ತುಮಕೂರಿನಲ್ಲಿ ಸಿದ್ದರಾಮಯ್ಯ ಸರ್ಕಾರದ ‘ಮುಕ್ತಾಯ ಸಮಾರಂಭ’ : ಆರ್. ಅಶೋಕ್ ವ್ಯಂಗ್ಯ

R. Ashoka

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮೇ 20ರಂದು ಆಯೋಜಿಸಲು ಉದ್ದೇಶಿಸಿರುವ ‘ಸಾಧನಾ ಸಮಾವೇಶ’ಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಮಾವೇಶವು ಸಾಧನಾ ಸಮಾವೇಶವಲ್ಲ, ಬದಲಾಗಿ ಸಿದ್ದರಾಮಯ್ಯ ಸರ್ಕಾರದ ‘ಮುಕ್ತಾಯ ಸಮಾರಂಭ’ ಎಂದು ಅವರು ಲೇವಡಿ ಮಾಡಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟವನ್ನು ‘ಮನೆಯೊಂದು ಮೂರು ಬಾಗಿಲು’ ಎಂದು ಜರೆದಿದ್ದಾರೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನೂ ಓದಿ : ನಟ ದರ್ಶನ್ ಸಲ್ಲಿಸಿರುವ ಹೊಸ ಜಾಮೀನು ಅರ್ಜಿ ವಿಚಾರಣೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

ಇದನ್ನೂ ಓದಿ : ಶೃಂಗೇರಿ ವಿಧಾನಸಭಾ ಕ್ಷೇತ್ರ: ಡಿ.ಎನ್.ಜೀವರಾಜ್ ಅವರಿಗೆ ಅಧಿಕೃತವಾಗಿ ಶಾಸಕ ಸ್ಥಾನದ ಪ್ರಮಾಣಪತ್ರ ಹಸ್ತಾಂತರ

‘ಮನೆಯೊಂದು ಮೂರು ಬಾಗಿಲು’
ಕಾಂಗ್ರೆಸ್ ಸರ್ಕಾರದ ನಾಯಕರ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಪೈಪೋಟಿಯನ್ನು ಅಶೋಕ್ ಟೀಕಿಸಿದ್ದಾರೆ.

“ಇದುವರೆಗೆ ಕಾಂಗ್ರೆಸ್ ಸರ್ಕಾರಕ್ಕೆ ಎರಡು ಬಾಗಿಲಿತ್ತು – ಒಂದು ಸಿಎಂ ಸಿದ್ದರಾಮಯ್ಯ, ಇನ್ನೊಂದು ಡಿಸಿಎಂ ಡಿ.ಕೆ. ಶಿವಕುಮಾರ್. ಈಗ ಮಲ್ಲಿಕಾರ್ಜುನ ಖರ್ಗೆ ಅವರ ಪ್ರವೇಶದಿಂದ ಇದು ‘ಮನೆಯೊಂದು ಮೂರು ಬಾಗಿಲು’ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸಾಧಿಸಿದ್ದು ಇದೊಂದೇ” ಎಂದು ವ್ಯಂಗ್ಯವಾಡಿದ್ದಾರೆ.

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರ ಭಿನ್ನ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, “ಮೇ 15ಕ್ಕೆ ಸಿದ್ದರಾಮಯ್ಯ ಅವರ ಕುರ್ಚಿ ಹೋಗುತ್ತದೆ ಎಂದು ಸ್ವತಃ ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ಅಶೋಕ್ ಅವರ ಪ್ರಶ್ನೆಗಳ ಸುರಿಮಳೆ
ಎಕ್ಸ್‌ (ಟ್ವಿಟ್ಟರ್) ಖಾತೆಯ ಮೂಲಕವೂ ರಾಜ್ಯ ಸರ್ಕಾರದ ಸಾಧನೆಯನ್ನು ಪ್ರಶ್ನಿಸಿರುವ ಆರ್. ಅಶೋಕ್, ರಾಜ್ಯದ ವಾಸ್ತವ ಸ್ಥಿತಿಯನ್ನು ಮುಂದಿಟ್ಟುಕೊಂಡು ಈ ಕೆಳಗಿನ ಸವಾಲುಗಳನ್ನು ಹಾಕಿದ್ದಾರೆ:

ಆರ್ಥಿಕ ದಿವಾಳಿತನ: “ರಾಜ್ಯದ ಸಾಲದ ಹೊರೆ ₹8 ಲಕ್ಷ ಕೋಟಿ ದಾಟಿದೆ. 2025-26ರ ಬಜೆಟ್‌ನಲ್ಲಿ ಮತ್ತೆ ₹1.50 ಲಕ್ಷ ಕೋಟಿ ಸಾಲ ಎತ್ತುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿ ಕನ್ನಡಿಗನ ಮೇಲೆ ₹1 ಲಕ್ಷಕ್ಕೂ ಅಧಿಕ ಸಾಲದ ಹೊರೆ ಬಿದ್ದಿದೆ, ಇದಕ್ಕಾ ಈ ಸಂಭ್ರಮ?”

ಇ.ಡಿ (ED) ಪ್ರಕರಣಗಳು: “ಸಿಎಂ ಆಪ್ತ ಮರಿಗೌಡರ ಆಸ್ತಿ ಸೇರಿ ₹100 ಕೋಟಿ ಮೌಲ್ಯದ ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. ಇಂತಹ ಸಮಯದಲ್ಲಿ ಸಿಬಿಐ ತನಿಖೆ ತಡೆಯಲು ಸರ್ಕಾರಿ ಬೊಕ್ಕಸದಿಂದ ₹3.16 ಕೋಟಿಗಳನ್ನು ವಕೀಲರ ಶುಲ್ಕಕ್ಕಾಗಿ ಪಾವತಿಸಲಾಗಿದೆ, ಇದು ಸಾಧನೆಯೇ?”

ವಿದ್ಯುತ್ ಸರಬರಾಜು ಕಂಪನಿಗಳು: ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳನ್ನು (ESCOMs) ದಿವಾಳಿ ಮಾಡಿರುವ ಆರೋಪವನ್ನು ಸರ್ಕಾರಕ್ಕೆ ಹೊರಿಸಿದ್ದಾರೆ.

“ಯಾವ ಘನಂದಾರಿ ಸಾಧನೆ ಮಾಡಿದ್ದೀರಿ ಎಂದು 2 ಲಕ್ಷ ಜನರನ್ನು ಸೇರಿಸಿ ಸಂಭ್ರಮಿಸುತ್ತಿದ್ದೀರಿ?” ಎಂದು ಅಶೋಕ್ ಪ್ರಶ್ನಿಸಿದ್ದಾರೆ.