Press ID & Credential Portal
Apply / Verify  ➔
Stories
Press ID
Login
LIVE TV StateNationalInternationalBusinessLifestyleJobs
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ತಾತ್ಕಾಲಿಕ ಸ್ಥಗಿತ: ಡಿಜಿಪಿ ಅಲೋಕ್ ಕುಮಾರ್ ನಿರ್ಧಾರ

ಬೆಳಗಾವಿಯ ಹಿಂಡಲಗಾ ಜೈಲಿಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಭದ್ರತಾ ದೃಷ್ಟಿಯಿಂದ ಪ್ರಜ್ವಲ್ ಅವರನ್ನು ಸದ್ಯಕ್ಕೆ ಸ್ಥಳಾಂತರ ಮಾಡದಿರಲು ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ನಿರ್ಧರಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮತ್ತೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಏಳು ಮಂದಿ ಕೈದಿಗಳ ಸ್ಥಳಾಂತರಕ್ಕೆ ಇಲಾಖೆ ಒಪ್ಪಿಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್ ಆದೇಶವನ್ನು ನಕಲು ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿ ಶಂಕರ್ ಎಂಬಾತ ಬಿಡುಗಡೆಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹ ವಿಭಾಗದ ಉತ್ತರ ವಲಯದ ಡಿಐಜಿ ಸೋಮಶೇಖರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ. ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪದಡಿ ಪ್ರಜ್ವಲ್ ರೇವಣ್ಣ, ನಕಲಿ ಆದೇಶ ಸೃಷ್ಟಿಸಿದ್ದ ಕೈದಿ ಶಂಕರ್ ಮತ್ತು ಕೃತ್ಯಕ್ಕೆ ಸಹಕರಿಸಿದ್ದ ಶ್ರೀಕಾಂತ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ರಾಜ್ಯದ ಇತರೆ ಜೈಲುಗಳಿಗೆ ಸ್ಥಳಾಂತರಿಸಲು ಮೂಲತಃ ತೀರ್ಮಾನಿಸಲಾಗಿತ್ತು. ಆದರೆ ಉತ್ತರ ವಲಯ ಡಿಐಜಿ ಬಂಧನದ ನಂತರ ಭದ್ರತಾ ಕಾರಣಗಳಿಗಾಗಿ ಪ್ರಜ್ವಲ್ ಸ್ಥಳಾಂತರವನ್ನು ಮಾತ್ರ ತಾತ್ಕಾಲಿಕವಾಗಿ ಕೈಬಿಡಲಾಗಿದೆ.

ಕಳೆದ ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಡಿಸಿಪಿ ಹರಿಬಾಬು ಹಾಗೂ ಇಮಾಮ್ ಖಾಸೀಂ ನೇತೃತ್ವದ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಇದರೊಂದಿಗೆ ಮೊಬೈಲ್ ಚಾರ್ಜರ್, ನೋಟ್‌ಬುಕ್ ಮತ್ತು ಪೆನ್‌ಡ್ರೈವ್ ಕೂಡ ಸಿಕ್ಕಿದ್ದು, ಪ್ರಜ್ವಲ್ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಲೋಪ ಸಾಬೀತಾಗಿದ್ದು, ತನಿಖೆಗಾಗಿ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ಘಟನೆಯು ಕಾರಾಗೃಹ ಇಲಾಖೆ ಹಾಗೂ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
LATEST
ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ತಾತ್ಕಾಲಿಕ ಸ್ಥಗಿತ: ಡಿಜಿಪಿ ಅಲೋಕ್ ಕುಮಾರ್ ನಿರ್ಧಾರಬೆಂಗಳೂರಿನಲ್ಲಿ ಅಕ್ಕಸಾಲಿಗನಿಗೆ 1.3 ಕೋಟಿ ರೂ. ವಂಚನೆ: ದೈವಿಕ ಕೃಪೆಯ ಚಿನ್ನದ ಆಸೆಗೆ ಬಿದ್ದು ಸರ್ವಸ್ವ ಕಳೆದುಕೊಂಡ ಕುಟುಂಬಶರನ್ನವರಾತ್ರಿ ವಿಶೇಷ: ದೇಶದ ಪ್ರಸಿದ್ಧ ಒಂಬತ್ತು ದೈವಿಕ ದೇವಾಲಯಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವಶರನ್ನವರಾತ್ರಿ ವಿಶೇಷ: ದೇಶದ ಪ್ರಸಿದ್ಧ ಒಂಬತ್ತು ದೈವಿಕ ದೇವಾಲಯಗಳು ಮತ್ತು ಅವುಗಳ ಮಹತ್ವZP, TP ಕ್ಷೇತ್ರವಾರು ಮೀಸಲಾತಿ ಕರಡು ಪ್ರಕಟ: ಆಕ್ಷೇಪಣೆ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿದ ಸರ್ಕಾರಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬ ಜಾತ್ರೋತ್ಸವ: ಸಚಿವ ಕೆ.ಎಂ. ಶಿವಲಿಂಗೇಗೌಡ ಸೂಚನೆರೈಲ್ವೆ ನೇಮಕಾತಿ: 3,548 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೀಗೆ ಅರ್ಜಿ ಸಲ್ಲಿಸಿಪಾರ್ಕಿಂಗ್ ಬಿಗ್ ಅಪ್‌ಡೇಟ್: ಸ್ಥಳೀಯ ನಿವಾಸಿಗಳ ಮನೆ ಮುಂದಿನ ವಾಹನ ನಿಲುಗಡೆಗೆ ಇಲ್ಲ ಶುಲ್ಕ!ಸಿಜೆಪಿ ಪ್ರತಿಭಟನೆಗೆ ಕೇಂದ್ರದಿಂದ ಬ್ರೇಕ್: ಎಲ್ಲಾ ರಾಜ್ಯಗಳಿಗೂ ಗೃಹ ಇಲಾಖೆ ಕಟ್ಟುನಿಟ್ಟಿನ ಸೂಚನೆ!ಪ್ರಧಾನಿ ಮೋದಿ 25 ವರ್ಷಗಳ ಆಡಳಿತ ಪೂರೈಕೆ: ಶುಭಕೋರಿದ ಜಾಗತಿಕ ನಾಯಕರು