ಶಿವಮೊಗ್ಗ: ಪ್ರಥಮ ಪಿ.ಯು.ಸಿ. ದಾಖಲಾತಿಗೆ ಅರ್ಜಿ ಆಹ್ವಾನ | Puc Admission

PUC Applications

ಶಿವಮೊಗ್ಗ: 2025-26 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಕವಶಿಸಸಂ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜುಗಳಿಗೆ ಪ್ರಥಮ ಪಿ.ಯು.ಸಿ. ದಾಖಲಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದೆ.

2024-25 ನೇ ಸಾಲಿನಲ್ಲಿ ಉತ್ತೀರ್ಣರಾದ ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮೇ 6 ರಿಂದ 12 ರವರೆಗೆ ಆಯಾ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಿಗೆ ತೆರಳಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಈ ರೀತಿ ವಿದ್ಯುತ್‌ ಅನ್ನು ಮಾರಿ ತಿಂಗಳಿಗೆ 17 ಸಾವಿರ ರೂ.ವರೆಗೂ ಲಾಭ ಗಳಿಸಿ…!

puc board karnataka

ಆಸಕ್ತರು ಮೇ 12 ರೊಳಗೆ ಆಯಾ ವಸತಿ ಕಾಲೇಜುಗಳಲ್ಲಿ 02 ಭಾವಚಿತ್ರ, ಎಸ್.ಎಸ್.ಎಲ್.ಸಿ ಪ್ರಾವಿಷನಲ್ ಅಂಕಪಟ್ಟಿ, ಎಸ್‌ಎಟಿಎಸ್ ನಂಬರ್ ಆಧಾರ್ ಕಾರ್ಡ್ ನಕಲು ಪ್ರತಿ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಕಲು ಪ್ರತಿ, ಪೋಷಕರ ಮತ್ತು ಹಿಂದಿನ ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ, ವಿಶೇಷ ಪ್ರಮಾಣ ಪತ್ರ (ಇದ್ದಲ್ಲಿ) ಇವುಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ:


ತುಟಿ ಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

puc board karnataka

ಕಾಲೇಜುಗಳ ವಿವರ : ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಗಾಜನೂರು-56 ಶಿವಮೊಗ್ಗ ತಾಲ್ಲೂಕು ಮೊ.ಸಂ.9739977365 ಲಭ್ಯವಿರುವ ಕೋರ್ಸ್ಗಳು ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹೊಸೂರು-908 ಶಿಕಾರಿಪುರ ತಾಲ್ಲೂಕು ಮೊ. ಸಂ. 8971701958, ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್. ಅಟಲ್ ಬಿಹಾರಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಆವಿನಹಳ್ಳಿ-584 ಸಾಗರ ತಾಲ್ಲೂಕು ಮೊ.ಸಂ.9480767164/6363184683, ಪಿ.ಸಿ.ಎಂ.ಬಿ. ಮತ್ತು ಪಿ.ಸಿ.ಎಂ.ಸಿಎಸ್ ಕೋರ್ಸ್ಗಳು ಲಭ್ಯವಿರುತ್ತವೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ