Allowance Increased: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಗುಡ್‌ನ್ಯೂಸ್: ಅಂತ್ಯಕ್ರಿಯೆ ಸಹಾಯಧನ ಹೆಚ್ಚಳ

Welfare Board Building and Other Construction Workers Welfare Board

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳೀಯು ನೋಂದಾಯಿತ ಫಲಾನುಭವಿಗಳು ಮರಣ ಹೊಂದಿದ್ದಲ್ಲಿ ನೀಡಲಾಗುತ್ತಿದ್ದ ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ ಸಹಾಯಧನ ಮೊತ್ತವನ್ನು ರೂ. 75,000/-ಗಳಿಂದ ರೂ 1,50,000/-ಗಳಿಗೆ ಹೆಚ್ಚಿಸಲಾಗಿದೆ. 

ಇದನ್ನು ಮಿಸ್‌ ಮಾಡದೇ ಓದಿ: UPI ಬಿಟ್ಟು ನಗದು ವ್ಯವಹಾರ ನಡೆಸುತ್ತಿರುವ ವರ್ತಕರಿಗೆ ಬಿಗ್‌ಶಾಕ್‌ ಕೊಟ್ಟ GST

ನೋಂದಾಯಿತ ಫಲಾನುಭವಿಗಳು ಕೆಲಸದ ಸ್ಥಳಗಳಲ್ಲಿ ಅಪಘಾತ ಉಂಟಾಗಿ ಮರಣ ಹೊಂದಿದ್ದಲ್ಲಿ ನೀಡಲಾಗುತ್ತಿದ್ದ ಪರಿಹಾರದ ಮೊತ್ತವನ್ನು ರೂ. 5,00,000/-ಗಳಿಂದ ರೂ. 8,00,000/-ಗಳಿಗೆ ಹೆಚ್ಚಿಸಲಾಗಿದೆ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳಾದ  ಭಾರತಿ ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

vidhana soudha
Image / Twitter

ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಕೋರ್ಸಿಗೆ ಅರ್ಜಿ ಆಹ್ವಾನ: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡ 2025-26ನೇ ಸಾಲಿನ “ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್” ಕೋರ್ಸಿಗೆ DME / DTDM / BE (Mech /Indl.Engg. & Manufacturing / Indl.& Production, Automobile Engg. ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಪಿಜಿ/ಪಿಡಿ ಸ್ಟಡೀಸ್ ಕೇಂದ್ರ, ರಾಜಾಜಿನಗರ, ಬೆಂಗಳೂರು ಮೊಬೈಲ್ ಸಂ: 9141629584/ 9880217473/ 8310987353 ವೆಬ್‍ಸೈಟ್ : https://gttc.karnataka.gov.in ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಎಂ-ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸಿಗೆ ಅರ್ಜಿ ಆಹ್ವಾನ: ಬೆಂಗಳೂರು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಐಸಿಟಿಇ ಯಿಂದ ಅನುಮೋದನೆಗೊಂಡು ವಿಟಿಯು ಗೆ ಸಂಯೋಜಿತಗೊಂಡಿರುವ “ಎಂ-ಟೆಕ್ ಇನ್ ಟೂಲ್ ಇಂಜಿನಿಯರಿಂಗ್” ಕೋರ್ಸಿಗೆ BE in Mechanical Engg./ Auto Mobile Engg. Automation & Robotics Engg./ Indl&Production Engg / Tool Engineering / Mechatronics Engg. ಕೋರ್ಸ್ ತೇರ್ಗಡೆಯಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಯಾವುದೇ ಕಾರಣಕ್ಕೂ ‘ಪಂಚ ಗ್ಯಾರಂಟಿ’ ಯೋಜನೆ ನಿಲ್ಲುವುದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಪಿಜಿ / ಪಿಡಿ ಸ್ಟಡೀಸ್ ಕೇಂದ್ರ, ರಾಜಾಜಿನಗರ, ಬೆಂಗಳೂರು ಮೊಬೈಲ್ ಸಂ: 9141629584/9880217473/ 8310987353 ಹಾಗೂ ವೆಬ್‍ಸೈಟ್: https://gttc.karnataka.gov.in ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.