ದಕ್ಷಿಣಕನ್ನಡ : ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿದ ಪರಿಣಾಮ ಉಸಿರುಗಟ್ಟಿ 8 ವರ್ಷದ ಬಾಲಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಶಂಕು ಆಕಾರದ ಪ್ಲಾಸ್ಟಿಕ್ ಆಟಿಕೆಯನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಇದನ್ನು ಮಿಸ್ ಮಾಡದೇ ಓದಿ : ರಾಯಣ್ಣ ಪ್ರತಿಮೆಗೆ ಮಸಿ ಬಳಿದಿಲ್ಲ ಪೊಲೀಸ್ ಕಮಿಷನರ್ ಸ್ಪಷ್ಟನೆ
ಇದನ್ನು ಮಿಸ್ ಮಾಡದೇ ಓದಿ : ಗೆಳತಿ ಸೋಫಿ ಶೈನ್ ಜೊತೆ 2ನೇ ಮದುವೆಯಾದ ಶಿಖರ್ ಧವನ್
ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕ (8) ಮೃತ ಬಾಲಕಿ. ಮೃತ ತನುಷ್ಕ ಅವರ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಉದ್ಯೋಗಕ್ಕೆ ತೆರಳಲು ಹತ್ತಿರವಾಗಲು ಕುಟುಂಬ ಸಮೇತ ಕೊಲ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ರಾಜೇಶ್ವರಿ ಅವರ ಎರಡನೇ ಮಗಳು ತನುಷ್ಕ ತನ್ನ ಅಣ್ಣ ಮತ್ತು ತಂಗಿಯ ಜತೆ ಲೂಡೊ ಆಟದಲ್ಲಿ ತೊಡಗಿದ್ದಳಂತೆ.

ಈ ವೇಳೆ ಲೂಡೊ ಆಟದ ಪ್ಲಾಸ್ಟಿಕ್ ಕಾಯ್ನ್ ನುಂಗಿ ಏಕಾಏಕಿ ಉಸಿರುಗಟ್ಟಿ ಪರಿಸ್ಥಿತಿ ಗಂಭೀರವಾಗಿತ್ತು. ತಕ್ಷಣವೇ ನೆರೆಹೊರೆಯವರ ಸಹಾಯದಿಂದ ಬಾಲಕಿಯನ್ನು ಅವರ ತಾಯಿಯು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ತನುಷ್ಕ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.
Tragic tragedy in Dakshina Kannada: Girl dies of suffocation after swallowing plastic Ludo coin