ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸ, ಘಟನೆ ಸುತ್ತ ಅನುಮಾನದ ಹುತ್ತ

Renukaswamy Samadhi nameplate destroyed
Renukaswamy Samadhi nameplate destroyed

ಚಿತ್ರದುರ್ಗ : ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿಯನ್ನು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ.

ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ನಾಮಫಲಕ ಧ್ವಂಸ ಮಾಡಲಾಗಿದೆ. ಲೇಔಟ್ ನಿರ್ಮಾಣ ವೇಳೆ ಸಮಾಧಿಗೆ ಧಕ್ಕೆಯಾಗಿರುವ ಶಂಕೆ ವ್ಯಕ್ತವಾಗಿದೆ.

ನಟ ದರ್ಶನ್​​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾರಣ 2024ರ ಜೂನ್​​ ತಿಂಗಳಿನಲ್ಲಿ ರೇಣುಕಾಸ್ವಾಮಿಯನ್ನು ನಟ ದರ್ಶನ್ ಅಂಡ್‌ ಗ್ಯಾಂಗ್‌ ಕೊಲೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.ಸದ್ಯ ರೇಣುಕಾಸ್ವಾಮಿ ಹತ್ಯೆ ಕೇಸ್​​ ವಿಚಾರವಾಗಿ ಪ್ರಮುಖ ಆರೋಪಿಗಳಾದ ನಟ ದರ್ಶನ್​​, ಪವಿತ್ರಾ ಸೇರಿ ಗ್ಯಾಂಗ್​​ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಯಾಗಿ ಇದ್ದಾರೆ.

Renukaswamy Samadhi nameplate destroyed
Renukaswamy Samadhi nameplate destroyed

ಇನ್ನೂ ನಾಳೆ ಡೆವಿಲ್ ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ದರ್ಶನ್‌ ಅವರನ್ನು ನೋಡಲು ಕಾಯುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳು ಸಿನಿಮಾದ ಪ್ರಚಾರವನ್ನು ಅದ್ದೂರಿಯಾಗಿ ಆಗಮಿಸಲಿದ್ದು, ನಾಳೆ ಖುದ್ದು ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ದರ್ಶನ್ ಅಭಿಮಾನಿಗಳ ಜೊತೆಗೆ ನರ್ತಕಿ ಸಿನಿಮಾ ಮಂದಿರದಲ್ಲಿ ನೋಡಲಿದ್ದಾರೆ ಎನ್ನಲಾಗಿದೆ.

Actor Darshan in jail

ಇನ್ನೂ ಜೈಲಿನಲ್ಲಿ ದರ್ಶನ್‌ ತಮ್ಮ ಸಹಚರರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ದರ್ಶನ್ ಆರೋಪವನ್ನು ನಿರಾಕರಿಸಿದ್ದು ಖುದ್ದು ಅಧಿಕಾರಿಗಳ ಜೊತೆಗೆ ಹಾಗೂ ದರ್ಶನ್‌ ಮತ್ತು ಹಲ್ಲೆ ಮಾಡಲಾಗಿದೆ ಎನ್ನುವರ ಜೊತೆಗೆ ಮಾತನಾಡಿದರೆ ಆ ರೀತಿಯ ಘಟನೆ ನಡೆದಿಲ್ಲ ಅಂತ ಹೇಳಿದ್ದಾರೆ.

ರೇಣುಕಸ್ವಾಮಿಯನ್ನು ಜೂನ್ 8, 2024 ರಂದು ಬೆಂಗಳೂರಿನಲ್ಲಿ ಕೊಲೆ ಮಾಡಲಾಗಿತ್ತು. ರೇಣುಕಸ್ವಾಮಿಯನ್ನು ಅವರ ಹುಟ್ಟೂರು ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿಗೆ ತಂದು, ಒಂದು ಶೆಡ್‌ನಲ್ಲಿ ಇರಿಸಿ, ಚಿತ್ರಹಿಂಸೆ ನೀಡಿ ದರ್ಶನ್‌ ಮತ್ತು ಆವರ ಸಹಚರರು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

Renukaswamy Samadhi nameplate destroyed