ಕಲ್ಯಾಣ ಕರ್ನಾಟಕದ ಯುವಕರಿಗೆ ಭಾರತೀಯ ಸೇನೆ ಸೇರಲು ಸುವರ್ಣಾವಕಾಶ : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ!

Indian Army Agniveer Recruitment Notification 2026 Karnataka

ರಾಯಚೂರು: ದೇಶಸೇವೆ ಮಾಡುವ ಕನಸು ಹೊತ್ತಿರುವ ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಭಾರತೀಯ ಸೇನೆಯು ಭರ್ಜರಿ ಅವಕಾಶ ನೀಡಿದೆ. ಅಗ್ನಿಪಥ್ ಯೋಜನೆಯಡಿ ವಿವಿಧ ಅಗ್ನಿವೀರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮಾರ್ಚ್ 1 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ ಕಲ್ಪಿಸಲಾಗಿದೆ.

ಯಾವ ಜಿಲ್ಲೆಯವರಿಗೆ ಅವಕಾಶ?
ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ ಹಾಗೂ ಬೀದರ್ ಜಿಲ್ಲೆಗಳ ಅರ್ಹ ಯುವಕರು ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಹುದ್ದೆಗಳ ವಿವರ ಮತ್ತು ಅರ್ಹತೆ:

ಅಗ್ನಿವೀರ್ ಜನರಲ್ ಡ್ಯೂಟಿ (GD): 10ನೇ ತರಗತಿಯಲ್ಲಿ ಕನಿಷ್ಠ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಗ್ನಿವೀರ್ ಟೆಕ್ನಿಕಲ್: ಪಿಯುಸಿ ವಿಜ್ಞಾನ ವಿಭಾಗ ಅಥವಾ 10ನೇ ತರಗತಿಯೊಂದಿಗೆ ಐಟಿಐ (ITI) ಪೂರ್ಣಗೊಳಿಸಿರಬೇಕು.

ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್: ಯಾವುದೇ ವಿಭಾಗದಲ್ಲಿ ಪಿಯುಸಿ (ಶೇ. 60 ಅಂಕ) ಹಾಗೂ ಇಂಗ್ಲಿಷ್ ಮತ್ತು ಗಣಿತ ವಿಷಯ ಕಡ್ಡಾಯ.

ಅಗ್ನಿವೀರ್ ಟ್ರೇಡ್ಸ್‌ಮನ್: 8ನೇ ಅಥವಾ 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ ಹೇಗೆ?
ಆಯ್ಕೆಯು ಎರಡು ಹಂತಗಳಲ್ಲಿ ನಡೆಯಲಿದೆ:

ಮೊದಲ ಹಂತ: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT).

ಎರಡನೇ ಹಂತ: ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test) ಮತ್ತು ಕ್ಲರ್ಕ್ ಹುದ್ದೆಗಳಿಗೆ ಟೈಪಿಂಗ್ ಟೆಸ್ಟ್.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಸೇನೆಯ ಅಧಿಕೃತ ವೆಬ್‌ಸೈಟ್ joinindianarmy.nic.in ಗೆ ಭೇಟಿ ನೀಡಿ, ‘ಅಗ್ನಿಪಥ್’ ಟ್ಯಾಬ್ ಮೂಲಕ ಆಧಾರ್ ಅಥವಾ 10ನೇ ತರಗತಿ ಪ್ರಮಾಣಪತ್ರ ಬಳಸಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಶುಲ್ಕ 250 ರೂ. ಇರುತ್ತದೆ.

ಮಾಜಿ ಸೈನಿಕರ ಮನವಿ:
“ಸುಮಾರು 25 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಕರ್ಷಕ ವೇತನ ಹಾಗೂ ಸೇವಾ ನಿಧಿ ಪ್ಯಾಕೇಜ್ ಲಭ್ಯವಿದೆ. ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು,” ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಚೆನ್ನಾರೆಡ್ಡಿ ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591208111.