K. N. Rajanna | ಸ್ವಾಮೀಜಿಗಳಿಗೆ ರಾಜಕೀಯ ಬೇಡ, ಮಾಜಿ ಸಚಿವ ಕೆ.ಎನ್‌ ರಾಜಣ್ಣ ಕಿವಿ ಮಾತು.. !

kn rajanna

ಬೆಂಗಳೂರು: ಸ್ವಾಮೀಜಿಗಳಿಗೆ ರಾಜಕೀಯ ಬೇಡ ಅವರು ಏನೇ ಇದ್ದರು ಧರ್ಮ ಪ್ರಚಾರದಲ್ಲಿ ತೊಡಗಬೇಕು ಅಂತ ಮಾಜಿ ಸಹಕಾರ ಸಚಿವ ಕೆ.ಎನ್‌ ರಾಜಣ್ಣನವರು ಹೇಳಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಯಾರು ಕೂಡ ಸಹಿ ಸಂಗ್ರಹ ಮಾಡುತ್ತಿಲ್ಲ. ಡಿ.ಕೆ ಶಿವಕುಮಾರ್‌ ಅವರು ಪಾರ್ಟಿ ವಿರೋಧಿ ಕೆಲಸ ಮಾಡುವುದಿಲ್ಲ ಅಂತ ಹೇಳಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನು ಮಿಸ್‌ ಮಾಡದೇ ಓದಿ: ರಾಜ್ಯದ ರೈತರಿಗೆ 8 ಸಾವಿರ ರೂ. ಹೆಚ್ಚುವರಿ ಬೆಳೆ ಹಾನಿ ಪರಿಹಾರ : ಸಿಎಂ ಸಿದ್ದರಾಮಯ್ಯ ಘೋಷಣೆ

ಇದನ್ನು ಮಿಸ್‌ ಮಾಡದೇ ಓದಿ: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ, ಕಿಡ್ನಿಗಳಲ್ಲಿ ಸಮಸ್ಯೆ ಆಗಿರಬಹುದು..!

ಇದನ್ನು ಮಿಸ್‌ ಮಾಡದೇ ಓದಿ: ಜಾಗತಿಕ ಉಪಗ್ರಹ ಉಡಾವಣಾ ಪರಿಸರ ವ್ಯವಸ್ಥೆಯಲ್ಲಿ ಭಾರತ ನಾಯಕನಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

 

ಇನ್ನೂ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಸಿಎಂ ಆಗಿ ಸಿದ್ದರಾಮಯ್ಯ(CM Siddaramaiah) ಅವರೇ ಮುಂದುವರೆಲಿದ್ದಾರೆ ಎನ್ನಲಾಗಿದೆ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಕರೆದು ಮಾತನಾಡಲಿದ್ದಾರೆ ಅಂತ ತಿಳಿಸಿದ ಅವರು, ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ನಾವು ಒಪ್ಪುತ್ತೇವೆ ಅಂತ ಹೇಳಿದರು. ಇನ್ನೂ ಈ ನಡುವೆ ಖರ್ಗೆ ಅವರು ಹೇಳಿದ ಮೇಲೆ ಅವರ ಮಾತಿಗಿಂತ ಬೇರೆ ಇಲ್ಲ ಅಂಥ ಸಚಿವ ದಿನೇಶ್‌ ಗುಂಡ್‌ರಾವ್ ಹೇಳಿದ್ದಾರೆ.

Zameer Ahmed and cm siddaramaiah
Zameer Ahmed and cm siddaramaiah

ಈ ನಡುವೆ ರೈತರಿಗೆ ಹೆಚ್ಚುವರಿ ಯಾಗಿ ರಾಜ್ಯ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದ್ದು, ಪ್ರತಿ ಹೆಗ್ಟಗೆ 8,000 ಬೆಳೆ ಹಾನಿ ಪರಿಹಾರ ನೀಡಲಾಗುತ್ತೆ ಎಂದು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಬೆಳೆ ಹಾನಿ ಪರಿಹಾರ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಘೋಷಣೆ ಮಾಡಿದರು.ಈ ನಡುವೆ ಹೈಮಾಂಡ್‌ ನಿರ್ಧಾರಕ್ಕೆ ನಾನು ಬದ್ದ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ದೆಹಲಿಗೆ ತೆರಳುವ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಎಲ್ಲವನ್ನು ಹೈಕಮಾಂಡ್ ಸಮ್ಮುಖದಲ್ಲಿ ಚರ್ಚಿಸುತ್ತೇನೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಮಾತಾಡ್ತೀನಿ. ಹೈ ಕಮಾಂಡ್ ಜೊತೆ ಕೂತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುತ್ತೆ. ಸಭೆಯಲ್ಲಿ ರಾಹುಲ್ ಗಾಂಧಿ ಸಹ ಇರುತ್ತಾರೆ. 3-4 ಪ್ರಮುಖ ನಾಯಕರನ್ನು ಕರೆಸಿ ಚರ್ಚಿಸುತ್ತೇನೆ. ಎಲ್ಲರ ಸಮ್ಮುಖದಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದರು.

Swamijis don’t want politics, ex-minister KN Rajanna says