ಮದುವೆ ಮಾಡಿಸಿದ ಬ್ರೋಕರರನ್ನೇ ಕೊಲೆ ಮಾಡಿದ ಗಂಡ..!

The husband who killed the brokers who arranged the marriage..!

ಮಂಗಳೂರು: ಮದುವೆ ಮಾಡಿಸಿದ್ದ ಬ್ರೋಕರರನ್ನೇ ವ್ಯಕ್ತಿಯೊಬ್ಬ ಕೊ**ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ವಳಚ್ಚಿಲ್​ನಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಬ್ರೋಕರ್​ ಸುಲೇಮಾನ್​ ತನ್ನ ಸಂಬಂಧಿ ಯುವತಿಯನ್ನು ಮುಸ್ತಫಾ ಎನ್ನುವರಿಗೆ ಮದುವೆ ಮಾಡಿಸಿದ್ದ ಎನ್ನಲಾಗಿದೆ. 

ಇಬ್ಬರ ಜೀವನದಲ್ಲಿ ಕೆಲ ತಿಂಗಳಿಂದ ಜಗಳ ಆರಂಭವಾಗಿತ್ತು. ಎರಡು ತಿಂಗಳ ಹಿಂದೆ ಯುವತಿ ಮುಸ್ತಫಾನನ್ನು ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ರಾಜಿ-ಸಂಧಾನಕ್ಕೆ ಸುಲೇಮಾನ್​ ನಿನ್ನೆ(ಮೇ.22) ರಾತ್ರಿ ಮುಸ್ತಫಾನ ಮನೆಗೆ ಬಂದಿದ್ದಾನೆ ಎನ್ನಲಾಗಿದೆ. ಈ ನಡುವೆ ರೊಚ್ಚಿಗೆದ್ದ ಮುಸ್ತಫಾ, ಸುಲೇಮಾನ್​ ಜೊತೆ ಜಗಳ ಮಾಡಿ ಸುಲೇಮಾನ್​ನನ್ನು ಅಟ್ಟಾಡಿಸಿಕೊಂಡು ಹೋಗಿ ತಲವಾರ್​ನಿಂದ ಹೊಡೆದು ಕೊ**ಲೆಮಾಡಿದ್ದಾನೆ ಎನ್ನಲಾಗಿದೆ. ಈ ನಡುವೆ . ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮುಸ್ತಫಾನನ್ನು ಬಂಧಿಸಿ ವಿಚಾರಣೆಗೆ ನಡೆಸುತ್ತಿದ್ದಾರೆ ಆಂತ ತಿಳಿದು ಬಂದಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ