ಬಳ್ಳಾರಿ : ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ದಡಾರ-ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಬೇಸಿಗೆ ಪ್ರಾರಂಭವಾಗುತ್ತಿದ್ದು, ಮಕ್ಕಳಲ್ಲಿ ದಡಾರ ಪ್ರಕರಣಗಳು ಕಂಡುಬರುವ ಸಾಧ್ಯತೆ ಹೆಚ್ಚು. 12 ಮಾರಕ ಕಾಯಿಲೆಗಳ ವಿರುದ್ಧ ನಿಯಮಿತವಾಗಿ ಲಸಿಕೆ ಪಡೆಯಲು ಪೋಷಕರು ಮಕ್ಕಳಿಗೆ ತಪ್ಪದೇ ದಡಾರ ರುಬೆಲ್ಲಾ ಲಸಿಕೆ ಹಾಕಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಲಕ್ಷಣಗಳು: ದಡಾರದಲ್ಲಿ ತೀವ್ರ ಜ್ವರ, ಮೂಗು ಸೋರುವಿಕೆ, ಕೆಮ್ಮು, ಕಣ್ಣು ಕೆಂಪಾಗುವುದು ಮತ್ತು ಮುಖದಿಂದ ಆರಂಭವಾಗಿ ದೇಹದಾದ್ಯಂತ ಹರಡುವ ಕೆಂಪು ದದ್ದುಗಳು ಕಂಡುಬರುತ್ತವೆ. ರುಬೆಲ್ಲಾದಲ್ಲಿ ಸೌಮ್ಯ ಜ್ವರ, ದದ್ದುಗಳು, ತಲೆನೋವು, ಕಣ್ಣಿನ ಉರಿ ಲಕ್ಷಣ ಕಂಡುಬರುತ್ತವೆ.
ದಡಾರ-ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವ ಒಂದು ಪರಿಣಾಮಕಾರಿ ಲಸಿಕೆಯಾಗಿದೆ. ಇದು ಮಕ್ಕಳಲ್ಲಿ ಜ್ವರ, ದದ್ದು, ನ್ಯುಮೋನಿಯಾ, ಮತ್ತು ಮೆದುಳಿನ ಸೋಂಕನ್ನು ತಡೆಯುತ್ತದೆ. ಈ ಲಸಿಕೆ, ಗರ್ಭಾವಸ್ಥೆಯಲ್ಲಿ ರುಬೆಲ್ಲಾದಿಂದ ಉಂಟಾಗುವ ಜನ್ಮಜಾತ ದೋಷಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಲಸಿಕೆ ವಿಧಾನ: ಇದು ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದ್ದು, ಇದನ್ನು ಇಂಜೆಕ್ಷನ್ ಮೂಲಕ ಸಾಮಾನ್ಯವಾಗಿ ಮೇಲಿನ ತೋಳಿನಲ್ಲಿ ನೀಡಲಾಗುತ್ತದೆ. 9 ತಿಂಗಳಿAದ 12 ತಿಂಗಳ ನಡುವೆ ಮೊದಲನೇ ಡೋಸ್, ಎರಡನೇ ಡೋಸ್ 16 ತಿಂಗಳಿನಿAದ 24 ತಿಂಗಳ ವರಗೆ ಮಕ್ಕಳಿಗೆ ನೀಡಲಾಗುವುದು. ಎರಡು ಡೋಸ್ಗಳ ನಂತರ ಈ ಲಸಿಕೆಯು ದಡಾರ ಮತ್ತು ರುಬೆಲ್ಲಾ ವಿರುದ್ಧ ಸುಮಾರು ಶೇ.97 ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕೆಲವೊಮ್ಮೆ ಲಸಿಕೆ ಹಾಕಿದ ಸ್ಥಳಗಳಲ್ಲಿ ನೋವು ಜ್ವರ ಅಥವಾ ಸೌಮ್ಯವಾದ ದದ್ದುಗಳು ಕಂಡು ಬರಬಹುದು. ಇವು ಕೆಲವೇ ದಿನಗಳಲ್ಲಿ ಕಡಿಮೆಯಾಗುತ್ತವೆ.
ಲಸಿಕೆಯ ಪ್ರಯೋಜನ:ದಡಾರ ಲಸಿಕೆ ತೀವ್ರ ಜ್ವರ, ಕೆಮ್ಮು, ದದ್ದು ಮತ್ತು ಸಂಭಾವ್ಯ ನ್ಯುಮೋನಿಯಾ ಅಥವಾ ಮೆದುಳಿನ ಸೋಂಕನ್ನು ತಡೆಯುತ್ತದೆ. ರುಬೆಲ್ಲಾ ಲಸಿಕೆಯು ಗರ್ಭಿಣಿಯರಿಗೆ ರುಬೆಲ್ಲಾ ಸೋಂಕು ತಗುಲಿದರೆ, ಹುಟ್ಟುವ ಮಗುವಿನಲ್ಲಿ ಜನ್ಮಜಾತ ರುಬೆಲ್ಲಾ ಸಿಂಡ್ರೋಮ್ ಉಂಟಾಗಬಹುದು. ಲಸಿಕೆಯು ಇದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.
ರಾಷ್ಟಿçÃಯ ಲಸಿಕೆ ಕಾರ್ಯಕ್ರಮದಡಿ ಸಾಮಾನ್ಯವಾಗಿ ಮೊದಲ ಡೋಸ್ 9-12 ತಿಂಗಳುಗಳ ನಡುವೆ ಮತ್ತು ಎರಡನೇ ಡೋಸ್ 16-24 ತಿಂಗಳುಗಳ ನಡುವೆ ನೀಡಲಾಗುತ್ತದೆ. ಇದು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಲಸಿಕೆ ನೀಡಿದ ನಂತರ ಸೌಮ್ಯವಾದ ಜ್ವರ ಅಥವಾ ಇಂಜೆಕ್ಷನ್ ಜಾಗದಲ್ಲಿ ನೋವು ಕಂಡುಬರಬಹುದು, ಆದರೆ ಇದು ಸಾಮಾನ್ಯವಾಗಿದೆ. ದಡಾರ-ರುಬೆಲ್ಲಾ ಲಸಿಕೆಯು ಮಕ್ಕಳ ಆರೋಗ್ಯ ಮತ್ತು ಸಮುದಾಯದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vaccinate children against measles and rubella without fail: DHO Dr. Yalla Ramesh Babu advises