Siddaramaiah | ಕೆ.ಸಿ.ವೇಣುಗೋಪಾಲ್‌ ಜೊತೆ ರಾಜಕೀಯ ಚರ್ಚೆಯಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Siddaramaiah
Image credit: https://www.facebook.com/Siddaramaiah.Official

ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಅವರು ಇಂದು ಇಂದು ಶಿವಗಿರಿ ಮಠ ವರ್ಕಲಾ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವ ವಿದ್ಯಾಲಯ ಆಶ್ರಯದಲ್ಲಿ ಮಂಗಳೂರಿನ ಕೊಣಾಜೆ ಯ ಮಂಗಳ ಗಂಗೋತ್ರಿ ಯಲ್ಲಿ ಆಯೋಜಿಸಲಾಗಿದ್ದ ಶತಮಾನದ ಪ್ರಸ್ತಾನ ಶ್ರೀ ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧೀ ಐತಿಹಾಸಿಕ ಸಂವಾದ ಶತಮಾನೋತ್ಸವ. ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ ಸರ್ವಮತ ಸಮ್ಮೇಳನ ಶತಮಾನೋತ್ಸವ. ಯತಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

 

Siddaramaiah
Image credit: https://www.facebook.com/Siddaramaiah.Official

ಇದೇ ವೇಳೆ ಅವರು ವೇಣುಗೋಪಾಲ್ ಅವರೊಂದಿಗೆ ಕಾಣಿಸಿಕೊಂಡ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದರು, ಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರೆದರೆ ಮಾತ್ರ ದೆಹಲಿಗೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹೋಗುವುದಕ್ಕೆ ಯಾರೂ ಬೇಡ ಅಂದಿಲ್ಲ. ನೀವು ದೆಹಲಿಗೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾನು ಹೋಗುವುದಿಲ್ಲ. ನನ್ನನು ಕರೆದರೆ ಮಾತ್ರ ದೆಹಲಿಗೆ ತೆರಳುವೆ ಎಂದರು.

K.C.Venugopal at Mangalore
K.C.Venugopal at Mangalore

ಇನ್ನೂ ಮಂಗಳೂರು ವಿಮಾನ ನಿಲ್ದಾನದಲ್ಲಿ ಕೆ.ಸಿ.ವೇಣುಗೋಪಾಲ್ ಎದುರು ಡಿಕೆಶಿ​ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆ, ಮಂಗಳಗಂಗೋತ್ರಿಯಲ್ಲಿ‌ ನಾರಾಯಣಗುರು‌ ಅಧ್ಯಯನ‌ ಪೀಠ, ಮಂಗಳೂರು‌ ವಿವಿ ಆಯೋಜಿಸಿದ್ದ “ಶತಮಾನದ ಪ್ರಸ್ತಾನ ನಾರಾಯಣಗುರು ಮಹಾತ್ಮಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಮತ್ತು ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ ಸಮ್ಮೇಳನ‌ ಶತಮಾನೋತ್ಸವ, ಯತಿ ಪೂಜೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಕೆ.ಸಿ.ವೇಣುಗೋಪಾಲ್ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ .ಸಿ.ವೇಣುಗೋಪಾಲ್ ಬರುತ್ತಿದ್ದಂತೆ ಕಾರ್ಯಕರ್ತರ ಕಡೆಯಿಂದ ಡಿಕೆಶಿ ಪರ ಘೋಷಣೆ ಜೋರಾಗಿ ಕೇಳಿ ಬಂದ ಘಟನೆ ನಡೆಯಿತು.

Siddaramaiah No political discussion with KC Venugopal Chief Minister Siddaramaiah