ನವದೆಹಲಿ: ಚಾಲಕನ ನಿರ್ಲಕ್ಷ್ಯ, ಸಾಹಸ ಅಥವಾ ವೇಗದಿಂದಾಗಿ ಅಪಘಾತ ಸಂಭವಿಸಿದರೆ, ವಿಮಾ ಕಂಪನಿಯು (Insurance company) ವಿಮೆಯನ್ನು ಒದಗಿಸಲು ಬದ್ಧವಾಗಿಲ್ಲ ಎಂದು ದೇಶದ ಸುಪ್ರೀಂ ಕೋರ್ಟ್ (Supreme Court) ತನ್ನ ತೀರ್ಪಿನಲ್ಲಿ ಹೇಳಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಪ್ರತಿದಿನ ರಸ್ತೆಗಳಲ್ಲಿ ಸಾಹಸ ಪ್ರದರ್ಶನ ನೀಡುವವವರಿಗೆ ಒಂದು ಎಚ್ಚರಿಕೆಯಾಗಿದೆ. ಪ್ರಕರಣವೊಂದರಲ್ಲಿ ತೀರ್ಪು ನೀಡಿದ ನಂತರ, ನ್ಯಾಯಮೂರ್ತಿ (Justice) ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠವು, ಅತಿವೇಗದ ಚಾಲನೆಯಿಂದ (driving) ಸಾವನ್ನಪ್ಪಿದ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನಿರಾಕರಿಸಿತು.
ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ ವ್ಯಕ್ತಿಯ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. ಜೂನ್ 18, 2014 ರಂದು ಎನ್.ಎಸ್. ರವೀಶ್ ತಮ್ಮ ಫಿಯೆಟ್ ಲಿನಿಯಾ ಕಾರಿನಲ್ಲಿ ಅರಸೀಕೆರೆ ನಗರಕ್ಕೆ ಹೋಗುತ್ತಿದ್ದರು. ಅತಿ ವೇಗದಿಂದಾಗಿ, ರವೀಶ್ ಕಾರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಕಾರು ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ರವೀಶ್ ಸಾವನ್ನಪ್ಪಿದರು.
ಈ ಘಟನೆಯ ನಂತರ, ಕುಟುಂಬವು ಯುನೈಟೆಡ್ ಇಂಡಿಯಾ ವಿಮಾ ಕಂಪನಿಯಿಂದ (United India Insurance Company)80 ಲಕ್ಷ ರೂ. ಪರಿಹಾರವನ್ನು ಕೋರಿತು. ರವೀಶ್ ಪ್ರತಿ ತಿಂಗಳು 3 ಲಕ್ಷ ರೂ. ಗಳಿಸುತ್ತಿದ್ದರು ಎಂದು ಕುಟುಂಬ ಹೇಳಿದೆ. ಆದರೆ, ಪೊಲೀಸ್ (Police) ಚಾರ್ಜ್‌ಶೀಟ್‌ನಲ್ಲಿ ನಿರ್ಲಕ್ಷ್ಯ ಮತ್ತು ಅತಿ ವೇಗದಿಂದಾಗಿ ಅಪಘಾತ ಸಂಭವಿಸಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಇದರಿಂದಾಗಿ, ಮೋಟಾರು ಅಪಘಾತ ನ್ಯಾಯಮಂಡಳಿ ಕುಟುಂಬದ ಮಾತನ್ನು ಕೇಳಲಿಲ್ಲ. ನಂತರ ಕುಟುಂಬವು ಕರ್ನಾಟಕ (Karnataka)ಹೈಕೋರ್ಟ್‌ಗೆ ಮೊರೆ ಹೋಯಿತು. ಆದರೆ ಹೈಕೋರ್ಟ್ ಕುಟುಂಬದ ಮೇಲ್ಮನವಿಯನ್ನು ಸಹ ತಿರಸ್ಕರಿಸಿತು. ಇದರ ನಂತರ, ಸುಪ್ರೀಂ ಕೋರ್ಟ್ (Supreme Court)
ಈಗ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿದೆ.
Follow Me