Udupi: ತಂದೆಗೆ ಅನ್ನ ಹಾಕುವ ಯೋಗ್ಯತೆಯೂ ಇಲ್ಲ: ಚೈತ್ರಾ ಕುಂದಾಪುರ ತಂದೆ..!

Chaitra Kundapura

ಉಡುಪಿ: ತಂದೆಗೆ ಅನ್ನ ಹಾಕುವ ಯೋಗ್ಯತೆಯೂ ಇಲ್ಲ ಅಂತ ಚೈತ್ರಾ ಕುಂದಾಪುರ ತಂದೆ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಚೈತ್ರಾ ಕುಂದಾಪುರ (Chaitra Kundapura) ತಂದೆ ಬಾಲಕೃಷ್ಣ ನಾಯ್ಕ್ ತಮ್ಮ ಮಗಳ ಮದುವೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Chaitra Kundapura

ಇದೇ ವೇಳೆ ಅವರು ಮಾತನಾಡಿ, ನನ್ನ ಆಕೆ ಮದುವೆಗೆ ತನ್ನನ್ನು ಆಹ್ವಾನಿಸಲಿಲ್ಲ ಅಂತ ಹೇಳಿದ ಅವರು ಪತ್ನಿಯ ವಿರುದ್ಧವೂ ಗಂಭೀರ ಆರೋಪ ಮಾಡಿರುವ ಅವರು ನನ್ನ ಪತ್ನಿಯೂ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾರೆ. ನನ್ನ ಹೆಂಡತಿಗೆ ಗೌರವ ಬೇಕಾಗಿಲ್ಲ. ಹಣವಿದ್ದರೆ ಸಾಕು. ಹಣಕ್ಕಾಗಿ ಚೈತ್ರಾಗೆ ಬೆಂಬಲವಾಗಿ ನಿಂತುಕೊಂಡಿದ್ದು, ಆಕೆ ಮೋಸದ ಹಣದಿಂದ ಕೊಟ್ಟರೆ ಅದರಿಂದ ಏನು ಪ್ರಯೋಜನ? ಅಂತ ಪ್ರಶ್ನೆ ಮಾಡಿದ್ದಾರೆ. ಇದೇ ವಳೆ . ಚೈತ್ರಾ ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ಆಕೆ ಮತ್ತೆಂದೂ ನನ್ನ ಜೀವನದಲ್ಲಿ ಬರಬಾರದು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ನನ್ನ ಕುಟುಂಬದ ಮಾನ-ಮರ್ಯಾದೆಯನ್ನು ಚೈತ್ರಾ ಮತ್ತು ಆಕೆಯ ಪತಿ ತೆಗೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತೆ (ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ವಿರುದ್ದ ದೂರು ದಾಖಲಾಗಿತ್ತು.