putrada ekadashi 2025 : ಏಳು ಜನ್ಮಗಳ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನವೇ ವೈಕುಂಠ ಏಕಾದಶಿ.

putrada ekadashi 2025
putrada ekadashi 2025

ಕನ್ನಡನಾಡುಡಿಜಿಟಲ್‌ಡೆಸ್ಕ್‌: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಧನುರ್ಮಾಸದಲ್ಲಿ ಬರುವ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುವರು. ಈ ದಿನ ದೇವಾಲಯದ ಉತ್ತರ ದ್ವಾರದಲ್ಲಿ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುತ್ತಾರೆ.

ASTRO
ASTRO

ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಧನುರ್ಮಾಸದ ಏಕಾದಶಿಯನ್ನು ವೈಕುಂಠ ಏಕಾದಶಿ ಎಂದು ಕರೆಯುತ್ತಾರೆ. ಸೂರ್ಯನು ಧನಸ್ಸು ರಾಶಿ ಪ್ರವೇಶ ಮಾಡಿ ಮಕರ ಸಂಕ್ರಮಣದವರೆಗೂ ಈ ರಾಶಿಯಲ್ಲಿ ಇರುತ್ತಾನೆ.

ಗರುಡವಾಹನನಾದ ವಿಷ್ಣು ವೈಕುಂಠದಿಂದ ಮೂರು ಕೋಟಿ ದೇವತೆಗಳೊಂದಿಗೆ ಭೂಲೋಕದಲ್ಲಿ ಇಳಿದು ಬಂದು ಭಕ್ತರಿಗೆ ದರ್ಶನ ನೀಡುತ್ತಾನೆ. ಆದುದರಿಂದ ಈ ದಿನವನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಈ ದಿನ ಉಪವಾಸವಿದ್ದು ವಿಷ್ಣುವಿನ ದರ್ಶನ ಮಾಡಬೇಕು. ಮಾಸದ ಏಕಾದಶಿಯ ದಿನ ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಏಳುವನು. ಈ ದಿನ ವಿಷ್ಣು ದರ್ಶನ ಮಾತ್ರದಿಂದ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನಕ್ಕೆ ಅಷ್ಟು ಮಹತ್ವವಿದೆ.

ASTRO
ASTRO

ಮಹಾವಿಷ್ಣುವು ಮುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನವೇ ಇದು. ಬಹಳ ದಿನಗಳವರೆಗೆ ಮುರ ಅಕ್ಕಿಯಲ್ಲಿ ಬಚ್ಚಿಟ್ಟುಕೊಂಡಿದ್ದ. ಅದಕ್ಕಾಗಿ ಈ ದಿನ ಅಕ್ಕಿ ಸೇವೆನೆ ಮಾಡಬಾರದು. ಏಕಾದಶಿ ದೇವಿಯನ್ನು ಉಪವಾಸದಿಂದ, ದರ್ಶಿಸಿ, ಪೂಜಿಸಿ ಪಾಪ ಪರಿಹಾರ ಮಾಡಿಕೊಳ್ಳಬೇಕು ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಒಟ್ಟು 11, ಹನ್ನೊಂದು ಇಂದ್ರಿಯಗಳನ್ನೂ ನಿಗ್ರಹ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು.

ASTRO
ASTRO

ಅಮೃತ ಮತ್ತು ಹಾಲಾಹಲ ಉದ್ಭವಿಸಿದ ದಿನವಿದು. ಶಿವ ನೀಲಕಂಠನಾದ ದಿನ. ಈ ದಿನ ದೇವರ ದರ್ಶನ ಮಾಡಿ ಹರಿ ನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ತುಳಸಿ ಎಲೆ ಅರ್ಪಿಸಬೇಕು. ಇದರಿಂದ ಮೋಕ್ಷ ಪ್ರಾಪ್ತಿ ಖಂಡಿತವಾಗಿ ಲಭಿಸುವುದು. ಪುಷ್ಯ ಮಾಸವನ್ನು ಶೂನ್ಯಮಾಸವೆಂತಲೂ ಕರೆಯುವರು. ಈ ಸಮಯದಲ್ಲಿ ಯಾವುದೇ ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಕಾರಣ ಇಲ್ಲಿ ಪ್ರತಿಫಲ ಶೂನ್ಯ. ಆದ್ದರಿಂದ ಈ ಪೂರ್ತಿ ಮಾಸವನ್ನು ವಿಷ್ಣುವನ್ನು ಆರಾಧಿಸುವುದರ ಮೂಲಕ ವಿಷ್ಣುವಿಗೆ ಅರ್ಪಣೆ ಮಾಡಬೇಕು.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564