Rain Alert : ರಾಜ್ಯದ ಈ ಭಾಗಗಳಲ್ಲಿ ಇನ್ನೊಂದು ವಾರ ಭಾರಿ ಮಳೆ, ಶೀತಗಾಳಿ ಸಾಧ್ಯತೆ…!

IMD rain
IMD rain

ಬೆಂಗಳೂರು: ಮುಂದಿನ ಕೆಲವು ದಿನಗಳವರೆಗೆ ಕೇರಳ, ತಮಿಳುನಾಡು, ಕರ್ನಾಟಕ(Karnataka) ಮತ್ತು ತೆಲಂಗಾಣ ಸೇರಿದಂತೆ ಹಲವು ದಕ್ಷಿಣ ರಾಜ್ಯಗಳಿಗೆ IMD ಭಾರೀ ಮಳೆ(heavy rainfall )ಎಚ್ಚರಿಕೆಯನ್ನು ನೀಡಿದೆ. ನಿರಂತರ ಮಳೆಯು ಹಲವಾರು ಪ್ರದೇಶಗಳಲ್ಲಿ ಜಲಾವೃತ ಮತ್ತು ವಿದ್ಯುತ್ ಕಡಿತದಂತಹ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಭಾರೀ ಮಳೆಯ ಜೊತೆಗೆ ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು(Bangalore) ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ(Weather) ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. 

ಇದನ್ನು ಮಿಸ್‌ ಮಾಡದೇ ಓದಿ: ನಿಮ್ಮ ಮನೆಯಲ್ಲಿ ಶಂಖವನ್ನು ಇಡುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ….!

ಇದನ್ನು ಮಿಸ್‌ ಮಾಡದೇ ಓದಿ: ಭಾರತದಲ್ಲಿ ಲಕ್ಷಾಂತರ ಆಂಡ್ರಾಯ್ಡ್ ಫೋನ್‌ಗಳು ಹ್ಯಾಕಿಂಗ್ ಅಪಾಯ..! ನಿಮ್ಮ ಫೋನ್‌ ಪಟ್ಟಿಯಲ್ಲಿದೆಯೇ? ಹೀಗೆ ನೋಡಿ

IMD rain
IMD rain

ಬೀದರ್, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ತೀವ್ರವಾದ ಶೀತಗಾಳಿ ಬೀಸಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದಾಗಿ ತಾಪಮಾನ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ನಿರೀಕ್ಷೆಯಿದ್ದು ಗಾಳಿ ಮತ್ತು ಮೋಡ ಕವಿದ ವಾತಾವರಣವನ್ನು ಕಾಣಬಹುದಾಗಿದೆ.

IMD rain
IMD rain

ಕರ್ನಾಟಕದ ಕರಾವಳಿ(Coast of Karnataka) ಭಾಗದಲ್ಲಿ ನವೆಂಬರ್ 18 ರಿಂದ ನವೆಂಬರ್ 21 ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಅಂತ ತಿಳಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆದರೆ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಇದನ್ನು ಮಿಸ್‌ ಮಾಡದೇ ಓದಿ: ಶಬರಿಮಲೆ ಯಾತ್ರೆಗೆ ಹೋಗುವ ಭಕ್ತರಿಗೆ ಮಹತ್ವದ ಮಾಹಿತಿ: ಈ ರೀತಿ ಮಾಡದಂತೆ ಸೂಚನೆ….!

ಇದನ್ನು ಮಿಸ್‌ ಮಾಡದೇ ಓದಿ: ಈ ಪೋಸ್ಟ್ ಆಫೀಸ್ ಯೋಜನೆಗಳಿಂದ ನೀವು ಪ್ರಯೋಜನ ಪಡೆಯಬಹುದು…!

IMD rain
IMD rain

ಈ ನಡುವೆ ಗೋವಾದಲ್ಲಿ(Goa) ಹೆಚ್ಚಿನ ತರಕಾರಿ ಪೂರೈಕೆಯಾಗುವ ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದಾಗಿ ತರಕಾರಿಗಳ ಬೆಲೆಗಳು ಏರಿಕೆಯಾಗಿದೆ. ಗೋವಾದಲ್ಲಿ ಅಕಾಲಿಕ ಮಳೆಯ ಹೊರತಾಗಿಯೂ, ತರಕಾರಿ ಆಮದುಗಳ ನಿರಂತರ ಪೂರೈಕೆಯಿಂದಾಗಿ ಕಳೆದ ತಿಂಗಳವರೆಗೆ ಬೆಲೆಗಳು ಸ್ಥಿರವಾಗಿತ್ತು ಎನ್ನಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಕಡಿಮೆ ಒತ್ತಡದ ಪರಿಣಾಮವಾಗಿ ಮುಂದಿನ ನಾಲ್ಕು ದಿನಗಳ ಕಾಲ ಈಶಾನ್ಯ, ಡೆಲ್ಟಾ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

IMD has issued a heavy rainfall warning for several southern states including Kerala, Tamil Nadu, Karnataka and Telangana for the next few days.