ಬೆಂಗಳೂರು: ಹಾವು ಕಡಿದಿದೆಯೇ? ಆತಂಕ ಪಡದಿರಿ – ಸರಿಯಾದ ಮುನ್ನೆಚ್ಚರಿಕೆಯಿಂದ ಜೀವ ಉಳಿಸಬಹುದು. ಹಾವು ಕಡಿತದ ಸಂದರ್ಭದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕ್ರಮಗಳ ಕುರಿತು ಇಲ್ಲಿ ತಿಳಿಯಿರಿ. ಅಂದ ಹಾಗೇ ಹಾವು ಕಡಿತವು ಕರ್ನಾಟಕ (Karnataka) ಸಾಂಕ್ರಾಮಿಕ ರೋಗಗಳ ಕಾಯ್ದೆ, ಸೆಕ್ಷನ್ 3 ರ ಅಡಿಯಲ್ಲಿ ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿತವಾಗಿದೆ.
ಹಾವು ಕಚ್ಚಿದ ಸಂದರ್ಭದಲ್ಲಿ
• ಹೆದರದಿರಿ. ಹಾವು ಕಚ್ಚಿದ ವ್ಯಕ್ತಿಯನ್ನು ಸಮಾಧಾನವಾಗಿರಿಸಿ.
• ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ.
• ಹಾವು ಕಚ್ಚಿದ ದೇಹದ ಭಾಗವನ್ನು ಏನೂ ಮಾಡದಿರಿ
• ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್ಅಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿರಿ
• ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ.
• ತಕ್ಷಣವೇ ನೇರವಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿರಿ.
ಇದನ್ನು ಮಾಡಬೇಡಿ
• ಗಾಬರಿಯಾಗಬೇಡಿ.
• ರಕ್ತಬಂಧಕ ಪಟ್ಟಿ, ಬಿಗಿಯಾದ ಬಟ್ಟೆಯನ್ನು ಕಟ್ಟಬೇಡಿ
• ಗಾಯವನ್ನು ಕೊಯ್ಯಬೇಡಿ ಹಾಗೂ ಏನನ್ನೂ ಹಚ್ಚಬೇಡಿ
• ನಿಮ್ಮಬಾಯಿಯಿಂದ ವಿಷವನ್ನು ಹೀರಬೇಡಿ
• ಹಾವು ಕಚ್ಚಿದ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಾಟಿ ಮದ್ದು ಸೇರಿದಂತೆ ಇನ್ಯಾವುದೇ ಅಸುರಕ್ಷಿತ ಚಿಕಿತ್ಸಾ ಪದ್ಧತಿಯನ್ನು ಅವಲಂಬಿಸದಿರಿ
• ಹಾವನ್ನು ಹಿಡಿಯುವ ಅಥವಾ ಕೊಲ್ಲುವ ಪ್ರಯತ್ನ ಮಾಡದಿರಿ. ಅದು ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತದೆ.
Follow Me