ಕನ್ನಡನಾಡು ಡಿಜಿಟಲ್‌ಡೆಸ್ಕ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ ನ್ಯಾಯಾಂಗ ಬಂಧನದಲ್ಲಿರುವಾಗಲೇ, ಅವರ ಹೊಸ ಚಿತ್ರ ದಿ ಡೆವಿಲ್‌ನ ಅಬ್ಬರ ಕರ್ನಾಟಕದಾದ್ಯಂತ ವ್ಯಾಪಿಸಿದೆ.
ಚಿತ್ರದುರ್ಗದ 33 ವರ್ಷದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಏತನ್ಮಧ್ಯೆ, ದಿ ಡೆವಿಲ್ ಡಿಸೆಂಬರ್ 11 ರಂದು ಬಿಡುಗಡೆಯಾಗಿದೆ, ಕರ್ನಾಟಕದಲ್ಲಿ ಸುಮಾರು 90% ಸಿಂಗಲ್ ಸ್ಕ್ರೀನ್‌ಗಳನ್ನು ಚಿತ್ರಕ್ಕೆ ನಿಗದಿಪಡಿಸಲಾಗಿದೆ. ಶ್ರೀ ಜೈಮಠ ಪ್ರೊಡಕ್ಷನ್ಸ್‌ನ ಸುಪ್ರೀತ್ ಮತ್ತು ಬಿಕೆ ಗಂಗಾಧರ್ ವಿತರಣೆಯನ್ನು ನಿರ್ವಹಿಸುತ್ತಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: 946 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇದನ್ನು ಮಿಸ್ ಮಾಡದೇ ಓದಿ: ಪತಿ-ಪತ್ನಿಯರಿಗೆ ಅತ್ಯುತ್ತಮ ಯೋಜನೆ ರೂ 2 ಲಕ್ಷ ಠೇವಣಿಗೆ ಸಿಗಲಿದೆ ರೂ.90 ಸಾವಿರ ಬಡ್ಡಿ!
ಈ ನಡುವೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು ರಿಲೀಸ್ ಆಗಿ ಅಬ್ಬರಿಸುತ್ತಿದೆ. ಏಕಪರದೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಹುತೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ನೋಡಿ ಬಂದ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಇತ್ತ ಅವರ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಮಾಸ್ ಡೈಲಾಗ್, ಟ್ವಿಸ್ಟ್ಗಳನ್ನು ಒಳಗೊಂಡ ಕಥೆಗಳ ಮೂಲಕ ಫ್ಯಾನ್ಸ್ಗೆ ಮಿಲನ ಪ್ರಕಾಶ್ ಖುಷಿ ನೀಡಿದ್ದಾರೆ. ಈ ಚಿತ್ರವನ್ನು ಫ್ಯಾನ್ಸ್ ಹೆಚ್ಚು ಖುಷಿಯಿಂದ ನೋಡುತ್ತಿದ್ದಾರೆ. ‘ನಾವು ಗೆದ್ವಿ’ ಎಂದು ಎಲ್ಲರೂ ಹಾಕಿಕೊಳ್ಳುತ್ತಿದ್ದಾರೆ.
ಇದೆ ವೇಳೆ ಮಾಧ್ಯಮಗಳೊಂದಿಗೆ ಸಹೋದರ ದಿನಕರ್ ತೂಗುದೀಪ್ ಅವರು ಮಾತನಾಡಿ, ಸಿನಿಮಾ ರಿಲೀಸ್ ವೇಳೆ ದರ್ಶನ್ ಅಭಿಮಾನಿಗಳ ಜೊತೆ ಇರುತ್ತಾರೆ ಅಂತ ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಅದು ಆಗಲಿಲ್ಲ ಅಂತ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಕಾನೂನು ಆದೇಶದ ಮುಂದೆ ಎಲ್ಲರೂ ತಲೆಬಾಗಲೇಬೇಕು. ಅವರು ಜೈಲಿಗೆ ಹೋದರು ಕೂಡ ದರ್ಶನ್ ಅವರಿಗೆ ಆತಂಕ ಇತ್ತು. ಸಿನಿಮಾಗೆ ಯಾವುದೇ ತೊಂದರೆ ಆಗಬಾರದು ಅಂತ ಇತ್ತು. ನನಗೆ ಮತ್ತು ನಮ್ಮ ಅತ್ತಿಗೆಗೆ ಸಿನಿಮಾ ಕುರಿತು ಏನೇನಾಗುತ್ತೋ ಅದನ್ನು ಮಾಡಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಅಂತ ಹೇಳಿದ್ದರು ಎಂದರು.
ಇನ್ನು ದರ್ಶನ್ ಸಿನಿಮಾದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಹಾಗೆ ನಿಜ ಜೀವನದಲ್ಲಿ ಜೈಲಿಂದ ಬಂದಮೇಲೆ ರಾಜಕೀಯಕ್ಕೆ ಬರುತ್ತಾರೆ ಅಂತ ಅಭಿಮಾನಿಗಳು ಕೇಳುತ್ತಿದ್ದಾರೆ ಅಂತ ಕೇಳಿದಾಗ ಅದನ್ನು ಅವರ ಅಭಿಮಾನಿಗಳೇ ನಿರ್ಧರಿಸುತ್ತಾರೆ. ಸೆಲೆಬ್ರಿಟಿಗಳು ಹೇಳಿದಂತೆ ದರ್ಶನ್ ಮಾಡುತ್ತಾರೆ. ದರ್ಶನ್ ರಾಜಕಾರಣಕ್ಕೆ ಬರುತ್ತಾರೆ ಎನ್ನುವುದರ ವಿಚಾರವಾಗಿ ತಮ್ಮನಾಗಿ ನನಗೆ ಮಾಹಿತಿ ಇಲ್ಲ ಅಭಿಮಾನಿಗಳು ಇಷ್ಟಪಟ್ಟರೆ ಅವರು ಏನು ಬೇಕಾದರೂ ಮಾಡುತ್ತಾರೆ. ಅಭಿಮಾನಿಗಳಿಗೋಸ್ಕರನೇ ದರ್ಶನ್ ಇರುವುದು ಅಂತ ರಾಜಕಾರಣಕ್ಕೆ ದರ್ಶನ್ ಎಂಟ್ರಿ ಆಗುವ ಕುರಿತು ಮಾಹಿತಿ ನೀಡಿದರು.
ಅಂದ ಹಾಗೇ Sacnilk ನ ಆರಂಭಿಕ ಅಂದಾಜಿನ ಪ್ರಕಾರ ಡಿಸೆಂಬರ್ 11, 2025 ರಂದು ಅದರ ಮೊದಲ ದಿನ ಸುಮಾರು 3.83 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.
It’s our Diwali’ Darshan’s fans support the release of The Devil












Follow Me