
ಪೊಲೀಸ್ ಸಿಬ್ಬಂದಿಗೆ ಇನ್ನೂ ಸಿಕ್ಕಿಲ್ಲ ಫೆಬ್ರವರಿ ಸಂಬಳ: ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ
ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ರಕ್ಷಕರಿಗೆ ಈಗ ‘ವೇತನ’ದ ಆತಂಕ ಎದುರಾಗಿದೆ. ಮಾರ್ಚ್ ತಿಂಗಳು ಅರ್ಧದತ್ತ ಸಾಗುತ್ತಿದ್ದರೂ, ಫೆಬ್ರವರಿ ತಿಂಗಳ ಸಂಬಳ ಇನ್ನೂ ಕೈಸೇರದಿರುವುದು ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.








