ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ

ksrtc

ಬೆಂಗಳೂರು : ಕರ್ನಾಟಕ ಸರ್ಕಾರದ ಸಮಾಜಕಲ್ಯಾಣ ಇಲಾಖೆಯ PM-AJAY ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಆಯೋಜಿಸಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ : ಶತ್ರುಗಳ ಭಾದೆಯಿಂದ ಪಾರಾಗಿ ಕಣ್ಣಿನ ದೃಷ್ಟಿ ನಿವಾರಿಸಿಕೊಳ್ಳುವ ಸುಲಭ ತಂತ್ರ ವಿಧಾನ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಫೆ.26, 27 ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯ

ಭಾರೀ ವಾಹನ ತರಬೇತಿ, ಉಚಿತ ವಸತಿಮತ್ತು ಊಟ, ಒಂದು ತಿಂಗಳ ತರಬೇತಿ ಸಾರಿಗೆ ಇಲಾಖೆಯ (ಆರ್‍ಟಿಒ) ಸಹಯೋಗದೊಂದಿಗೆ ಉಚಿತ ಪರವಾನಗಿ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಹತ್ತಿರದ ತರಬೇತಿ ಕೇಂದ್ರದಲ್ಲಿ ನೇರವಾಗಿ ಅಥವಾ www.ksrtcjobs.karnataka.gov.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು, ವಿವರ ಭರ್ತಿ ಮಾಡಿದ್ದಲ್ಲಿ, ಈ ಕಛೇರಿಯಿಂದಲೇ ತಮ್ಮನ್ನು ಸಂಪರ್ಕಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಮಳವಳ್ಳಿ- 7760990137, ಹಾಸನ- 7760990533 ಹೊಳಲ್ಕೆರೆ- 7019072560, ಮಾಲೂರು- 7760994432 ಹಾಗೂ ಚಿಕ್ಕಮಗಳೂರು- 9606037746 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರು (ಸಿಬ್ಬಂದಿ & ಜಾಗೃತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KSRTC

ಜಾನಪದ ಲೋಕದಲ್ಲಿ ವಿದ್ಯಾರ್ಥಿ ಜಾನಪದ ಲೋಕೋತ್ಸವ – 2026 : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ಫೆಬ್ರವರಿ 07 ಮತ್ತು 08 ರಂದು ಪ್ರತಿಷ್ಠಿತ “ವಿದ್ಯಾರ್ಥಿ ಜಾನಪದ ಲೋಕೋತ್ಸವ -2026” ಏರ್ಪಡಿಸಲಾಗಿದೆ.

ವಿದ್ಯಾರ್ಥಿ ಜಾನಪದ ಲೋಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಜನಪದ ಕಲಾವಿದರೇ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಆದ್ಯತೆ ವಿದ್ಯಾರ್ಥಿ ಕಲಾವಿದರಿಗಾದರೂ ಹಿರಿಯ ಮೂಲ ಕಲಾ ತಂಡಗಳೂ ಭಾಗವಹಿಸುತ್ತವೆ. ಎರಡೂ ದಿನಗಳಂದು ದಿನವಿಡೀ ವಿವಿಧ ಜನಪದ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದೆ.

ವಿದ್ಯಾರ್ಥಿ ಜಾನಪದ ಲೋಕೋತ್ಸವ ಪ್ರದಾನವಾಗಿ ಯುವ ಜನರನ್ನು ಮತ್ತೆ ಮರಳಿ ಜಾನಪದಕ್ಕೆ ಸೆಳೆಯುವ ಆಶಯವನ್ನು ಇಟ್ಟುಕೊಂಡಿದೆ. ನಾಡಿನ ನಾನಾ ಶಾಲಾ-ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿಗಳು ಆಸ್ಥೆಯಿಂದ ಜನಪದ ಕಲೆಗಳನ್ನೂ, ಜನಪದ ಗಾಯನವನ್ನೂ ಕಲಿತು ಪ್ರದರ್ಶನ ಮಾಡುತ್ತಿದ್ದಾರೆ. ಅಂಥವರಿಗಾಗಿಯೇ ಈ ಲೋಕೋತ್ಸವವನ್ನು ಮುಡುಪಾಗಿಡುವ ಮೂಲಕ, ಮತ್ತಷ್ಟು ವಿದ್ಯಾರ್ಥಿ ಸಮುದಾಯವನ್ನು ಆಕರ್ಷಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇಂದಿನ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಳೆದು ಹೋಗುತ್ತಿರುವ ಯುವ ಸಮುದಾಯದ ಮನಸ್ಸುಗಳನ್ನು ಮತ್ತೆ ಪರಂಪರೆಯ ಮೌಲ್ಯಯುತ ಆಲೋಚನೆಗೆ ಹಚ್ಚುವ ಕಾರ್ಯ ಆಗಬೇಕಾಗಿದೆ. ಈ ದೃಷ್ಟಿಯಿಂದ ವಿದ್ಯಾರ್ಥಿ ಜಾನಪದ ಲೋಕೋತ್ಸವ ಮಹತ್ವ ಪಡೆದಿದೆ.