25 ಕೋಟಿ ರೂ. ಮೊತ್ತದ ತೆರಿಗೆ ವಂಚನೆ ಪತ್ತೆ : ವಾಣಿಜ್ಯ ತೆರಿಗೆ ಇಲಾಖೆಯಿಂದ ದಿಢೀರ್ ದಾಳಿ

Fake Input Tax Credit

ಬೆಂಗಳೂರು : ವಾಣಿಜ್ಯ ತೆರಿಗೆ ಇಲಾಖೆಯ ಜಾರಿ (ದಕ್ಷಿಣ ವಲಯ), ಬೆಂಗಳೂರು ವ್ಯಾಪ್ತಿಯ 35 ಅಧಿಕಾರಿಗಳ ತಂಡವು ಸರಕು ಮತ್ತು ಸೇವಾ ತೆರಿಗೆಗಳ (ಜಿ.ಎಸ್.ಟಿ) ವಿಭಾಗ-5 ರ ಸಹಯೋಗದೊಂದಿಗೆ ಖಚಿತ ಮಾಹಿತಿಯನ್ನಾಧರಿಸಿ ಯಲಹಂಕ, ಕಲ್ಯಾಣನಗರ, ಹೆಬ್ಬಾಳ, ಬಾಣಸವಾಡಿ, ಇಂದಿರಾನಗರ ಹಾಗೂ ದೇವನಹಳ್ಳಿ ಸೇರಿದಂತೆ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಲಾಯಿತು.

ಇದನ್ನು ಮಿಸ್ ಮಾಡದೇ ಓದಿ : ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆ ಸೌಲಭ್ಯ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್ ಮಾಡದೇ ಓದಿ : ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಆಪ್, ಹೆಸರು ನೋಂದಣಿಗೆ ಆಹ್ವಾನ

ಪರಿಶೀಲನೆಯ ವೇಳೆ ತೆರಿಗೆ ಬಾಧ್ಯತೆಯನ್ನು ತಪ್ಪಿಸಲು ‘ಖೊಟ್ಟಿ ಹೂಡುವಳಿ ತೆರಿಗೆ’ಯನ್ನು (Fake Input Tax Credit) ಬಳಸುತ್ತಿದ್ದ ಸರಕು ಸಾಗಣೆ ಏಜೆನ್ಸಿಗಳು, ನಿರ್ಮಾಣ ಸಾಮಗ್ರಿಗಳ ಸರಬರಾಜುದಾರರು, ಎಲೆಕ್ಟ್ರಾನಿಕ್ಸ್ ವರ್ತಕರು, ವಾಹನ ಬಿಡಿಭಾಗಗಳ ಮಾರಾಟಗಾರರು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳ ಮೇಲೆ ದಾಳಿ ನಡೆಸಿ ಲೆಕ್ಕ ಪತ್ರಗಳನ್ನು ಪರಿಶೀಲಿಸಲಾಗಿದೆ.

ಅನೇಕ ವರ್ತಕರು ನಗದು ರೂಪದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ನಕಲಿ ಇನ್‍ವಾಯ್ಸ್‍ಗಳ ಮೂಲಕ ತೆರಿಗೆ ವಿನಾಯಿತಿ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಇಲಾಖೆಗೆ ಸಲ್ಲಿಸಿದ ಸ್ವಯಂ ಘೋಷಿತ ತೆರಿಗೆ ವಿವರಗಳಿಗೂ ಮತ್ತು ವಾಸ್ತವಿಕ ವಹಿವಾಟಿಗೂ ಗಣನೀಯ ವ್ಯತ್ಯಾಸವಿರುವುದು ಪತ್ತೆಯಾಗಿದೆ. ಈವರೆಗಿನ ತನಿಖೆಯಲ್ಲಿ ಸುಮಾರು 25 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ತೆರಿಗೆ ವಂಚನೆ ವಹಿವಾಟನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಪ್ರಸ್ತುತ ನಿಖರವಾದ ತೆರಿಗೆ ಸೋರಿಕೆಯ ಲೆಕ್ಕಾಚಾರ ಮುಂದುವರಿದಿದ್ದು, ಇನ್ನೂ ಹೆಚ್ಚಿನ ತೆರಿಗೆ ವಂಚನೆಯ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸಾರ್ವಜನಿಕ ಸಂಪರ್ಕ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಈಶಾನ್ಯ ವಲಯದಲ್ಲಿ ಫೆಬ್ರವರಿ 26 ಮತ್ತು 27 ರಂದು ರಸ್ತೆ ಸಂಚಾರ ಗಣತಿ ಕಾರ್ಯ : ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಅಳೆಯಲು “2026ನೇ ಸಾಲಿನ ರಸ್ತೆ ಸಂಚಾರ ಗಣತಿ” ಯನ್ನು ಹಮ್ಮಿಕೊಳ್ಳಲಾಗಿದೆ.

2026ನೇ ಫೆಬ್ರವರಿ 26 ರಂದು ಬೆಳಿಗ್ಗೆ 6.00 ಗಂಟೆಯಿಂದ ಫೆಬ್ರವರಿ 27ರ ಬೆಳಿಗ್ಗೆ 6.00 ಗಂಟೆಯವರೆಗೆ (ಸತತ 24 ಗಂಟೆಗಳು) ಕಲಬುರಗಿ ಈಶಾನ್ಯ ವಲಯದಲ್ಲಿ ಒಟ್ಟು 1062 ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯ ಹೆದ್ದಾರಿಗಳಲ್ಲಿ 370 ಕೇಂದ್ರಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 692 ಕೇಂದ್ರಗಳಲ್ಲಿ ಗಣತಿಯನ್ನು ನಡೆಸಲಾಗುವುದು.

ಗಣತಿಯ ಮುಖ್ಯ ಉದ್ದೇಶಗಳು: ಪ್ರತಿ ರಸ್ತೆಯ ಸಂಚಾರದ ಬೆಳವಣಿಗೆಯ ತೀವ್ರತೆಯನ್ನು ಅಳೆಯುವುದು. ಅಸ್ತಿತ್ವದಲ್ಲಿರುವ ರಸ್ತೆಗಳ ದುರಸ್ತಿ ಮತ್ತು ಅವುಗಳ ಗುಣಮಟ್ಟವನ್ನು ಉತ್ತಮಪಡಿಸಲು ಮಾಹಿತಿ ಸಂಗ್ರಹಿಸುವುದು. ವಾಹನ ದಟ್ಟಣೆಗೆ ಅನುಗುಣವಾಗಿ ರಸ್ತೆಗಳ ಅಗಲೀಕರಣದ ಅವಶ್ಯಕತೆಯನ್ನು ನಿರ್ಧರಿಸುವುದು. ರಸ್ತೆಗಳ ಮೇಲ್ದರ್ಜೆಗೇರಿಸುವಿಕೆಗೆ ಪೂರಕವಾದ ವರದಿ ಸಿದ್ಧಪಡಿಸುವುದು. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮತ್ತು ವಾಹನ ಸಂಚಾರದ ಸಾಂದ್ರತೆಯನ್ನು ಆಧರಿಸಿ ಸರ್ಕಾರದ ಮಟ್ಟದಲ್ಲಿ ಹೊಸ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಉದ್ದೇಶವನ್ನು ಹೊಂದಲಾಗಿದೆ.

ಈ ರಸ್ತೆ ಸಂಚಾರ ಗಣತಿ ಕಾರ್ಯವು ಯಶಸ್ವಿಯಾಗಿ ನಡೆಯಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಗಣತಿ ಕೇಂದ್ರಗಳ ಬಳಿ ವಾಹನಗಳನ್ನು ನಿಧಾನವಾಗಿ ಚಲಿಸಿ, ಇಲಾಖೆಯೊಂದಿಗೆ ಸಹಕರಿಸುವಂತೆ ಕಲಬುರಗಿ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.