ಬೆಳಗಾವಿ : 10 ವರ್ಷಗಳಿಂದ ಕೇವಲ ಎಲೆಗಳನ್ನು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ ಈ ವ್ಯಕ್ತಿ

Man lives by eating leaves Belagavi

ಬೆಳಗಾವಿ : ಕಳೆದ 10 ವರ್ಷಗಳಿಂದ ಕೇವಲ ಎಲೆಗಳು, ಸೊಪ್ಪುಗಳನ್ನು ತಿಂದು ಬದುಕುತ್ತಿರುವ ವಿಚಿತ್ರವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಇದನ್ನು ಮಿಸ್‌ ಮಾಡದೇ ಓದಿ : ಐರ್ಲೆಂಡ್ ವಿರುದ್ಧ ಶ್ರೀಲಂಕಾಗೆ 20 ರನ್ ಜಯ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ : ಹಠಾತ್ ಹಣದ ಅಗತ್ಯ ಎದುರಾದರೆ, ಆಗ ತಾಯಿ ಲಕ್ಷ್ಮಿಯ 18 ಪುತ್ರರ ಧ್ಯಾನ ಮಾಡಬೇಕು

ಬೆಳಗಾವಿಯ ಸವದತ್ತಿ ತಾಲೂಕಿನ ಉಗರಗೊಳ್ಳ ಗ್ರಾಮದ ಬುಡನ್ ಖಾನ್ಈ ರೀತಿ ವಿಚಿತ್ರವಾಗಿ ಜೀವನ ನಡೆಸುತ್ತಿರುವ ಮಾನವನಾಗಿದ್ದಾನೆ. ಕಾಡಿನಲ್ಲಿ ವಾಸಿಸುವ ಮಂಗಗಳು ಎಲೆಗಳನ್ನು ತಿನ್ನುವುದನ್ನು ನಾನು ನೋಡಿದೆ. ಅವುಗಳಿಂದ ಸ್ಪೂರ್ತಿಗೊಂಡು ನಾನು ಕೂಡ ಸೊಪ್ಪುಗಳನ್ನು ತಿನ್ನುವುದನ್ನು ಕಲಿತುಕೊಂಡೆ ಅಂತ ಹೇಳಿದ್ದಾನೆ.

ಕಳೆದ ಹತ್ತು ವರ್ಷಗಳಿಂದ ಅನ್ನ, ರೊಟ್ಟಿಯನ್ನು ತ್ಯಜಿಸಿದ್ದು, ಬರೀ ಸೊಪ್ಪು ತಿಂದುಕೊಂಡು ಬದುಕುತ್ತಿದ್ದಾನೆ ಆಂತ ಹೇಳಿದ್ದಾನೆ. ಆದರೆ , ಆಗೊಮ್ಮೆ ಈಗೊಮ್ಮೆ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಮಾತ್ರ ನಾನು ಅನ್ನ, ಸಾರು ಮತ್ತು ಟೀ ಸೇವನೆ ಮಾಡುವುದಾಗಿ ಹೇಳಿಕೊಂಡಿದ್ದಾನೆ. ತಾನು ಇರುವ ಗುಡ್ಡದಲ್ಲಿ ಸುಮಾರು 150ರಿಂದ 200 ವಿಧದ ಎಲೆಗಳು ಲಭ್ಯವಿದ್ದು, , ಅವುಗಳಲ್ಲಿ ಕೆಲವನ್ನು ದಿನಕ್ಕೆ ಆರು ತಿನ್ನುತ್ತನೆ, ಕೆಲವು ಎಲೆಗಳು ಸಿಹಿಯಾಗಿರುತ್ತವೆ ಮತ್ತು ಅವುಗಳನ್ನು ತಿಂದರೆ ಹೊಟ್ಟೆ ಹಸಿಯವುದಿಲ್ಲ ಅಂತ ಹೇಳಿದ್ದಾನೆ. ಇನ್ನೂ , ಎಲೆಗಳನ್ನು ತಿನ್ನಲು ಶುರು ಮಾಡಿದ ಮೇಲೆ ನನಗೆ ಯಾವುದೇ ಕಾಯಿಲೆ ಬಂದಿಲ್ಲ ಅಂತ ಹೇಳಿದ್ದಾನೆ.

This man has been living on a hill eating only leaves for 10 years