ರಾಜ್ಯದ ಮಹಿಳೆಯರೇ ಗಮನಿಸಿ, ಇನ್ಮುಂದೆ ಬಸ್‌ನಲ್ಲಿ ಉಚಿತ ಬಸ್‌ ಪ್ರಯಾಣಕ್ಕೆ ಈ ಕಾರ್ಡ್‌ ಕಡ್ಡಾಯ..!

KSRTC

ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೇ ಕೆಲವೆಡೆ ಹೊರ ರಾಜ್ಯದವರು ಆಧಾರ್ ಕಾರ್ಡ್ ತೋರಿಸಿ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಶಕ್ತಿ ಯೋಜನೆ ದುರ್ಬಕೆ ತಡೆಗೆ ಮಹತ್ವದ ಕ್ರಮ ವಹಿಸಿದೆ. ಮಹಿಳೆಯರು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ವಿತರಣೆಗೆ ನಿರ್ಧರಿಸಲಾಗಿದೆ.

ಗುರುವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ನೀಡಿದ್ದು, ಕ್ತಿ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ವಿತರಣೆಗೆ ನಿರ್ಧರಿಸಲಾಗಿದೆ. 4 ಸಾರಿಗೆ ನಿಗಮಗಳಿಂದ ಮಹಿಳೆಯರಿಗೆ ವಿತರಣೆ ಮಾಡಲಿದೆ. ಸ್ಮಾರ್ಟ್ ಕಾರ್ಡ್ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಡಿ.31, 2026ರವರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣಕ್ಕೆ ಅವಕಾಶ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ ಆಡಿಸಲು ಅನುಮತಿಸಲು ಒಪ್ಪಿಗೆ ನೀಡಿದೆ. ಆರ್ ಸಿಬಿ ಪಂದ್ಯಗಳನ್ನ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಿದೆ. ಕೆಲವು ಷರತ್ತುಗಳು ವಿಧಿಸಿ ಅವಕಾಶ ನೀಡಲಾಗಿದೆ. ಷರತ್ತುಗಳ ವಿಧಿಸುವ ಅವಕಾಶ ಗೃಹ ಇಲಾಖೆಗೆ ನೀಡಲಾಗಿದೆ. ನಾಳೆ, ನಾಡಿದ್ದು ಗೃಹ ಇಲಾಖೆಯಿಂದ ಆದೇಶ ಹೊರಬೀಳಲಿದೆ. ನ್ಯಾ.ಕುನ್ಹಾ ಕಮಿಟಿ ಗಮನದಲ್ಲಿರಿಸಿಕೊಂಡು ಆದೇಶ ಮಾಡಲಿದೆ. ಗೇಟ್ ಗಳ ಅಗಲಕ್ಕೆ ಶಿಫಾರಸು ಮಾಡಿತ್ತು. ಉದ್ಘಾಟನಾ ಪಂದ್ಯಗಳಿಗೆ ಅವರು ಆಸಕ್ತರಿದ್ದಾರೆ ಎಂದರು.

Women of the state, take note, from now on this card will be mandatory for free bus travel