IPL 2026 : ಟಾಸ್ ಗೆದ್ದ ಆರ್‌.ಸಿ.ಬಿ ಬೌಲಿಂಗ್ ಆಯ್ಕೆ; ಹೈದರಾಬಾದ್ ವಿರುದ್ಧದ ಹಣಾಹಣಿ ಆರಂಭ

IPL 2026 RCB vs SRH match: Rajat Patidar and Ishan Kishan at Chinnaswamy Stadium, Bengaluru.

ಬೆಂಗಳೂರು : ಇನ್ನೂ ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಹಾಗೆಯೇ ಮಾಡುವ ಸಾಧ್ಯತೆಯೂ ಹೆಚ್ಚಿದೆ. ಏಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬನಿ (Dew) ಪ್ರಮುಖ ಪಾತ್ರ ವಹಿಸುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಇಲ್ಲಿ ಹೆಚ್ಚಿನ ಅನುಕೂಲವಿದೆ. ಒಮ್ಮೆ ಬ್ಯಾಟರ್‌ಗಳು ಅಬ್ಬರಿಸಲು ಶುರುಮಾಡಿದರೆ, ಬೌಲರ್‌ಗಳಿಗೆ ಈ ಮೈದಾನ ಒಂದು ದುಸ್ವಪ್ನವಾಗಿ ಪರಿಣಮಿಸುತ್ತದೆ ಎನ್ನಲಾಗಿದೆ.

IPL 2026ರ RCB ಮತ್ತು SRH ನಡುವಿನ ಪಂದ್ಯದ ಟಾಸ್ ಇಂದು ಸಂಜೆ 7 ಗಂಟೆಗೆ (IST) ನಡೆಯಲಿದೆ. ಇಶಾನ್ ಕಿಶನ್ ಅವರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದನ್ನು ಮುನ್ನಡೆಸುತ್ತಿದ್ದಾರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಿಂದಾಗಿ, ಇಶಾನ್ ಕಿಶನ್ ಅವರಿಗೆ ಈ ಪಂದ್ಯದಲ್ಲಿ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಮತ್ತೊಂದೆಡೆ, ಹಾಲಿ ಚಾಂಪಿಯನ್ ಆರ್.ಸಿ.ಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದಾರೆ. ಇನ್ನೂ ಟಾಸ್‌ ಆಯ್ಕೆ ಮಾಡಿಕೊಂಡ RCB ತಂಡ ಮೊದಲು ಬೌಲಿಂಗ್  ಮಾಡಲು ನಿರ್ಧಾರಮಾಡಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಪಿಚ್ ಮತ್ತು ಬೌಲಿಂಗ್ ಸವಾಲುಗಳು:
ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ಬ್ಯಾಟರ್‌ಗಳ ಸ್ವರ್ಗವೆಂದೇ ಹೆಸರುವಾಸಿಯಾಗಿದೆ, ಆದ್ದರಿಂದ ಅಭಿಮಾನಿಗಳು ಮತ್ತೊಂದು ಹೈ-ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಆದರೆ, ಆರ್‌ಸಿಬಿ ತಂಡಕ್ಕೆ ಬೌಲಿಂಗ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಶ್ರೀಲಂಕಾದ ವೇಗಿ ನುವಾನ್ ತುಷಾರ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಈ ಕಾರಣದಿಂದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅವರಿಗೆ ಐಪಿಎಲ್ ಆಡಲು ಎನ್‌ಒಸಿ (NOC) ನೀಡಲು ನಿರಾಕರಿಸಿದೆ. ಇದು ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗಕ್ಕೆ ಆಘಾತ ತಂದಿದೆ.

ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಈ ಹಿಂದೆ ಆರ್‌ಸಿಬಿ (RCB) ತಂಡವು ಬಿಡುಗಡೆ ಮಾಡಿತ್ತು. ಇಂದು ತಮ್ಮ ಹಳೆಯ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಲಿವಿಂಗ್‌ಸ್ಟೋನ್ ಎಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಸನ್‌ರೈಸರ್ಸ್ ತಂಡದ ಆರಂಭಿಕ ಆಟಗಾರ ಟೆವಿಸ್‌ ಹೆಡ್, ಆರ್‌ಸಿಬಿ ವಿರುದ್ಧದ ಈ ಮೊದಲ ಪಂದ್ಯದಲ್ಲಿ ತಂಡಕ್ಕೆ ಪ್ರಮುಖ ಆಧಾರವಾಗಲಿದ್ದಾರೆ. ಇವರು ಅಭಿಷೇಕ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದು, ಅಭಿಷೇಕ್ ಕೂಡ ಭರ್ಜರಿ ಆರಂಭದ ನಿರೀಕ್ಷೆಯಲ್ಲಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ಆರ್‌.ಸಿ.ಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದಾರೆ. 

ಉಭಯ ತಂಡಗಳ ಆಟಗಾರರ ವಿವರ ಹೀಗಿದೆ

ತಂಡಗಳ ವಿವರ
RCB (ರಾಯಲ್ ಚಾಲೆಂಜರ್ಸ್ ಬೆಂಗಳೂರು):
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜೇಕಬ್ ಡಫಿ, ಸುಯಶ್ ಶರ್ಮಾ.

SRH (ಸನ್ ರೈಸರ್ಸ್ ಹೈದರಾಬಾದ್):
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್/ನಾಯಕ), ಹೆನ್ರಿಚ್ ಕ್ಲಾಸನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲಿಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್, ಎಶಾನ್ ಮಾಲಿಂಗ.

ಇಂಪ್ಯಾಕ್ಟ್ ಸಬ್ (Impact Subs) ವಿವರಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಸಬ್ ಆಗಿ ಆಯ್ಕೆಯಾಗಿದ್ದಾರೆ. ಅವರು ಪಂದ್ಯದ ಮಧ್ಯೆ ಹನ್ನೊಂದರ ಬಳಗಕ್ಕೆ ಸೇರುವ ಸಾಧ್ಯತೆಯಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲಿದ್ದಾರೆ. ಹೈದರಾಬಾದ್ ತಂಡವು ಆರಂಭಿಕ ಹನ್ನೊಂದರ ಬಳಗದಲ್ಲಿ ಕೇವಲ 3 ವಿದೇಶಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಿದೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇಂಗ್ಲೆಂಡ್‌ನ 35 ವರ್ಷದ ವೇಗದ ಬೌಲರ್ ಡೇವಿಡ್ ಪೇನ್ ಕೂಡ ಇಂಪ್ಯಾಕ್ಟ್ ಸಬ್‌ಗಳಲ್ಲಿ ಒಬ್ಬರಾಗಿದ್ದಾರೆ.