ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಶಾಕ್ ಕೊಟ್ಟ ಮೊದಲ ಪತ್ನಿ : ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು

The first wife shocked her husband who was getting married for the second timeWhat happened during the auspicious time of tying the talisman

ತುಮಕೂರು : ಪತಿ 2ನೇ ಮದುವೆ ಆಗುತ್ತಿದ್ದ ವೇಳೆಯೇ ಏಕಾಏಕಿ ಕಲ್ಯಾಣ ಮಂಡಪಕ್ಕೆ ಮೊದಲ ಪತ್ನಿ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ SLN ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟುವ ಶುಭವೇಳೆ ಮೊದಲ ಹೆಂಡತಿ ರಂಪಾಟ ಮಾಡಿದ್ದಾರೆ. ಪೊಲೀಸರ ಜೊತೆಗೆ ಆಗಮಿಸಿ ಮದುವೆಯನ್ನೇ ನಿಲ್ಲಿಸಿದ್ದಾರೆ. ಕೌಟುಂಬಿಕ ಕಲಹದ ನಂತರ ಬೇರೆಯಾಗಿದ್ದ ಹರಿಪ್ರಸಾದ್, ಬೇರೆ ಮಹಿಳೆಯನ್ನು ಮದುವೆಯಾಗಲು ಯತ್ನಿಸಿದಾಗ ಲೇಪಾಕ್ಷಿ ಸ್ಥಳಕ್ಕೆ ಬಂದು ತಡೆದಿದ್ದಾರೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ ರಾಜ್ಯದಲ್ಲಿ ಏಪ್ರಿಲ್ 1 ರಿಂದ ವಿದ್ಯುತ್ ಬಿಲ್ ದರ ಏರಿಕೆ ಸಾಧ್ಯತೆ

ಇದನ್ನು ಮಿಸ್‌ ಮಾಡದೇ ಓದಿ : ದೆಹಲಿ ಖಾಲಿಸ್ತಾನ್ ಆಗಲಿದೆ, 9 ಶಾಲೆಗಳಿಗೆ ಬಾಂಬ್ ಬೆದರಿಕೆ

ಕಲ್ಯಾಣ ಮಂಟಪಕ್ಕೆ ಮೊದಲ ಪತ್ನಿ ಎಂಟ್ರಿಗೆ ಎರಡನೇ ಮದುವೆಗೆ ಮುಂದಾಗಿದ್ದ ಹರಿಪ್ರಸಾದ್ ಕಕ್ಕಾಬಿಕ್ಕಿಯಾಗಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ಕೊಡದೇ ಎರಡನೇ ಮದುವೆಗೆ ಹರಿಪ್ರಸಾದ್ ಮುಂದಾಗಿದ್ದರು ಎನ್ನಲಾಗಿದೆ.

2014ರಲ್ಲಿ ಲೇಪಾಕ್ಷಿ, ಹರಿಪ್ರಸಾದ್ ಮದುವೆಯಾಗಿದ್ದರು. ಲೇಪಾಕ್ಷಿ ಬೆಂಗಳೂರಿನ ಆರ್.ಆರ್. ನಗರದ ನಿವಾಸಿಯಾಗಿದ್ದಾರೆ. 8ನೇ ತರಗತಿಯಿಂದ ಹರಿಪ್ರಸಾದ್, ಲೇಪಾಕ್ಷಿ ಲವ್ ಮಾಡುತ್ತಿದ್ದರು. ಮದುವೆಯಾಗಿ 10 ವರ್ಷ ಈ ಜೋಡಿ ಸಂಸಾರ ನಡೆಸಿದ್ದಾರೆ. ಆದರೆ ಕೌಟುಂಬಿಕ ಕಲಹದಿಂದ ಹರಿಪ್ರಸಾದ್ ದಂಪತಿ ದೂರವಾಗಿದ್ದಾರೆ. ಮೊದಲ ಪತ್ನಿ ಲೇಪಾಕ್ಷಿಗೆ ಗೊತ್ತಾಗದಂತೆ ಹರಿಪ್ರಸಾದ್ 2ನೇ ಮದುವೆಗೆ ಸಿದ್ದರಾಗಿದ್ದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಡುಗಿ ಜೊತೆಗೆ 2ನೇ ಮದುವೆ ನಡೆಯುತ್ತಿತ್ತು. ಈ ವೇಳೆ ಲೇಪಾಕ್ಷಿ ಪೊಲೀಸರೊಂದಿಗೆ ಆಗಮಿಸಿ ಮದುವೆ ನಿಲ್ಲಿಸಿದ್ದಾರೆ.

The first wife shocked her husband who was getting married for the second time: What happened during the auspicious time of tying the talisman