ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿಯನ್ನು ನೀಡಿದ್ದು, ಅದರಂತೆ, `ಮೇ.20 ರೊಳಗೆ ಆರೋಗ್ಯ ಸಂಜೀವಿನಿ’ ನೊಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ ಸಂಜೀವಿನಿ (ಏಂSS) ಯೋಜನೆಯ ಮೂಲಕ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಹಾಗೂ ಯೋಜನೆಯಡಿ ಸರ್ಕಾರಿ ನೌಕರರ ನೋಂದಾವಣೆ ಮತ್ತು ಆಯ್ಕೆ ಕುರಿತು ಸೂಚನೆಗಳನ್ನು ನೀಡಿದೆ.

ಸುತ್ತೋಲೆಯಲ್ಲಿ ಉಲ್ಲೇಖ ಮಾಡಿರುವಂತೆ, ರಾಜ್ಯ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ (ಏಂSS) ಯೋಜನೆಯ ಮೂಲಕ ನಗದು ರಹಿತ ಆರೋಗ ಸೇವೆಗಳನ್ನು ಒದಗಿಸುವ ವಿನೂತನ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯು ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ.

ಈ ಯೋಜನೆಗೆ ಹೇಗೆ ನೋಂದಾಯಿಸಬೇಕು?
HRMS ಪೋರ್ಟಲ್ ಗೆ ಲಾಗಿನ್ ಮಾಡುವುದು ಮೊದಲ ಹಂತವಾಗಿದೆ.
ನಂತರ KASS ನೋಂದಣಿ ಫಾರ್ಮ್ (ಅನುಬಂಧ-2) ಭರ್ತಿ ಮಾಡಿ.
HRMS ಪೋರ್ಟಲ್ ಮೂಲಕ ಆನ್‌ಲೈನ್ ನೋಂದಣಿ.
ಆಯ್ಕೆ (Opt-In) / ತಿರಸ್ಕಾರ (Opt-Out) ಫಾರ್ಮ್ ಅನ್ನು ಮೇ 20, 2025 ರೊಳಗೆ ಸಲ್ಲಿಸಬೇಕು.
ಡಿಡಿಓ (DDO) ಮೂಲಕ ಅರ್ಜಿ ದಾಖಲಾಗುತ್ತದೆ.
ಮಾಸಿಕ ಶುಲ್ಕ:
ಗ್ರೂಪ್ A: ₹1,000
ಗ್ರೂಪ್ B: ₹500
ಗ್ರೂಪ್ C: ₹350
ಗ್ರೂಪ್ D: ₹250
ಮೇ 2025 ನಂತರ ಸ್ವಯಂಚಾಲಿತವಾಗಿ ವೇತನದಿಂದ ಕಡಿತವಾಗುತ್ತದೆ.
5 ಲಕ್ಷ ರೂ. ವರೆಗೆ ಕುಟುಂಬಕ್ಕೆ ವಾರ್ಷಿಕ ಕವರೇಜ್.
1,500+ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಚಿಕಿತ್ಸೆ.
ಹೃದಯ ಸಂಬಂಧಿತ ಕಾಯಿಲೆಗಳು
ಕ್ಯಾನ್ಸರ್ ಚಿಕಿತ್ಸೆಗಳು
ಕಿಡ್ನಿ ವೈಫಲ್ಯ ಮತ್ತು ಡಯಾಲಿಸಿಸ್
ಅಂಗಾಂಗ ಕಸಿ (ಉದಾಹರಣೆಗೆ – ಲಿವರ್, ಕಿಡ್ನಿ)
ಮೂಳೆ ಸಂಬಂಧಿತ ಸಮಸ್ಯೆಗಳು
ನವಜಾತ ಶಿಶುಗಳ ಚಿಕಿತ್ಸಾ ಸೇವೆಗಳು
ತುರ್ತು ಶಸ್ತ್ರಚಿಕಿತ್ಸೆಗಳು
ಲಘು ಶಸ್ತ್ರಚಿಕಿತ್ಸೆಗಳು
ಲಘು ವೈದ್ಯಕೀಯ ವಿಧಾನಗಳು
ಕಣ್ಣಿನ ಪೊರೆ ಶಸ್ತ್ರ, ಚಿಕಿತ್ಸೆ ಇತ್ಯಾದಿ…
ಸುತ್ತೋಲೆಯಲ್ಲಿ ಉಲ್ಲೇಖ ಮಾಡಿರುವಂತೆ ಯೋಜನೆಯಲ್ಲಿ ಭಾಗವಹಿಸಲು ಇಷ್ಟವಿಲ್ಲದ ನೌಕರರು ನಮೂನೆ-2 ಭರ್ತಿ ಮಾಡಿ ಮೇ 20 ರೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ, ಸ್ವಯಂಚಾಲಿತವಾಗಿ ಶುಲ್ಕ ಕಡಿತವಾಗುತ್ತದೆ ಅಂತ ಈಗಾಗಲೇ ತಿಳಿಸಿದೆ.

ಗಮನಿಸಿ: ಈ ಯೋಜನೆ ಐಚ್ಛಿಕ ಆಗಿದೆ. ನೀವು ಭಾಗವಹಿಸಲು ಇಚ್ಛಿಸಿದರೆ ಮಾತ್ರ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಇಲಾಖೆಯ ಡಿಡಿಓ ಅಥವಾ HRMS ವೆಬ್‌ಸೈಟ್ ಗೆ ಭೇಟಿ ನೀಡುವುದರ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಕೂಡ.

Follow Me