂಶ ಹಾಗೂ ‘ಭೂಮಿ’ ದತ್ತಾಂಶಗಳನ್ನು ನಿಯತವಾಗಿ ಜೋಡಣೆ ಮಾಡುವುದು ಅತಿ ಮುಖ್ಯವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕೇಂದ್ರ ಸರ್ಕಾರದಿಂದಲೇ ಪ್ರತಿಯೊಬ್ಬ ರೈತರಿಗೂ ಒಂದು ‘ಕೇಂದ್ರ ನೋಂದಾಯಿತ ರೈತರ ಸಂಖ್ಯೆ’ಯನ್ನು (Central Farmer ID) ಸೃಜಿಸಲಾಗುತ್ತದೆ.
ರೈತರು ಮಾಡಬೇಕಾದ್ದೇನು?
- ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ಇ-ಕೆವೈಸಿ (e-KYC) ಹಾಗೂ ಮೊಬೈಲ್ ನಂಬರ್ ಅಪ್ಡೇಟ್ ಮಾಡಿಕೊಳ್ಳಬೇಕು.
- ರೈತರ ಹೆಸರಿನಲ್ಲಿರುವ ಎಲ್ಲಾ ಭೂಹಿಡುವಳಿಗಳನ್ನು (ಜಮೀನಿನ ವಿವರ) ಕಡ್ಡಾಯವಾಗಿ ತಮ್ಮ ಎಫ್.ಐ.ಡಿ (FID) ಯಲ್ಲಿ ಸೇರ್ಪಡೆ ಮಾಡಬೇಕು.
- ರೈತರ ಸಹಮತಿ ಪತ್ರವನ್ನು ವಿದ್ಯುನ್ಮಾನ (ಡಿಜಿಟಲ್) ರೀತಿಯಲ್ಲಿ ನೀಡುವುದು ಕಡ್ಡಾಯ.

ಯಾವೆಲ್ಲಾ ಯೋಜನೆಗಳಿಗೆ ಇದು ಕಡ್ಡಾಯ?
ಈ ರೀತಿ ಸೃಜಿಸಲಾದ ಕೇಂದ್ರ ನೋಂದಾಯಿತ ರೈತ ಸಂಖ್ಯೆಯನ್ನು ಕೇವಲ ಪಿಎಂ-ಕಿಸಾನ್ ಮಾತ್ರವಲ್ಲದೆ, ಬರ ಪರಿಹಾರ, ಬೆಳೆ ವಿಮೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಕೃಷಿ ಯೋಜನೆಗಳಿಗೂ ಕಡ್ಡಾಯವಾಗಿ ಉಪಯೋಗಿಸಲಾಗುತ್ತದೆ. ಒಂದು ವೇಳೆ ರೈತರು ಈ ಐಡಿ ಮಾಡಿಸದಿದ್ದರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ.
ಇದನ್ನು ಓದಿ : ಕೇವಲ ಸಿಮ್ ಆಕ್ಟಿವ್ ಇಡಲು ಅತಿ ಅಗ್ಗದ 90 ದಿನಗಳ ರೀಚಾರ್ಜ್ ಪ್ಲಾನ್ : ಜಿಯೋ, ಏರ್ಟೆಲ್ ಅಥವಾ BSNL, ಯಾವುದು ಬೆಸ್ಟ್?
ಅಗತ್ಯವಿರುವ ದಾಖಲೆಗಳು:
ನೋಂದಣಿ ಮಾಡಿಸಲು ರೈತರು ಈ ಕೆಳಗಿನ ದಾಖಲೆಗಳನ್ನು ಒಯ್ಯಬೇಕು:
- ಆಧಾರ್ ಕಾರ್ಡ್
- ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್
- ಬ್ಯಾಂಕ್ ಪಾಸ್ ಬುಕ್ (ಜೆರಾಕ್ಸ್)
- ರೈತರ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಪಹಣಿಗಳು (RTC)
ಎಲ್ಲಿ ಭೇಟಿ ನೀಡಬೇಕು?
ರೈತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರಗಳು ಅಥವಾ ತೋಟಗಾರಿಕೆ ಇಲಾಖಾ ಕಚೇರಿಗಳಿಗೆ ಭೇಟಿ ನೀಡಿ ಕೇಂದ್ರ ನೊಂದಾಯಿತ ರೈತರ ಸಂಖ್ಯೆಯನ್ನು ಸೃಜಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
FAQ – ಪದೇ ಪದೇ ಕೇಳಲಾಗುವ ಪ್ರಶ್ನೆಗಳು
- ಕೇಂದ್ರ ಸರ್ಕಾರದ ರೈತರ ಗುರುತಿನ ಐಡಿ ಮಾಡಿಸುವುದು ಏಕೆ ಕಡ್ಡಾಯ?
ಉತ್ತರ: ಪಿಎಂ-ಕಿಸಾನ್, ಬೆಳೆ ವಿಮೆ, ಬರ ಪರಿಹಾರ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಕೃಷಿ ಯೋಜನೆಗಳ ಹಣ ಅಥವಾ ಸೌಲಭ್ಯ ನೇರವಾಗಿ - ರೈತರ ಖಾತೆಗೆ ಜಮಾ ಆಗಲು ಈ ಐಡಿ ಕಡ್ಡಾಯವಾಗಿದೆ.
ರೈತರ ಗುರುತಿನ ಐಡಿ ಮಾಡಿಸಲು ಏನೆಲ್ಲಾ ದಾಖಲೆಗಳು ಬೇಕು?
ಉತ್ತರ: ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ನಿಮ್ಮ ಹೆಸರಿನಲ್ಲಿರುವ ಜಮೀನಿನ ಪಹಣಿಗಳು (ಆರ್ ಟಿ ಸಿ) ಬೇಕಾಗುತ್ತದೆ. - ನಾನು ಎಲ್ಲಿ ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕು?
ಉತ್ತರ: ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ (Grama One) ಕೇಂದ್ರಗಳು ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬಹುದು. - ಈ ಕೆಲಸ ಮಾಡದಿದ್ದರೆ ಏನಾಗುತ್ತದೆ?
ಉತ್ತರ: ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ, ರೈತರ ಗುರುತಿನ ಐಡಿ ಹಾಗೂ ಇ-ಕೆವೈಸಿ ಮಾಡದಿದ್ದರೆ ರೈತರು ಪಿಎಂ ಕಿಸಾನ್ ಕಂತುಗಳು ಸೇರಿದಂತೆ ಸರ್ಕಾರದ ಯಾವುದೇ ಪರಿಹಾರ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ.