ನ್ಯೂಯಾರ್ಕ್: ಮಧ್ಯ ಟೆಕ್ಸಾಸ್‌ನ (Texas )ಕೆರ್ ಕೌಂಟಿಯಲ್ಲಿ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು ಇದರಿಂದಾಗಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಮರಗಳಿಗೆ ಅಂಟಿಕೊಂಡಿದ್ದ ಬದುಕುಳಿದವರನ್ನು ಹೆಲಿಕಾಪ್ಟರ್‌ಗಳು (Helicopter) ಮತ್ತು ದೋಣಿಗಳು ರಕ್ಷಿಸಿದವು, ಆದರೆ ನದಿ ತೀರದ ಸ್ಥಳಗಳಲ್ಲಿ ವಾಸವಿದ್ದವರು ಸೇರಿದಂತೆ 20 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ಇನ್ನೂ ಸುಧಾರಿಸುತ್ತಿರುವುದರಿಂದ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಲ್ಲಿ 24 ಜನರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ (Governor) ಗ್ರೆಗ್ ಅಬಾಟ್ ದೃಢಪಡಿಸಿದ್ದಾರೆ. ಮೃತ ದೇಹಗಳನ್ನು ಗುರುತಿಸುವ ಕೆಲಸ ಅಧಿಕಾರಿಗಳು ಇನ್ನೂ ಮಾಡುತ್ತಿದ್ದಾರೆ ಎನ್ನಲಾಗಿದೆ. ಕನಿಷ್ಠ 400 ಜನರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಡ್ಯಾನ್ ಪ್ಯಾಟ್ರಿಕ್ ಹೇಳಿದ್ದಾರೆ. ಒಂಬತ್ತು ರಕ್ಷಣಾ ತಂಡಗಳು, 14 ಹೆಲಿಕಾಪ್ಟರ್‌ಗಳು ಮತ್ತು 12 ಡ್ರೋನ್(drone) ಗಳನ್ನು ಹುಡುಕಾಟದಲ್ಲಿ ಬಳಸಲಾಗುತ್ತಿದೆ ಮತ್ತು ಕೆಲವು ಜನರನ್ನು ಮರಗಳಿಂದ ರಕ್ಷಿಸಲಾಗುತ್ತಿದೆ ಎಂದು ಪ್ಯಾಟ್ರಿಕ್ ಹೇಳಿದ್ದಾರೆ.
Follow Me